ನವ ದೆಹಲಿ (ಜನವರಿ 19); ವಿದ್ಯಾರ್ಥಿಗಳಿಗೆ ಉಚಿತ ಬಸ್ ಸವಾರಿ, ನಗರದ ಮಹಿಳೆಯರ ಸುರಕ್ಷತೆಗಾಗಿ "ಮೊಹಲ್ಲಾ ಮಾರ್ಷಲ್" ಗಳನ್ನು ನಿಯೋಜಿಸುವುದು ಸೇರಿದಂತೆ 10 ಭರವಸೆಗಳನ್ನು ಪಟ್ಟಿ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಕುರಿತ "ಗ್ಯಾರಂಟಿ ಕಾರ್ಡ್" ಅನ್ನು ಇಂದು ರಾಷ್ಟ್ರ ರಾಜಧಾನಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಕೇಜ್ರಿವಾಲ್ ನೀಡಿರುವ 10 ಭರವಸೆಗಳ ಪಟ್ಟಿಯಲ್ಲಿ 200 ಯೂನಿಟ್ವರೆಗೆ ಉಚಿತ ಕರೆಂಟ್, ಉಚಿತ ಆರೋಗ್ಯ ಸೌಲಭ್ಯಗಳು, ಎರಡು ಕೋಟಿ ಸಸಿಗಳನ್ನು ನೆಡುವುದು, ಯಮುನಾ ನದಿಯನ್ನು ಸ್ವಚ್ಚಗೊಳಿಸುವುದು, ಮುಂದಿನ ಐದು ವರ್ಷಗಳಲ್ಲಿ ದೆಹಲಿಯ ಮಾಲಿನ್ಯವನ್ನು ಕಡಿಮೆ ಮಾಡುವ ಯೋಜನೆ" ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ.
ನವ ದೆಹಲಿಯಲ್ಲಿ ಇಂದು ಭರವಸೆ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿರುವ ಅರವಿಂದ ಕೇಜ್ರಿವಾಲ್, “ನಾನು ದೆಹಲಿ ಜನರಿಗೆ 10 ಗ್ಯಾರಂಟಿ ನೀಡುತ್ತಿದ್ದೇನೆ. ಇದು ಪ್ರಣಾಳಿಕೆ ಅಲ್ಲ. ನಾವು ಇನ್ನೂ 7 ರಿಂದ 10 ದಿನಗಳಲ್ಲಿ ಸಮಗ್ರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ. ಈ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ನಿರ್ದಿಷ್ಟವಾಗಿ ಇತರರಿಗೆ ಸಹಾಯಕಾರಿಯಾಗುವ ಅನೇಕ ಸೌಲಭ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, 11,000 ಸಾವಿರ ನೂತನ ಬಸ್ಸುಗಳನ್ನು ರಸ್ತೆಗಿಳಿಸಲಾಗುವುದು, ಮೆಟ್ರೋ ನೆಟ್ವರ್ಕ್ ಉದ್ದವನ್ನು 500 ಕಿಮೀ ಹೆಚ್ಚಿಸಲಾಗುವುದು” ಎಂದು ತಿಳಿಸಿದ್ದಾರೆ.
"ನಮ್ಮ ಹಲವು ಯೋಜನೆಗಳು ಮಾರ್ಚ್ 31 ರವರೆಗೆ ಮಾತ್ರ ಇರುತ್ತದೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ, ಆದ್ದರಿಂದ ಮುಂದಿನ ಐದು ವರ್ಷಗಳವರೆಗೆ ಈ ಯೋಜನೆಗಳು ಮುಂದುವರಿಯುತ್ತವೆ ಎಂದು ನಾನು ಭರವಸೆ ನೀಡುತ್ತಿದ್ದೇನೆ. ಅಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನದ ಇಪ್ಪತ್ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸೇವೆ ಮುಂದುವರಿಯುತ್ತದೆ ಮತ್ತು 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ” ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಮೊದಲ ಬಾರಿಗೆ ಮುಸ್ಲಿಮೇತರರಿಗೂ ಬಾಗಿಲು ತೆಗೆದ ನಗರದ 170 ವರ್ಷದ ಐತಿಹಾಸಿಕ ಮೋದಿ ಮಸೀದಿ; ದಾಖಲಾಯ್ತು ಹೊಸ ಇತಿಹಾಸ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ