• Home
  • »
  • News
  • »
  • national-international
  • »
  • Report: ಭಾರತದ ವಂಚಕರಿಂದ $10 ಶತಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಅಮೆರಿಕನ್ನರು

Report: ಭಾರತದ ವಂಚಕರಿಂದ $10 ಶತಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಅಮೆರಿಕನ್ನರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ವಂಚಕರಿಂದ ಅಮೆರಿಕಾದ ನಿವಾಸಿಗಳು $10 ಶತಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ; ವರದಿ

  • Trending Desk
  • 3-MIN READ
  • Last Updated :
  • Share this:

ಯುಎಸ್ ನಾಗರಿಕರು (US Citizens) $10 ಶತಕೋಟಿಗಿಂತ ಹೆಚ್ಚು ಹಣವನ್ನು ಕಳೆದುಕೊಂಡಿದ್ದು, 2022 ರಲ್ಲಿ ಭಾರತದಿಂದ (India) ಕಾರ್ಯನಿರ್ವಹಿಸುತ್ತಿರುವ ಫಿಶಿಂಗ್ ಗ್ಯಾಂಗ್‌ಗಳು (Fishing Gang) ಮತ್ತು ವಂಚಕರು (Fraudsters) ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಹಣ ಕಳೆದುಕೊಂಡವರಲ್ಲಿ ಹೆಚ್ಚಿನವರು ವಯಸ್ಸಾದವರಾಗಿದ್ದು ಕಳೆದ ಎರಡು ವರ್ಷಗಳಲ್ಲಿ ಸುಮಾರು $3 ಶತಕೋಟಿಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಡೇಟಾ ತೋರಿಸುತ್ತದೆ ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ.


ಅಕ್ರಮ ಕಾಲ್ ಸೆಂಟರ್ ನಡೆಸಿ ಹಣ ಲಪಟಾಯಿಸುವ ವಂಚಕರು


ಭಾರತದಲ್ಲಿ ಅಕ್ರಮ ಕಾಲ್ ಸೆಂಟರ್‌ಗಳನ್ನು ನಡೆಸುತ್ತಿರುವ ವಂಚಕರು ತಾಂತ್ರಿಕ ಬೆಂಬಲ ಹಾಗೂ ಇನ್ನಿತರ ನೆರವನ್ನು ನೀಡುವ ನೆಪದಲ್ಲಿ ಯುಎಸ್ ಮೂಲದ ಹಿರಿಯ ನಾಗರಿಕರನ್ನು ಗುರಿಯಾಗಿರಿಸಿಕೊಂಡು ವಂಚನೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.


ಕಳೆದ 11 ತಿಂಗಳುಗಳಲ್ಲಿ ಇಂಟರ್ನೆಟ್ ಅಥವಾ ಕಾಲ್ ಸೆಂಟರ್ ಸಂಬಂಧಿತ ವಂಚನೆಯ ಮೂಲಕ ಅಮೆರಿಕನ್ನರು $10.2 ಬಿಲಿಯನ್ ಕಳೆದುಕೊಂಡಿದ್ದಾರೆ ಎಂಬುದು ವರದಿಯಾಗಿದೆ.


ಸಿಸ್ಟಮ್‌ಗಳಲ್ಲಿ ಲೋಪದೋಷವಿದೆ ಅಥವಾ ಇನ್ನಾವುದಾದರೂ ಕಾರಣ ತಿಳಿಸಿ ಅಮೆರಿಕಾದಲ್ಲಿ ನೆಲೆಸಿರುವ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡಿರುವ ಈ ವಂಚಕರ ಜಾಲ ಅಮಾಯಕರನ್ನು ಗುರಿಯಾಗಿಸಿ ವಂಚನೆ ನಡೆಸುತ್ತಿದೆ ಎಂಬುದು ವರದಿಯಾಗಿದೆ.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Elon Musk: ಅಮೆರಿಕಾ ಅಧ್ಯಕ್ಷರಾಗ್ತಾರಂತೆ ಎಲಾನ್ ಮಸ್ಕ್! ಭವಿಷ್ಯ ನುಡಿದ ರಷ್ಯಾದ ಮಾಜಿ ಅಧ್ಯಕ್ಷ


ಕಾಲ್‌ಸೆಂಟರ್ ನಡೆಸುವ ಮೂವರ ಬಂಧನ


ಇದೇ ರೀತಿಯ ಘಟನೆಗಳು ಈ ಹಿಂದೆ ಕೂಡ ವರದಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕಳೆದುಕೊಂಡ ಒಟ್ಟುಮೊತ್ತ $ 6.9 ಬಿಲಿಯನ್ ಮೊತ್ತದಲ್ಲಿ 47% ಏರಿಕೆಯನ್ನು ಕಂಡಿದೆ ಎಂದು ವರದಿಯಾಗಿದೆ.


ಈ ತಿಂಗಳ ಆರಂಭದಲ್ಲಿ ದೆಹಲಿ ಪೊಲೀಸ್ ಅಧಿಕಾರಿಗಳು ರಾಜಧಾನಿಯಲ್ಲಿ ಕಾನೂನುಬಾಹಿರ ಕಾಲ್ ಸೆಂಟರ್‌ಗಳನ್ನು ನಡೆಸುತ್ತಿರುವ ಮೂವರನ್ನು ಬಂಧಿಸಿದ್ದಾರೆ.


ಈ ವಂಚಕರು ಯುಎಸ್‌ನಲ್ಲಿ ನೆಲೆಸಿರುವ ಹಿರಿಯ ನಾಗರಿಕರ ಸಿಸ್ಟಮ್‌ಗಳ ದೋಷಗಳಿಗೆ ತಾಂತ್ರಿಕ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ಅಲ್ಲಿನ ಹಿರಿಯ ನಾಗರಿಕರನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ದೆಹಲಿ ಪೊಲೀಸರ ಕಾರ್ಯಾಚರಣೆ


ಮಿಂಚಿನ ಕಾರ್ಯಾಚರಣೆಯ ಮೂಲಕ ಪೊಲೀಸರು ವಂಚಕರನ್ನು ಸೆರೆಹಿಡಿಯಲು ರಾತ್ರಿವೇಳೆಯಲ್ಲೂ ದಾಳಿ ನಡೆಸಿದ್ದು, ಮೂವರು ಆರೋಪಿಗಳು ದೆಹಲಿಯಲ್ಲಿ ಸೆರೆ ಸಿಕ್ಕಿದ್ದಾರೆ ಹಾಗೂ ಅವರ ಸಹಚರರಲ್ಲಿ ಒಬ್ಬರು ಕೆನಡಾದ ಕಾನೂನು ಜಾರಿ ಸಂಸ್ಥೆಯ ನೆರವಿನಿಂದ ಟೊರೆಂಟೊ ಹಾಗೂ ಮತ್ತೊಬ್ಬ ಯುಎಸ್‌ನ ನ್ಯೂಜೆರ್ಸಿಯಿಂದ ಎಫ್‌ಬಿಐಗೆ ಸೆರೆಸಿಕ್ಕಿದ್ದಾರೆ ಎಂಬುದು ತಿಳಿದು ಬಂದಿದೆ.


ಯುಎಸ್‌ಗೆ ನಷ್ಟವಾದ ಆದಾಯ


ಯುಎಸ್ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ 2012 ಮತ್ತು 2020 ರ ನಡುವೆ ಇಂತಹ ವಂಚನೆಗಳಿಗೆ ತುತ್ತಾದ 20,000 ಕ್ಕೂ ಹೆಚ್ಚು ಜನರಿದ್ದು, ಇದರಿಂದಾಗಿ ಅಮೆರಿಕಕ್ಕೆ $ 10 ಮಿಲಿಯನ್ ಆದಾಯ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Business Idea: ಕೆಲಸದ ಜೊತೆಯೇ ಈ ಬ್ಯುಸಿನೆಸ್​ ಆರಂಭಿಸಿ, ವರ್ಷಪೂರ್ತಿ ಕೈ ತುಂಬಾ ಕಾಸು ಸಿಗುತ್ತೆ!


ಭಾರತದ ರಾಯಭಾರ ಕಚೇರಿಯಲ್ಲಿ ಖಾಯಂ ಪ್ರತಿನಿಧಿ


ಭಾರತದಿಂದ ವರದಿಯಾಗಿರುವ ವಂಚನೆಗಳ ಈ ಏರಿಕೆಯಿಂದಾಗಿ, ಹೊಸದಿಲ್ಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ಎಫ್‌ಬಿಐ ಖಾಯಂ ಪ್ರತಿನಿಧಿಯನ್ನು ನಿಯೋಜಿಸಿದೆ.


ಇದರೊಂದಿಗೆ, ಸಿಬಿಐ, ಇಂಟರ್‌ಪೋಲ್ ಮತ್ತು ದೆಹಲಿ ಪೊಲೀಸರೊಂದಿಗೆ ಕೆಲಸ ಮಾಡುವ ಮೂಲಕ ಇಂತಹ ಅಪರಾಧಗಳನ್ನು ತಡೆಯುವ ಗುರಿಯನ್ನು FBI ಹೊಂದಿದೆ ಎಂದು ಸುದ್ದಿ ಪತ್ರಿಕೆ ವರದಿ ಮಾಡಿದೆ.


ನಿರಂತರವಾಗಿ ಸಂತ್ರಸ್ತರನ್ನು ವಂಚಿಸುತ್ತಿರುವ ವಂಚಕರು


FBI ನ ವೆಬ್‌ಸೈಟ್‌ನಲ್ಲಿ ವರದಿಯಾದ ಮಾಹಿತಿಗಳ ಅನ್ವಯ ಪ್ರಣಯ ಸಂಬಂಧಿತ ವಂಚನೆಗಳು 2021 ರಲ್ಲಿ ಸಂತ್ರಸ್ತರಿಗೆ ಸುಮಾರು ₹ 8,000 ಕೋಟಿ ಮತ್ತು ಈ ವರ್ಷದ ಕೊನೆಯ 11 ತಿಂಗಳಲ್ಲಿ ₹ 8,000 ಕೋಟಿ ನಷ್ಟಕ್ಕೆ ಕಾರಣವಾಯಿತು ಎಂದು ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿರುವ ಅಧಿಕಾರಿ ಸುಹೇಲ್ ದೌಡ್ ಮಾಧ್ಯಮಗಳಿಗೆ ವರದಿ ಮಾಡಿದ್ದಾರೆ.

Published by:Sumanth SN
First published: