• Home
  • »
  • News
  • »
  • national-international
  • »
  • France: ಫ್ರಾನ್ಸ್‌ನಲ್ಲಿ ಕೋವಿಡ್ 19 ನಿರ್ಬಂಧ ಸಡಿಲ, ಇನ್ಮುಂದೆ ಮಾಸ್ಕ್ ಕಡ್ಡಾಯವಿಲ್ಲ!

France: ಫ್ರಾನ್ಸ್‌ನಲ್ಲಿ ಕೋವಿಡ್ 19 ನಿರ್ಬಂಧ ಸಡಿಲ, ಇನ್ಮುಂದೆ ಮಾಸ್ಕ್ ಕಡ್ಡಾಯವಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊರಗೆ ಹೋಗುವಾಗ ಫೇಸ್ ಮಾಸ್ಕನ್ನು ಧರಿಸುವುದು ಇನ್ನು ಮುಂದೆ ಕಡ್ಡಾಯವಲ್ಲ ಮತ್ತು ಚಿತ್ರಮಂದಿರಗಳು, ಸಂಗೀತ ಕಚೇರಿಗಳು ಮತ್ತು ಕ್ರೀಡಾಕೂಟಗಳಿಗೆ ಪ್ರೇಕ್ಷಕರ ಸಾಮರ್ಥ್ಯದ ಈ ಹಿಂದೆ ವಿಧಿಸಿದ್ದ ಮಿತಿಯ ನಿರ್ಬಂಧವನ್ನು ಸಡಿಲಗೊಳಿಸಲಾಗುವುದು.

  • Share this:

ಇತ್ತೀಚಿನ ಕೋವಿಡ್ ಉಲ್ಬಣ ನಿಯಂತ್ರಿಸಲು ವಿಧಿಸಲಾದ ಹಲವಾರು ನಿರ್ಬಂಧಗಳನ್ನು(Restrictions) ಫ್ರಾನ್ಸ್ (France ) ಬುಧವಾರ ಸಡಿಲಗೊಳಿಸಿದೆ. ದೈನಂದಿನ ಪ್ರಕರಣಗಳಲ್ಲಿ ಇತ್ತೀಚಿನ ಕುಸಿತವು ಕಿಕ್ಕಿರಿದ ಆಸ್ಪತ್ರೆ (Hospital) ಗಳ ಮೇಲಿನ ಒತ್ತಡವನ್ನು ಶೀಘ್ರದಲ್ಲೇ ನಿವಾರಿಸಲಿದೆ ಎಂಬ ಆಶಾಭಾವನೆ ಅಧಿಕಾರಿಗಳಲ್ಲಿದೆ.ಕಳೆದ ತಿಂಗಳು ಕೊರೊನಾವೈರಸ್ ಸೋಂಕು ದಾಖಲೆಯ ಮಟ್ಟಕ್ಕೆ ಏರಿದ್ದು, ಈಗ ತರಾತುರಿಯಲ್ಲಿ ಸಹಜ ಸ್ಥಿತಿಗೆ ಮರಳಲು ಸರ್ಕಾರ ಆಡುತ್ತಿರುವ ಜೂಜು ಇದಾಗಿದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ. ಆದರೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಲಸಿಕೆಗಳು ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಬಲ್ಲದು ಎಂಬ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ. ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಹಿಡಿದು ಚಿತ್ರಮಂದಿರಗಳು ಮತ್ತು ಸಾರ್ವಜನಿಕ ಸಾರಿಗೆಯವರೆಗಿನ ಎಲ್ಲಾ ವ್ಯವಸ್ಥೆಗಳ ಪ್ರವೇಶಕ್ಕಾಗಿ ವ್ಯಾಕ್ಸಿನೇಷನ್ ಪುರಾವೆಯ ಅಗತ್ಯ ಇನ್ನು ಮುಂದೆ ಕಡ್ಡಾಯವಾಗಲಿದೆ.


90%ಕ್ಕಿಂತ ಹೆಚ್ಚು ವಯಸ್ಕರಿಗೆ ಲಸಿಕೆ ನೀಡಲಾಗಿದ್ದು ಹೊಸ ಆರೋಗ್ಯ ಪಾಸ್‌ಗಾಗಿ ಬೂಸ್ಟರ್ ಶಾಟ್‌ಗಳು ಅಥವಾ ಕೋವಿಡ್‌ನಿಂದ ಚೇತರಿಸಿಕೊಂಡ ಪುರಾವೆಗಳ ಅಗತ್ಯವಿದೆ. ಕೋವಿಡ್‌ ನೆಗೆಟಿವ್ ಫಲಿತಾಂಶಗಳನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ ಎಂದೂ ತಿಳಿದುಬಂದಿದೆ.


ಮಾಸ್ಕ್​ ಕಡ್ಡಾಯವಿಲ್ಲ


ಹೊರಗೆ ಹೋಗುವಾಗ ಫೇಸ್ ಮಾಸ್ಕನ್ನು ಧರಿಸುವುದು ಇನ್ನು ಮುಂದೆ ಕಡ್ಡಾಯವಲ್ಲ ಮತ್ತು ಚಿತ್ರಮಂದಿರಗಳು, ಸಂಗೀತ ಕಚೇರಿಗಳು ಮತ್ತು ಕ್ರೀಡಾಕೂಟಗಳಿಗೆ ಪ್ರೇಕ್ಷಕರ ಸಾಮರ್ಥ್ಯದ ಈ ಹಿಂದೆ ವಿಧಿಸಿದ್ದ ಮಿತಿಯ ನಿರ್ಬಂಧವನ್ನು ಸಡಿಲಗೊಳಿಸಲಾಗುವುದು. ಅಂತೆಯೇ, ಮನೆಯಿಂದ ಕೆಲಸ ಮಾಡುವುದು ಇನ್ನು ಮುಂದೆ ಕಡ್ಡಾಯವಲ್ಲ. ಆದರೂ ಇದನ್ನು ಬಲವಾಗಿ ಶಿಫಾರಸು ಮಾಡಲಾಗಿದೆ.


ಇದನ್ನೂ ಓದಿ: University: ಈ ವಿಶ್ವವಿದ್ಯಾಲಯದಲ್ಲಿ ತಿನ್ನುವ ಬಗ್ಗೆಯೇ ಒಂದು ಸ್ನಾತ್ತಕೋತ್ತರ ಪದವಿ ಇದ್ಯಂತೆ!


ಫೆಬ್ರವರಿ 16 ರಂದು ಎರಡನೇ ಹಂತದ ಸಡಿಲೀಕರಣ ನಡೆಯಲಿದ್ದು ಈ ಹಂತದಲ್ಲಿ ಡಿಸೆಂಬರ್‌ನಲ್ಲಿ ಮುಚ್ಚಿದ್ದ ನೈಟ್ ಕ್ಲಬ್‌ಗಳನ್ನು ಪುನಃ ತೆರೆಯಲು ಅನುಮತಿಸಲಾಗುವುದು ಮತ್ತು ಸಂಗೀತ ಕಚೇರಿಗಳು, ಕ್ರೀಡಾಕೂಟಗಳು ಹಾಗೂ ಬಾರ್‌ಗಳಲ್ಲಿ ನಿಂತು ಕಾರ್ಯಕ್ರಮಗಳನ್ನು ನೋಡುವ ಪ್ರದೇಶಗಳಿಗೆ ಮತ್ತೆ ಅನುಮತಿ ನೀಡಲಾಗುವುದು. ಹಾಗೆ, ಫೆಬ್ರವರಿ 16ರಿಂದ ಕ್ರೀಡಾಂಗಣಗಳು, ಚಿತ್ರಮಂದಿರಗಳು ಮತ್ತು ಸಾರ್ವಜನಿಕ ಸಾರಿಗೆಗಳು ಸೇರಿದಂತೆ ಎಲ್ಲಾ ಕಡೆ ಆಹಾರ ಮತ್ತು ಪಾನೀಯಗಳನ್ನು ಸೇವಿಸಲು ಅನುಮತಿ ನೀಡಲಾಗುವುದು.


ಮಂಗಳವಾರ ಪ್ರಕಟವಾದ ಪತ್ರಿಕಾ ಸಂದರ್ಶನದಲ್ಲಿ, ಈ ತಿಂಗಳ ನಂತರ ಅಂದರೆ ಚಳಿಗಾಲದ ವಿರಾಮದ ನಂತರ ಮಾಸ್ಕ್ ಕಡ್ಡಾಯ ಒಳಗೊಂಡಂತೆ ಶಾಲೆಗಳಿಗೆ ವಿಧಿಸಲಾದ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು ಎಂದು ಅಧ್ಯಕ್ಷ ಮ್ಯಾಕ್ರನ್ ಸಲಹೆ ನೀಡಿದರು.


ಓಮಿಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಸಹ ವೈರಸ್‌ನ ಹಿಂದಿನ ತಳಿಗಳಿಗಿಂತ ಕಡಿಮೆ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದೆ.


ಇದನ್ನೂ ಓದಿ: ಫ್ರಾನ್ಸ್​ನ ಶಾಲೆಗಳಲ್ಲಿ ಲಿಂಗಸೂಚಕ ಪದಗಳ ಬಳಕೆ ನಿಷೇಧಕ್ಕೆ ತೀರ್ಮಾನ; ಫ್ರೆಂಚ್ ಭಾಷೆ ಉಳಿಸಲು ಸರ್ಕಾರದ ದಿಟ್ಟ ಹೆಜ್ಜೆ


ಕಳೆದ ಕೆಲವು ದಿನಗಳಿಂದ ಪ್ರಕರಣಗಳ ಪ್ರವೃತ್ತಿಯು ಸ್ವಲ್ಪಮಟ್ಟಿಗೆ ಹಿಮ್ಮುಖವಾಗಿದೆ. 7 ದಿನಗಳ ಹಿಂದಿನ ಸಂಖ್ಯೆಗಳಿಗೆ ಹೋಲಿಸಿದರೆ ದಿನ ಹೋದಂತೆ ಕಡಿಮೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಮಂಗಳವಾರ ಫ್ರಾನ್ಸ್ ಮಾಹಿತಿ ರೇಡಿಯೋದಲ್ಲಿ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟಲ್ ಹೇಳಿದ್ದಾರೆ.


ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ವಾರದ ಹಿಂದೆ 366,179ರಷ್ಟಿದ್ದ ಪ್ರಕರಣಗಳು ಕಳೆದ ಏಳು ದಿನಗಳಲ್ಲಿ 322,256ಕ್ಕೆ ಇಳಿಮುಖವಾಗಿವೆ .


ಕೊರೊನಾ ಕೇಸ್​ ಇಳಿಮುಖ


"ಇದು ತುಂಬಾ ಪ್ರೋತ್ಸಾಹದಾಯಕ ಸುದ್ದಿ" ಎಂದು ಅಟಲ್ ಹೇಳಿದರೆ, ಆದರೆ, ಎಂದು ಅಧಿಕಾರಿಗಳು ತಡವರಿಸುತ್ತಾ ಓಮಿಕ್ರೋನ್, BA.1ನ "ಅತ್ಯಂತ ಸಾಂಕ್ರಾಮಿಕ" ಉಪ-ರೂಪಾಂತರವಾಗಿದೆ. ಇದು ಇತರ ದೇಶಗಳಲ್ಲಿ ರೋಗದ ಹರಡುವಿಕೆಯನ್ನು ಸ್ವಲ್ಪ ವಿಳಂಬಗೊಳಿಸಿರುವಂತೆ ಕಂಡು ಬರುತ್ತಿದೆ. ಹಾಗಾಗಿ "ಜಾಗರೂಕರಾಗಿರಿ" ಎಂದು ಹೇಳಿದರು.


ಇದಲ್ಲದೆ, ಫ್ರಾನ್ಸ್ ಇನ್ನೂ ಸುಮಾರು 3,750 ಕೋವಿಡ್ ರೋಗಿಗಳನ್ನು ತೀವ್ರ ನಿಗಾದಲ್ಲಿ ಹೊಂದಿದೆ, ಇದು ಸರ್ಕಾರದ 3,000ದ ಮಿತಿಗಿಂತ ಹೆಚ್ಚಾಗಿದ್ದು ಪ್ರತಿದಿನ ಆಸ್ಪತ್ರೆಗಳಲ್ಲಿ ಸರಾಸರಿ 261 ಕೋವಿಡ್ ಸಾವುಗಳು ಸಂಭವಿಸುತ್ತಿವೆ .


ನಾವು ಉತ್ತುಂಗವನ್ನು ಅತಿ ಶೀಘ್ರವಾಗಿ ತಲುಪಿರುವುದರಿಂದ ಕುಸಿತವೂ ಶೀಘ್ರವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಅಲೆಯು ಈಗಷ್ಟೇ ಪ್ರಾರಂಭವಾಗಿದೆ. ಹೀಗೆಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮಹಮೂದ್ ಜುರೆಕ್ ಬುಧವಾರದ ಲೆ ಪ್ಯಾರಿಸಿಯನ್‌ನಲ್ಲಿ ಹೇಳಿದರು.

Published by:Pavana HS
First published: