1 ಕೋಟಿ ಯುವಜನತೆಗೆ ಉಚಿತ ಸ್ಮಾರ್ಟ್​​​ಫೋನ್​​, ಸರ್ಕಾರಿ ಉದ್ಯೋಗಿಗಳಿಗೂ ಗುಡ್​​ನ್ಯೂಸ್​​ ಕೊಟ್ಟ ಯುಪಿ ಸಿಎಂ

CM Yogi Adityanath: ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ₹3,000 ಕೋಟಿ ಮೊತ್ತದ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ 1 ಕೋಟಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳನ್ನು ನೀಡಲಾಗುತ್ತದೆ.

ಯುಪಿ ಸಿಎಂ ಯೋಗಿ

ಯುಪಿ ಸಿಎಂ ಯೋಗಿ

  • Share this:
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath)​ ರಾಜ್ಯದ ಯುವಜನತೆಗೆ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಯುಪಿಯ ಬರೋಬ್ಬರಿ 1 ಕೋಟಿ ಯುವಜನತೆಗೆ ಸ್ಮಾರ್ಟ್​​ಫೋನ್​​ ವಿತರಿಸುವುದಾಗಿ ಘೋಷಿಸಿದ್ದಾರೆ. ಜೊತೆ ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ 28% DA(Dearness Allowance)  ನೀಡಲಾಗುವುದು ಎಂದು ಸಿಎಂ ಯೋಗಿ ಪ್ರಕಟಿಸಿದ್ದಾರೆ. ಉದ್ಯೋಗಿಗಳ ಭತ್ಯೆಯನ್ನು (ಡಿಎ) ರಾಜ್ಯದಲ್ಲಿ 28% ಕ್ಕೆ ಏರಿಸಲಾಗುವುದು. ಈ ವರ್ಷದ ಜುಲೈನಿಂದ ಜಾರಿಗೆ ಬರುವಂತೆ ಘೋಷಿಸಿದ್ದಾರೆ. ಇದು ರಾಜ್ಯದ 16 ಲಕ್ಷ ಉದ್ಯೋಗಿಗಳಿಗೆ ಮತ್ತು 12 ಲಕ್ಷ ಪಿಂಚಣಿದಾರರಿಗೆ ಲಾಭಕರವಾಗಲಿದೆ.

ಕೇಂದ್ರದ ಸೂಚನೆಗಳ ನಂತರ, ರಾಜ್ಯದಲ್ಲೂ ಸರ್ಕಾರಿ ನೌಕರರ ಭತ್ಯೆಯನ್ನು ಶೇ. 28ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಈ ವರ್ಷ ಜುಲೈನಿಂದ ಜಾರಿಗೆ ಬರಲಿದೆ. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನವನ್ನು ಹೆಚ್ಚಿಸಲಾಗಿದೆ. ಇನ್ನು ರಾಜ್ಯದಲ್ಲಿ 1 ಕೋಟಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ನೀಡುವುದಾಗಿ ಘೋಷಿಸಿದರು ಯುಪಿ ಅಸೆಂಬ್ಲಿಯಲ್ಲಿ ಸಿಎಂ ಯೋಗಿ ಘೋಷಿಸಿದರು.

ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ₹3,000 ಕೋಟಿ ಮೊತ್ತದ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ 1 ಕೋಟಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಕನಿಷ್ಠ 3 ಬಾರಿಯಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಅವರಿಗೆ ಭತ್ಯೆಗಳನ್ನು ನೀಡಲಾಗುವುದು ಎಂದು ಸಿಎಂ ಘೋಷಿಸಿದರು. ವಕೀಲರ ಕಲ್ಯಾಣಕ್ಕಾಗಿ ಶೀಘ್ರದಲ್ಲೇ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದೂ ತಿಳಿಸಿದರು.

ಇದನ್ನೂ ಓದಿ: DA, DR Hike: ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ: ಕರ್ನಾಟಕದ ಉದ್ಯೋಗಿಗಳಿಗೆ ಶೇಕಡ ಎಷ್ಟು ಏರಿಕೆ?

ಕಳೆದ ಐದು ವರ್ಷಗಳಲ್ಲಿ ರಾಜ್ಯದ ತಲಾ ಆದಾಯವು ದ್ವಿಗುಣಗೊಂಡಿದೆ. ದರೋಡೆಕೋರರು ಮತ್ತು ಮಾಫಿಯಾದಿಂದ ವಶಪಡಿಸಿಕೊಂಡ ಆಸ್ತಿಯನ್ನು ಬಡವರು ಮತ್ತು ದಲಿತರಿಗೆ ಮನೆ ನಿರ್ಮಿಸಲು ಬಳಸಲಾಗುವುದು ಎಂದು ಸಿಎಂ ಘೋಷಿಸಿದರು.

ಇದೇ ವೇಳೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣವನ್ನು ಬೆಂಬಲಿಸುತ್ತಿರುವವರಿಗೆ ಸಿಎಂ ಯೋಗಿ ತಿರುಗೇಟು ನೀಡಿದರು. ಕೆಲವರು ನಾಚಿಕೆಯಿಲ್ಲದೆ ತಾಲಿಬಾನ್‌ಗಳನ್ನು ಬೆಂಬಲಿಸುತ್ತಿದ್ದಾರೆ, ಅವರ ಮುಖಗಳನ್ನು ಬಹಿರಂಗಪಡಿಸಬೇಕು. ಅಫ್ಘಾನಿಸ್ತಾನದ ಮೇಲೆ ಆಕ್ರಮಣದ ನಂತರ ಕೆಲವರು ತಾಲಿಬಾನ್ ಅನ್ನು ಬೆಂಬಲಿಸುತ್ತಿದ್ದಾರೆ. ಅಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಯಾವ ನರಕ ತೋರಿಸಲಾಗುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಇದರ ಹೊರತಾಗಿಯೂ ಕೆಲವರು ನಾಚಿಕೆಯಿಲ್ಲದೆ ತಾಲಿಬಾನ್ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: