ಫೇಕ್​ ನ್ಯೂಸ್​! ರಫೇಲ್ ವಿಮಾನ ಚಾಲನೆಗೆ ಪಾಕಿಸ್ತಾನಿ ಪೈಲಟ್​ಗಳು ತರಬೇತಿ ಪಡೆದಿದ್ದರಾ?

ಪಾಕಿಸ್ತಾನಕ್ಕೆ ಕತಾರ್ ರಫೇಲ್ ವಿಮಾನವನ್ನು ನೀಡಿದೆ. ಅಲ್ಲದೇ ನವೆಂಬರ್ 2017ರಲ್ಲಿ ಪಾಕಿಸ್ತಾನ ಮೊದಲ ಬ್ಯಾಚಿನ ಪೈಲಟ್‍ಗಳಿಗೆ ರಫೇಲ್ ತರಬೇತಿಯನ್ನು ನೀಡಿದೆ ಎಂದು ವಿದೇಶಿ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು. ಆದರೆ, ರಫೇಲ್ ಯುದ್ಧ ವಿಮಾನ ತರಬೇತಿಯನ್ನು ಪಾಕಿಸ್ತಾನದ ಪೈಲಟ್‍ಗಳ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಹೇಳಿದ್ದಾರೆ.

Sushma Chakre | news18
Updated:April 12, 2019, 7:54 PM IST
ಫೇಕ್​ ನ್ಯೂಸ್​! ರಫೇಲ್ ವಿಮಾನ ಚಾಲನೆಗೆ ಪಾಕಿಸ್ತಾನಿ ಪೈಲಟ್​ಗಳು ತರಬೇತಿ ಪಡೆದಿದ್ದರಾ?
ರಫೇಲ್ ಯುದ್ಧ ವಿಮಾನ
  • News18
  • Last Updated: April 12, 2019, 7:54 PM IST
  • Share this:
ನವದೆಹಲಿ (ಏ.12): ಕತಾರಿ ಏರ್​ಪೋರ್ಸ್​ನ ಪಾಕಿಸ್ತಾನಿ ಪೈಲಟ್​ಗಳಿಗೆ ರಫೇಲ್ ಯುದ್ಧವಿಮಾನ ಚಾಲನೆ ಮಾಡಲು ಫ್ರಾನ್ಸ್​ ತರಬೇತಿ ನೀಡಿದೆ ಎಂಬ ಹೇಳಿಕೆಯನ್ನು ಈ ಹಿಂದೆ ನೀಡಲಾಗಿತ್ತು. ಆದರೆ, ವಾಸ್ತವ ಸಂಗತಿಯೇನೆಂದರೆ, ರಫೇಲ್ ಯುದ್ಧ ವಿಮಾನ ಚಲಾಯಿಸಲು ಫ್ರಾನ್ಸ್​ ಎಂದಿಗೂ ಪಾಕಿಸ್ತಾನಿ ಪೈಲಟ್​ಗಳಿಗೆ ತರಬೇತಿ ನೀಡಿಲ್ಲ ಎಂದು ಭಾರತದ ಫ್ರೆಂಚ್ ರಾಯಭಾರಿ ಅಲೆಕ್ಸಾಂಡರ್​ ಜೀಗ್ಲರ್​ ಸ್ಪಷ್ಟನೆ ನೀಡಿದ್ದಾರೆ.

ಕತಾರ್​ನ ಮೊದಲ ಬ್ಯಾಚ್​ನ ಪೈಲಟ್​ಗಳು 2017ರ ನವೆಂಬರ್​ನಲ್ಲಿ ತರಬೇತಿ ಪಡೆದಿದ್ದರು. ಹಾಗೆ ತರಬೇತಿ ಪಡೆದವರು ಪಾಕಿಸ್ತಾನಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಡಸ್ಸಾಲ್ಟ್​ ವಾಯುಯಾನ ಸಂಸ್ಥೆಯ ಪ್ರಕಾರ, ಕತಾರ್​ 24 ರಫೇಲ್ ಫೈಟರ್​ಗಳ ತರಬೇತಿಗೆ 2019ರ ಫೆಬ್ರವರಿ 6ರಂದು ಯುದ್ಧವಿಮಾನಗಳನ್ನು ಪೂರೈಸಲಾಗಿತ್ತು ಎಂದು ವೈಮಾನಿಕ ಕ್ಷೇತ್ರದ ಕುರಿತಾದ ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿರುವ ainonline.com ವರದಿ ಮಾಡಿತ್ತು. ಈ ಆಧಾರದಲ್ಲಿ ಎಲ್ಲೆಡೆ ಸುದ್ದಿಗಳು ಪ್ರಸಾರವಾಗಿದ್ದವು. ಈ ವರದಿಯನ್ನು ಫ್ರಾನ್ಸ್‌ ರಾಯಭಾರಿ ಅಲ್ಲಗಳೆದಿದ್ದು, ಇದೊಂದು ಸುಳ್ಳು ಕತೆ ಎಂದು ಹೇಳಿದ್ದಾರೆ.

ವೋಟು ಕೊಟ್ರೆ ಕೆಲಸ: ಸುಲ್ತಾನ್​ಪುರ್​ನಲ್ಲಿ ಮುಸ್ಲಿಮ್ ಮತದಾರರಿಗೆ ಮನೇಕಾ ಗಾಂಧಿ ತಾಕೀತು

ಚಂದ್ರಬಾಬು ನಾಯ್ಡು ಹೇಳಿಕೆಯ ಸತ್ಯಾಂಶವೇನು?:
ಇದೇ ರೀತಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶೇ. 30ರಷ್ಟು ಮತಯಂತ್ರಗಳು ಕಾರ್ಯ ನಿರ್ವಹಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಶೇ. 0.1ರಷ್ಟು ಮತಯಂತ್ರಗಳು ಮಾತ್ರ ನಿನ್ನೆಯ ಚುನಾವಣೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಖಚಿತ ಮಾಹಿತಿ ಸಿಕ್ಕಿದೆ.

ಆಂಧ್ರಪ್ರದೇಶದಲ್ಲಿ ನಿನ್ನೆ 175 ವಿಧಾನಸಭಾ ಕ್ಷೇತ್ರ ಮತ್ತು 25 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ತೆಲುಗುದೇಶಂ ಪಾರ್ಟಿ, ವೈಎಸ್​ ಜಗನ್​ ಮೋಹನ್ ರೆಡ್ಡಿ ಅವರ ವೈಎಸ್​ಆರ್​ ಕಾಂಗ್ರೆಸ್​ ಪಾರ್ಟಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಹಾಗೇ, ನಟ ಪವನ್ ಕಲ್ಯಾಣ್​ ಅವರ ಜನಸೇನಾ ಕೂಡ ಉತ್ತಮ ಸ್ಪರ್ಧೆ ನೀಡಿತ್ತು.

ಮತ್ತೆ ಮುನ್ನೆಲೆಗೆ ಬಂದ ಇವಿಎಂ ಯಂತ್ರಗಳ ಸಾಚಾತನದ ಪ್ರಶ್ನೆ; 120 ದೇಶಗಳಲ್ಲಿ ಬ್ಯಾನ್ ಮಾಡಲಾದ ಯಂತ್ರಕ್ಕೆ ಭಾರತದಲ್ಲೇಕೆ ಮನ್ನಣೆ?ಬುರ್ಖಾ ಧರಿಸಿದವರೇ ನಕಲಿ ಮತದಾರರಾ?

ಬುರ್ಖಾ ಹಾಕಿದ ಮಹಿಳೆಯರು ನಕಲಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿಯ ಮುಜಾಫರ್​ನಗರದ ಲೋಕಸಭಾ ಅಭ್ಯರ್ಥಿ ಸಂಜೀವ್ ಬಲ್ಯಾನ್ ವಿವಾದದ ಹೇಳಿಕೆ ನೀಡಿದ್ದರು. ಆದರೆ, ವಾಸ್ತವ ಸಂಗತಿಯೆಂದರೆ, ಚುನಾವಣಾ ಆಯೋಗದ ಅಧಿಕಾರಿಗಳು ಮತ ಚಲಾಯಿಸಲು ಬಂದ ಪ್ರತಿಯೊಬ್ಬ ಮತದಾರರ ಗುರುತಿನ ಚೀಟಿ ಮತ್ತು ವಿವರವನ್ನು ಪರಿಶೀಲಿಸಿಯೇ ಒಳಗೆ ಬಿಡುತ್ತಿದ್ದರು. ಹೀಗಾಗಿ, ಈ ಆರೋಪದಲ್ಲಿ ಹುರುಳಿಲ್ಲ ಎನ್ನಲಾಗಿದೆ.

ಸೂಕ್ಷ್ಮ ವಲಯ ಎಂದೇ ಕರೆಯಲಾಗಿದ್ದ ಮುಜಾಫರ್​ನಗರ ಲೋಕಸಭಾ ಕ್ಷೇತ್ರದಲ್ಲಿ 16 ಲಕ್ಷ ಮತಗಳಿದ್ದವು. ಅದರಲ್ಲಿ 5 ಲಕ್ಷ ಮಹಿಳಾ ಮತದಾರರಿದ್ದರು. ಇಲ್ಲಿ ಬಲ್ಯಾನ್​ ಮತ್ತು ಆರ್​ಜೆಡಿ ಅಭ್ಯರ್ಥಿ ಅಜಿತ್ ಸಿಂಗ್ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು.

First published:April 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ