Fraud Case: ಸೆಲೆಕ್ಟ್ ಆಗಿದ್ದು ಒಬ್ಬ, ಕೆಲಸ ಮಾಡಿದ್ದು ಮತ್ತೊಬ್ಬ..! ಪೊಲೀಸ್ ಮಾವನ ಸಖತ್ ಸ್ಟೋರಿ

ಅನಿಲ್ ಮತ್ತು ಸುನೀಲ್‌ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರೂ 12 ನೇ ತರಗತಿಯಲ್ಲಿದ್ದಾಗಿನಿಂದಲೂ ಒಬ್ಬರಿಗೊಬ್ಬರು ಪರಿಚಯಸ್ಥರು ಎಂದೂ ತನಿಖೆ ವೇಳೆ ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

ಉತ್ತರ ಪ್ರದೇಶದಲ್ಲಿ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಕುತೂಹಲಕಾರಿ ಪ್ರಕರಣವೊಂದರಲ್ಲಿ, 'ಅನಿಲ್ ಕುಮಾರ್' ಎಂಬ ವ್ಯಕ್ತಿ 2016 ರಿಂದ ಉತ್ತರ ಪ್ರದೇಶದ ಮುಜಾಫರ್‌ನಗರದ ಗ್ರಾಮವೊಂದರ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಅದೇ 'ಅನಿಲ್ ಕುಮಾರ್' ಮೊರಾದಾಬಾದ್ ಜಿಲ್ಲೆಯಲ್ಲಿ ಪೊಲೀಸನಾಗಿಯೂ ಕೆಲಸ ಮಾಡುತ್ತಿದ್ದಾರೆ. ಅದು ಹೇಗೆ..? ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ಅಂತೀರಾ..? ಎಸ್‌ಎಚ್‌ಒ ಸತ್ಯೇಂದ್ರ ಸಿಂಗ್ ಕೆಲವು ದಿನಗಳ ಹಿಂದೆ ‘ಅನಿಲ್ ಕುಮಾರ್’ರನ್ನು ಕರೆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಡಯಲ್ 112 ಘಟಕದ ಸಾರ್ವಜನಿಕ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಯೊಂದಿಗೆ ಕೆಲಸ ಮಾಡುತ್ತಿದ್ದರು.


ಅನಿಲ್ ಕುಮಾರ್ ಎಂಬ ಹೆಸರಿನ ಟ್ಯಾಗ್‌ ಹಾಕಿಕೊಂಡು, ಪೊಲೀಸ್‌ ಸಮವಸ್ತ್ರದಲ್ಲಿ ಬಂದ ಪೊಲೀಸ್‌ ಅಧಿಕಾರಿ, ಪಿಆರ್‌ವಿ ಡ್ರೈವರ್‌ನೊಂದಿಗೆ SHO ಕಚೇರಿಯನ್ನು ತಲುಪಿದರು. ಅ ವೇಳೆ ಎಸ್‌ಎಚ್‌ಒ ಸತ್ಯೇಂದ್ರ ಸಿಂಗ್, ನೀವು ಎಲ್ಲಿಂದ ಬಂದಿದ್ದೀರಿ, ನಿಮ್ಮ ತಂದೆ ಯಾರು ಎಂದು ಕೇಳಿದಾಗ ಪೊಲೀಸ್‌ ಸಮವಸ್ತ್ರದಲ್ಲಿದ್ದ ಆತ ತಾನು ಮುಜಾಫರ್‌ನಗರದವನು. ಬರೇಲಿ ಪೊಲೀಸ್ ಲೈನ್ಸ್‌ನಲ್ಲಿ ತರಬೇತಿ ಪಡೆದ ನಂತರ 2011 ರಲ್ಲಿ ಪೊಲೀಸ್ ಸಿಬ್ಬಂದಿಯಾದೆ ಮತ್ತು ತಂದೆಯ ಹೆಸರು ಸುಖ್ಪಾಲ್ ಸಿಂಗ್ ಎಂದಿದ್ದಾನೆ. ಆದರೆ, ಬರೇಲಿಯಲ್ಲಿ ಎಲ್ಲಿ ತಮ್ಮ ತರಬೇತಿಯನ್ನು ಪಡೆದೆ ಎಂಬುದನ್ನು ನೆನಪಿಸಿಕೊಳ್ಳುವಲ್ಲಿ ವಿಫಲರಾದರು. ಇದರಿಂದ ಅನುಮಾನಗೊಂಡ ಪೊಲೀಸರು ಈ ವಂಚನೆ ಪ್ರಕರಣವನ್ನು ಭೇದಿಸಿದರು.


ಇದನ್ನೂ ಓದಿ:Karnataka Unlock 2.O: ಬೆಂಗಳೂರಲ್ಲಿ ಬೆಳಗ್ಗೆ ಬಸ್​ ಬಂದಿದ್ದೇ ಲೇಟು;​ ಮೆಟ್ರೋ ಕಡೆ ಸುಳಿಯದ ಜನ; ಉಳಿದ ಜಿಲ್ಲೆಗಳಲ್ಲಿ ಉತ್ತಮ ಸಂಚಾರ

ಎಸ್‌ಎಸ್‌ಪಿ ಹೆಸರನ್ನು ನೆನಪಿಸಿಕೊಳ್ಳುವಲ್ಲಿ ವಿಫಲವಾದ ನಂತರ, ‘ಅನಿಲ್’ ವಾಶ್‌ರೂಮ್‌ಗೆ ಹೋಗುತ್ತೇನೆ ಎಂದು ಹೇಳಿ ಹೊರಟುಹೋದ. ಪೊಲೀಸರು, ನಂತರ ದಾಖಲೆಗಳನ್ನು ಪರಿಶೀಲಿಸಿದಾಗ, ದಾಖಲೆಗಳಲ್ಲಿನ ಫೋಟೋಗ್ರಾಫ್‌ ಅವರು ಭೇಟಿಯಾದ ವ್ಯಕ್ತಿಗೆ ಹೊಂದಿಕೆಯಾಗಲಿಲ್ಲ. ಬದಲಾಗಿ, ಅವರು ಭೇಟಿಯಾದ ವ್ಯಕ್ತಿ ವಾಸ್ತವವಾಗಿ ಸುನಿಲ್ ಕುಮಾರ್ ಎಂದು ಕರೆಯಲ್ಪಡುವ ವ್ಯಕ್ತಿ, ಅಲ್ಲದೆ, ಅನಿಲ್ ಅವರ ಸೋದರ ಮಾವ ಎಂಬುದು ಬಯಲಾಯಿತು.


ನಂತರ ಎಸ್‌ಎಚ್‌ಒ ದೂರು ದಾಖಲಿಸಿಕೊಂಡಿದ್ದು, ಅನಿಲ್ ಮತ್ತು ಸುನೀಲ್‌ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರೂ 12 ನೇ ತರಗತಿಯಲ್ಲಿದ್ದಾಗಿನಿಂದಲೂ ಒಬ್ಬರಿಗೊಬ್ಬರು ಪರಿಚಯಸ್ಥರು ಎಂದೂ ತನಿಖೆ ವೇಳೆ ತಿಳಿದುಬಂದಿದೆ.


ಘಟನೆಯ ಹಿಂದಿನ ಕತೆ ಹೀಗಿದೆ..

2016 ರಲ್ಲಿ, ಅನಿಲ್ ಶಿಕ್ಷಕರ ಪರೀಕ್ಷೆಯನ್ನು ಪಾಸ್‌ ಮಾಡಿದಾಗ, ತಾನು ಬಿ.ಎಡ್‌ ಪದವಿ ಪೂರ್ಣಗೊಳಿಸಬಹುದು ಎಂದು ಸುನೀಲ್‌ಗೆ ಪೊಲೀಸ್‌ ಆಗಿ ಕೆಲಸ ಮಾಡಲು ಕೇಳಿಕೊಂಡರು. ಅಲ್ಲದೆ, ಆತ ಅನಿಲ್‌ ಅಲ್ಲ ಎಂದು ಹೇಳಿಕೊಳ್ಳಲು ಮೊರಾದಾಬಾದ್‌ಗೆ ಆತ ವರ್ಗಾವಣೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ, ಅನಿಲ್‌ ಮುಜಾಫರ್‌ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು 2017 ರಲ್ಲಿ ಸುನೀಲ್‌ ಸಹೋದರಿಯನ್ನು ವಿವಾಹವಾದರು. ಅನಿಲ್ ಅವರು ತಮ್ಮ ಸೇವಾ ರಿವಾಲ್ವರ್‌ ಅನ್ನು ಸುನೀಲ್‌ಗೆ ಹಸ್ತಾಂತರಿಸಿದ್ದರು.

ಇದನ್ನೂ ಓದಿ:ಕೋವಿಡ್ ಪರಿಹಾರ ಹಣವನ್ನು ನುಂಗಿದ ಬ್ಯಾಂಕ್ EMI; ಮನೆ ಮಾರುವ ಪರಿಸ್ಥಿತಿಯಲ್ಲಿ ಆಟೋ ಚಾಲಕ..!

ಈ ಹಿನ್ನೆಲೆ ಅಪರಾಧದ ಆರೋಪ ಹಿನ್ನೆಲೆ ಕೇಸ್‌ ದಾಖಲಿಸಲಾಗಿದೆ. ಸಾರ್ವಜನಿಕ ಸೇವಕರಾಗಿ ಅಧಿಕಾರ ವಹಿಸಿಕೊಂಡಂತೆ ನಟನೆ ಮಾಡಿರುವುದು, ಸಾರ್ವಜನಿಕ ಸೇವಕರಾಗದಿದ್ದರೂ ಪೊಲೀಸ್‌ ಸಮವಸ್ತ್ರವನ್ನು ಧರಿಸಿರುವುದು, ಕ್ರಿಮಿನಲ್ ಪಿತೂರಿ ಸೇರಿ ಇತರ ಕೇಸ್‌ ದಾಖಲಿಸಲಾಗಿದೆ.

“ಇಬ್ಬರನ್ನೂ ಬಂಧಿಸಿ ಶನಿವಾರ ಜೈಲಿಗೆ ಕಳುಹಿಸಲಾಗಿದೆ. ಬೇರೊಬ್ಬರು ಅವರಿಗೆ ಸಹಾಯ ಮಾಡಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ನಾವು ತನಿಖೆಯನ್ನು ಮುಂದುವರಿಸುತ್ತೇವೆ. ಮೂಲ ಶಿಕ್ಷಾ ಕಚೇರಿಯಿಂದ ಮಾಹಿತಿ ಸಂಗ್ರಹಿಸಲು ನಾನು ತಂಡವನ್ನು ಮುಜಾಫರ್‌ನಗರಕ್ಕೆ ಕಳುಹಿಸುತ್ತಿದ್ದೇನೆ'' ಎಂದು ಸರ್ಕಲ್ ಅಧಿಕಾರಿ ಅನೂಪ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Published by:Latha CG
First published: