Free Scheme: ಆಮ್‌ ಆದ್ಮಿಯಿಂದ ಗುಜರಾತ್ ಮತದಾರರಿಗೆ ಉಚಿತ ಕೊಡುಗೆ! ಫ್ರೀ ಸ್ಕೀಮ್‌ನಿಂದ ನಷ್ಟ ಯಾರಿಗೆ?

ಈ ಹಿಂದೆ ಉಚಿತ ಯೋಜನೆಗಳ ದುಬಾರಿ ವೆಚ್ಚದಿಂದಾಗಿ ಆಂಧ್ರಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ದಿವಾಳಿಯ ಅಂಚಿನಲ್ಲಿದ್ದವು. ಇತ್ತೀಚೆಗೆ, ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿ ವಿವಾದಕ್ಕೀಡಾಗಿದೆ. ಹೀಗಾಗಿ ಉಚಿತ ಕೊಡುಗೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗುಜರಾತ್ ವಿಧಾನಸಭಾ ಚುನಾವಣೆಗೆ (Gujarat Assembly Election) ಆಮ್‌ ಆದ್ಮಿ (Aam Admi) ಸಜ್ಜಾಗುತ್ತಿದೆ. ದೆಹಲಿಯ (Delhi) ಬಳಿಕ ಪಂಜಾಬ್‌ನಲ್ಲೂ (Punjab) ಅಧಿಕಾರದ ಗದ್ದುಗೆ ಹಿಡಿದಿರುವ ಆಪ್ ಪಕ್ಷ (AAP Party), ಈಗ ಗುಜರಾತ್‌ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಶತಾಯ ಗತಾಯ ಗುಜರಾತ್ ಗದ್ದುಗೆ ಏರಲೇಬೇಕು ಆತ ಪ್ರಯತ್ನಿಸುತ್ತಿರುವ ಆಮ್ ಆದ್ಮಿ, ಇದೀಗ ಮತದಾರರಿಗೆ (Voters) ಉಚಿತ ಕೊಡುಗೆಯ (Free Scheme) ಆಮಿಷ ಒಡ್ಡಿದೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ (Free Power) ನೀಡುವುದಾಗಿ ಘೋಷಿಸಿದೆ. ಆಮ್ ಆದ್ಮಿಯ ಈ ಉಚಿತ ಘೋಷಣೆ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ. ಪ್ರತಿ ಸಲ ಸರ್ಕಾರ ಬರುವಾಗ ಉಚಿತವಾಗಿ ಮತದಾರರಿಗೆ ಕೊಡುಗೆಗಳನ್ನು ನೀಡುವ ಭರವಸೆ ನೀಡುತ್ತದೆ. ಇದೀಗ ಸರ್ಕಾರಗಳು ನೀಡುವ ಉಚಿತ ಯೋಜನೆಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಉಚಿತ ಯೋಜನೆಗಳನ್ನು ಕೊಡುವುದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗುತ್ತದೆ ಅಂತ ತಜ್ಞರು (Experts) ಹೇಳುತಿದ್ದಾರೆ.

ಹಲವು ಸರ್ಕಾರಗಳಿಂದ ಉಚಿತ ಕೊಡುಗೆ

ಈ ಹಿಂದೆ ಉಚಿತ ಯೋಜನೆಗಳ ದುಬಾರಿ ವೆಚ್ಚದಿಂದಾಗಿ ಆಂಧ್ರಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ದಿವಾಳಿಯ ಅಂಚಿನಲ್ಲಿದ್ದವು. ಇತ್ತೀಚೆಗೆ, ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿ ವಿವಾದಕ್ಕೀಡಾಗಿದೆ.

ಚುನಾವಣೆ ಗೆಲ್ಲಲು ಉಚಿತ ಕೊಡುಗೆಗಳ ಘೋಷಣೆ

ಚುನಾವಣೆ ಗೆಲ್ಲಲು ಹಲವು ಪಕ್ಷಗಳು ದೊಡ್ಡ ಮಟ್ಟದಲ್ಲಿ ಉಚಿತ ಯೋಜನೆಗಳನ್ನು ಘೋಷಿಸುತ್ತಿದೆ. ಇದು ದೇಶದ ಆರ್ಥಿಕತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ವರ್ಷಾನುಗಟ್ಟಲೆ ಉಚಿತ ಯೋಜನೆ ಜಾರಿಯಾಗುತ್ತಿದ್ದರೂ ಬಡವರ ಕಲ್ಯಾಣ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಬಗ್ಗೆ ನ್ಯಾಯಾಲಯಗಳೂ ಗರಂ ಆಗಿವೆ.

ಇದನ್ನೂ ಓದಿ: Savitri Jindal: ಏಷ್ಯಾದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಜೀವನಗಾಥೆ ಇಲ್ಲಿದೆ

ಉಚಿತ ಕೊಡುಗೆಗಳಿಂದ ಸರ್ಕಾರಕ್ಕೆ ನಷ್ಟ

ಉಚಿತ ಯೋಜನೆಗಳ ಕೊಡುಗೆ ಹೆಚ್ಚಾದಂತೆ ಹಲವು ರಾಜ್ಯಗಳು ನಷ್ಟ ಅನುಭವಿಸುತ್ತಿವೆ. ಈ ಪೈಕಿ ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ ರಾಜ್ಯಗಳು ತೀವ್ರ ನಷ್ಟ ಅನುಭವಿಸಿವೆ.

ಉಚಿತ ಕೊಡುಗೆಗೆ ಆರ್ಥಿಕ ತಜ್ಞರ ಆಕ್ಷೇಪ

ಇತ್ತೀಚಿಗೆ ಆಮ್ ಆದ್ಮಿ ಪಕ್ಷವು ಗುಜರಾತ್‌ಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ. ಈ ಸಂದರ್ಭದಲ್ಲಿ, ಪ್ರಮುಖ ರಾಜಕೀಯ ಅರ್ಥಶಾಸ್ತ್ರಜ್ಞ ಗೌತಮ್ ಸೇನ್ ಅವರು ಉಚಿತ ಯೋಜನೆಗಳಿಂದ ಉಂಟಾಗುವ ಆರ್ಥಿಕ ಹೊರೆ ಮತ್ತು ಉಚಿತ ಕೊಡುಗೆಗಳು ಭಾರತೀಯ ಆರ್ಥಿಕತೆಯನ್ನು ಹೇಗೆ ಹಾನಿಗೊಳಿಸುತ್ತಿವೆ ಎಂಬುದನ್ನು ವಿವರಿಸಿದ್ದಾರೆ. ಉಚಿತ ಯೋಜನೆಗಳು ಆರ್ಥಿಕ ಮತ್ತು ಬಜೆಟ್ ಅಸ್ಥಿರತೆಗೆ ಸವಾಲು ಹಾಕುವುದು ಮಾತ್ರವಲ್ಲದೆ ಭಾರತೀಯ ರಾಜಕೀಯ ವ್ಯವಸ್ಥೆಯ ಕಾರ್ಯಚಟುವಟಿಕೆಗಳಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ.

ಇತಿಹಾಸದಲ್ಲೂ ಉಚಿತ ಕೊಡುಗೆಯ ನಿದರ್ಶನ

ಇತಿಹಾಸದಲ್ಲಿ ರೋಮನ್ ಚಕ್ರವರ್ತಿ ನೀರೋ ವಿನಾಶಕಾರಿ ಬೆಂಕಿಯ ನಂತರ ರೋಮನ್ ಜನರಿಗೆ ಉಚಿತ ಧಾನ್ಯವನ್ನು ವಿತರಿಸಿದನು. ಆದರೆ ನೀರೋ ರೋಮನ್ ಸಾಮ್ರಾಜ್ಯದ ಉಳಿದ ಭಾಗವನ್ನು ನಾಶಮಾಡಿ, ಉಚಿತ ಕೊಡುಗೆಯನ್ನು ಘೋಷಿಸಿದ. ಕೊಳ್ಳೆ ಹೊಡೆದ ಸಂಪತ್ತನ್ನು ತನಗಾಗಿ ಇಟ್ಟುಕೊಂಡು ಉಳಿದದ್ದನ್ನು ಹಂಚಿದನು.

ಉಚಿತ ಯೋಜನೆಗಳಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ

ಉಚಿತ ಅಥವಾ ಸಾರ್ವಜನಿಕ ಸಬ್ಸಿಡಿಗಳು ನಾಗರಿಕರ ಅಥವಾ ಬಡವರ ಕಲ್ಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಭ್ರಮೆ ಮಾತ್ರ. ವಾಸ್ತವವಾಗಿ, ಬಹಳಷ್ಟು ಹಣವನ್ನು ವೆಚ್ಚ ಮಾಡುವ ಉಚಿತ ಯೋಜನೆಗಳು ಹಣಕಾಸಿನ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಣಕಾಸಿನ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಅಂತಿಮವಾಗಿ ಜನರ ಹೆಗಲ ಮೇಲೆ ಹೊರೆ ಬೀಳುತ್ತದೆ. ಉಚಿತ ಸಾಮಾಜಿಕ ಕಲ್ಯಾಣ ಹಣಕಾಸು ಕಾರ್ಯಕ್ರಮಗಳ ವೆಚ್ಚವು ಅನೇಕ ರಾಜ್ಯಗಳಲ್ಲಿ ಪ್ರಮುಖ ಸಮಸ್ಯೆಯಾಗಿದೆ

ಉಚಿತ ಯೋಜನೆಗಳಿಂದ ಪಂಜಾಬ್‌ನಲ್ಲಿ ಸಮಸ್ಯೆ

ಪಂಜಾಬ್ ನಲ್ಲಿ ಶಿಕ್ಷಣ ಸಬ್ಸಿಡಿಗಳು ರಾಜ್ಯದ ಖಜಾನೆಗೆ ಭಾರಿ ಹೊರೆಯಾಗಿ ಪರಿಣಮಿಸಿವೆ. ಪಂಜಾಬ್‌ನ ಒಟ್ಟು ಆದಾಯದ 16% ಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಈ ಅಭ್ಯಾಸವು ದೀರ್ಘಾವಧಿಯ ಬೆಳವಣಿಗೆಗೆ ಅಗತ್ಯವಾದ ಬಂಡವಾಳ ಹಂಚಿಕೆಯನ್ನು ಕಡಿಮೆ ಮಾಡುತ್ತದೆ. ಇದು ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ತಮಿಳುನಾಡು, ಗುಜರಾತಲ್ಲೂ ಉಚಿತ ಕೊಡುಗೆಯ ಸಂಕಷ್ಟ

ಇತ್ತ ತಮಿಳುನಾಡಲ್ಲೂ ಕೈಗಾರಿಕೆಗಳಿಗೆ ಉಚಿತ ಕೊಡುಗೆ ನೀಡಿದ್ದರಿಂದ ಸಮಸ್ಯೆಯಾಗಿತ್ತು.  ಗುಜರಾತ್‌ನಲ್ಲಿ ಸುಮಾರು 50% ಹೆಚ್ಚು, ಪಂಜಾಬ್ ತಮಿಳುನಾಡು ಗೃಹಬಳಕೆದಾರರಿಗೆ ಸಬ್ಸಿಡಿಗಳ ನೀತಿಯಿಂದಾಗಿ ಎರಡೂ ರಾಜ್ಯಗಳು ಗಣನೀಯ ಸಾಲವನ್ನು ಹೊಂದಿವೆ.

ಬಜೆಟ್ ಮೇಲೆ ಕೆಟ್ಟ ಪರಿಣಾಮ

ಉಚಿತ ಯೋಜನೆಗಳು ಮತ್ತು ಸಬ್ಸಿಡಿಗಳು ಬಜೆಟ್ ಹಂಚಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಇದು ಅತ್ಯಂತ ಸಮಸ್ಯಾತ್ಮಕವಾಗಿದೆ. ಭವಿಷ್ಯದ ಬೆಳವಣಿಗೆಗಾಗಿ ಪ್ರಸ್ತುತ ಬಂಡವಾಳವನ್ನು ಹೂಡಿಕೆಯಾಗಿ ಬಳಸುವುದು ವ್ಯಕ್ತಿಗೆ ಪ್ರಯೋಜನವನ್ನು ನೀಡುತ್ತದೆಯೇ ಅಥವಾ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾರತವನ್ನು ಸಶಕ್ತಗೊಳಿಸುವುದೇ? ಎಂಬುದು ಪ್ರಶ್ನೆಯಾಗಿದೆ.

ಇದನ್ನೂ ಓದಿ: Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ

ಭಾರತವು ತನ್ನ ನೆರೆಯ ಪ್ರತಿಸ್ಪರ್ಧಿ ಚೀನಾದ ಮಟ್ಟವನ್ನು ತಲುಪಲು ಆಶಿಸಿದರೆ  10 ಟ್ರಿಲಿಯನ್ ಡಾಲರ್ ಮಾನದಂಡವನ್ನು ತಲುಪುವ ನಿರೀಕ್ಷೆಯಲ್ಲಿದ್ದರೆ, ಹಲವೆಡೆ ಉದ್ಭವಿಸುವ ಒತ್ತಡವನ್ನು ನಿವಾರಿಸುವುದು ಅನಿವಾರ್ಯವಾಗಿದೆ. ವಿವೇಚನಾರಹಿತ ಉಚಿತ ಯೋಜನೆಗಳು ಮತ್ತು ಕಲ್ಯಾಣ ಸಬ್ಸಿಡಿಗಳಿಂದಾಗಿ ರಾಜ್ಯಗಳು ದಿವಾಳಿಯಾಗಿದೆ. ಇದು ಕೇಂದ್ರ-ರಾಜ್ಯಗಳ ನಡುವೆ ವಿಭಜನೆಯ ಅಸಮಾಧಾನವನ್ನು ಹೆಚ್ಚಿಸಿದೆ.
Published by:Annappa Achari
First published: