ಬ್ರೆಜಿಲ್​ನಲ್ಲಿ ಶೀತಗಾಳಿಗೆ ನಲುಗಿದ ಕಾಫಿ (Coffee) ಬೆಳೆ, ಕರ್ನಾಟಕದ ಕಾಫಿಗೆ ಡಿಮ್ಯಾಂಡ್ ಹೆಚ್ಚಾಗುವ ಸಾಧ್ಯತೆ

ಬ್ರೆಜಿಲ್ ವಿಶ್ವದ ಅತಿ ದೊಡ್ಡ ಕಾಫಿ ಉತ್ಪಾದಕ ಮತ್ತು ಮಾರಾಟ ದೇಶ. ಈಗ ಬ್ರೆಜಿಲ್​ನ ಹವಾಮಾನ ವೈಪರೀತ್ಯ ಲಕ್ಷಾಂತರ ಹೆಕ್ಟೇರ್​ ಕಾಫಿ ಬೆಳೆಯನ್ನು ಸರ್ವನಾಶ ಮಾಡಿದೆ. ಇದು ದುರದೃಷ್ಟಕರ ಬೆಳವಣಿಗೆಯಾದರೂ ಭಾರತದ ಕಾಫಿಗೆ ಇದರಿಂದ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

ಬ್ರೆಜಿಲ್​ನಲ್ಲಿ ಕಾಫಿತೋಟ

ಬ್ರೆಜಿಲ್​ನಲ್ಲಿ ಕಾಫಿತೋಟ

 • Share this:
  ಈಗಾಗಲೇ ಬ್ರೆಜಿಲ್(Brazil) ಹವಾಮಾನ ಬದಲಾವಣೆಯನ್ನು ಅನುಭವಿಸುತ್ತಿದೆ. ಅಲ್ಲಿನ ಶೀತ ಗಾಳಿ ಜನರ ನಿದ್ದೆ ಗೆಡಿಸಿದೆ. ಅಲ್ಲದೆ, ಬ್ರೆಜಿಲ್ ವಿಶ್ವದಲ್ಲಿಯೇ ಹೆಚ್ಚು ಕಾಫಿ ಬೆಳೆಯುವ ದೇಶ. ಅಲ್ಲಿ ಈ ಹವಾಮಾನ ಬದಲಾವಣೆ ಕಾಫಿ(Coffee) ಬೆಳೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಅಲ್ಲಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ತಾಪಮಾನ ಅತಿ ಕಡಿಮೆ ಇದ್ದು, ಇದು ಕಾಫಿ ಬೆಳೆಯನ್ನು ಹಾಳು ಮಾಡುತ್ತಿದೆ. ಬ್ರೆಜಿಲ್ನ ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಸಹ ತಾಪಮಾನ ಹೀಗೆಯೇ ಮುಂದುವರೆಯಲಿದ್ದು, ಬರಗಾಲ ಹೆಚ್ಚಾಗುವ ಸಾಧ್ಯತೆ ಇದೆ. ಇದು ಹೀಗೆಯೇ ಮುಂದುವರೆದಲ್ಲಿ ಕಾಫಿ ಬೆಳೆ ನೆಲಕಚ್ಚುವುದು ಸತ್ಯ. ಆದರೆ ಇದು ಭಾರತಕ್ಕೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಇದೆ.

  ಹೌದು, ಬ್ರೆಜಿಲ್ ನಲ್ಲಿ ಕಾಫಿ ಬೆಳೆ ಇಳಿಮುಖವಾಗಿವುದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಳೆಗೆ ಬೇಡಿಕೆ ಜೊತೆಗೆ ಬೆಲೆ ಕೂಡ ಹೆಚ್ಚಾಗಿದೆ. ಇದು ಭಾರತದ ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. ಹೌದು, ಭಾರತದಲ್ಲಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಅಂದರೆ ಅದು ಕರ್ನಾಟಕ. ಭಾರತದ ಶೇಕಡ 71 ರಷ್ಟು ಕಾಫಿ ಬೆಳೆಯನ್ನು ಚಿಕ್ಕಮಗಳೂರಿನಲ್ಲಿ ಬೆಳೆಯಲಾಗುತ್ತದೆ. ಅಲ್ಲಿ ಬೆಳೆಯುವ ಅರೇಬಿಕಾ ಕಳೆದ ಕೆಲ ವರ್ಷಗಳಿಂದ ಬೆಲೆ ಕಾಣದ ಹಿನ್ನಲೆ ಬೆಳೆಗಾರರು ಕಂಗಾಲಾಗಿದ್ದರು. ಆದರೆ ಇದೀಗ ಬ್ರೆಜಿಲ್ ನಲ್ಲಿ ಈ ಬಾರಿ ಹೆಚ್ಚು ಹಿಮಪಾತವಾಗಿದ್ದು ಅಲ್ಲಿನ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದು ಇಲ್ಲಿನ ಕಾಫಿ ಬೆಳೆಗೆ ಬೇಡಿಕೆ ಹೆಚ್ಚಿಸಿದೆ.

  ಸಧ್ಯದ ಹವಾಮಾನ ವರದಿ ಪ್ರಕಾರ ಬ್ರೆಜಿಲ್ನ ಕಾಫಿ ಬೆಳೆಯಲ್ಲಿ ಕಳೆದ ಬಾರಿಗಿಂತ ಶೇಕಡ 18ರಷ್ಟು ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ಮಳೆ ವಿಳಂಬವಾದ ಹಿನ್ನಲೆಯಲ್ಲಿ ನೀರಾವರಿ ಜಲಾಶಯಗಳು ಬರಿದಾಗುತ್ತಿವೆ. ಇವೆಲ್ಲವೂ ಕಾಫಿ ಬೆಳೆಗೆ ಹೊಡೆತ ನೀಡಿದೆ. ಇನ್ನು ಬ್ರೆಜಿಲ್ನ ಈ ತಾಪಮಾನದ ಕಾರಣದಿಂದ ಮುಂದಿನ ವರ್ಷದ ಕಾಫಿ ಬೆಳೆಯ ಮೇಲೂ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗಿದೆ.

  ಇದನ್ನೂ ಓದಿ: Sunday Special Recipe: ಆಂಧ್ರ ಸ್ಟೈಲ್ Spicy Chilli Chicken ಮಾಡುವ ಅತ್ಯಂತ ಸರಳ ವಿಧಾನ ಇಲ್ಲಿದೆ

  ಈಗಾಗಲೇ ನ್ಯೂಯರ್ಕ್ ಸೇರಿದಂತೆ ಹಲವೆಡೆ ಅರೇಬಿಕಾ ಬೆಳೆ ನಷ್ಟವನ್ನು ಅನುಭವಿಸಿದೆ. ಹೀಗಾಗಿ ಕಾಫಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗುತ್ತಿದೆ. ಒಂದೆಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಬೇಡಿಕೆ ಹೆಚ್ಚಿದ್ದರೆ, ಬ್ರೆಜಿಲ್ನಿಂದ ಕಾಫಿ ಸಿಗದಿದ್ದರೆ ಬೇರೆ ಯಾವ ದೇಶದಿಂದ ಸಿಗುತ್ತದೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಅಲ್ಲಿ ಅರೇಬಿಕಾಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದು ಭಾರತದ ಕಾಫಿಗೆ ಸಹ ಬೇಡಿಕೆ ಹೆಚ್ಚಿಸುವಂತೆ ಮಾಡಿದೆ. ಭಾರತದ ಕರ್ನಾಟಕದಲ್ಲಿ ಅರೇಬಿಕಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ಕರ್ನಾಟಕ ಮಾತ್ರವಲ್ಲದೇ ಕೇರಳ ಮತ್ತು ತಮಿಳುನಾಡಿನಲ್ಲಿ ಸಹ ಕಾಫಿ ಬೆಳೆಯನ್ನು ಬೆಳೆಯುವುದರಿಂದ ವಿದೇಶಕ್ಕೆ ರಫ್ತು ಮಾಡಲು ಸಹಾಯವಾಗುತ್ತದೆ.

  ಇನ್ನು ಭಾರತದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ.70 ರಿಂದ 80 ರಷ್ಟನ್ನು ಇಟಲಿ, ರಷ್ಯಾ ಮತ್ತು ಜರ್ಮನಿಗೆ ರಫ್ತು ಮಾಡಲಾಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಈ ಮೂರು ದೇಶಗಳಿಗೆ ಅಲ್ಲದೇ ಬೇರೆ ದೇಶಗಳಿಗೂ ರಫ್ತು ಮಾಡುವ ಸಾಧ್ಯತೆ ಇದೆ. ಅಲ್ಲದೇ ಕಳೆದ ವರ್ಷ ಭಾರತದಲ್ಲಿ 5.15 ಮಿಲಿಯನ್ ಕಾಫಿ ಬ್ಯಾಗ್ಗಳ ಉತ್ಪಾದನೆಯಾಗಿದ್ದರೆ, ಈ ಬಾರಿ 5.45 ಮಿಲಿಯನ್ ಕಾಫಿ ಬ್ಯಾಗ್ಗಳು ಉತ್ಪಾದನೆಯಾಗಿದೆ. ಅಲ್ಲದೇ ಭಾರತದಲ್ಲಿ ಮುಂದಿನ ವರ್ಷ ಶೇಕಡ 5ರಷ್ಟು ಕಾಫಿ ಉತ್ಪಾದನೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

  ಇನ್ನು ಸಧ್ಯ ಮಾರುಕಟ್ಟೆಯಲ್ಲಿ ಅರೇಬಿಕಾ ಪಾರ್ಚ್ಮೆಂಟ್ 50 ಕೆಜಿಗೆ 10 ಸಾವಿರದ 500 ರೂ ಹೆಚ್ಚಳವಾಗಿದೆ. ಪ್ರತಿ ಬಾರಿ ಕೆಲ ಕಾರಣಗಳಿಂದ ಕಾಫಿ ಬೆಳೆಯಲ್ಲಿ ನಷ್ಟ ಉಂಟಾಗುತಿತ್ತು. ಆದರೆ ಈ ಬಾರಿ ಕಾಫಿ ಬೆಳೆಗಾರರು ಲಾಭದ ಸಿಹಿ ಸವಿಯಲಿದ್ದಾರೆ.

  (ಸಂಧ್ಯಾ ಎಂ)
  Published by:Soumya KN
  First published: