ಫ್ರಾನ್ಸ್​ನ ಶಾಲೆಗಳಲ್ಲಿ ಲಿಂಗಸೂಚಕ ಪದಗಳ ಬಳಕೆ ನಿಷೇಧಕ್ಕೆ ತೀರ್ಮಾನ; ಫ್ರೆಂಚ್ ಭಾಷೆ ಉಳಿಸಲು ಸರ್ಕಾರದ ದಿಟ್ಟ ಹೆಜ್ಜೆ

ಫ್ರೆಂಚ್ ಅಕಾಡೆಮಿಯು ಭಾಷೆಯ ಸಂರಕ್ಷಣೆ ಮತ್ತು ಅದರ ಪ್ರಚಾರವನ್ನು ವಹಿಸಿಕೊಂಡಿದೆ. ಈ ನಿಟ್ಟಿನಲ್ಲಿ ಫ್ರೆಂಚ್ ಭಾಷೆಯನ್ನು ಅಭ್ಯಸಿಸಲು ಮತ್ತು ಅರ್ಥ ಮಾಡಿಕೊಳ್ಳಲು ಈ ರೀತಿಯಾದ ಲಿಂಗ ಸೂಚಕ ಪದಗಳು ಹಾನಿಕಾರಕ ಎಂದು ಹೇಳಿದೆ.

ಫ್ರಾನ್ಸ್​

ಫ್ರಾನ್ಸ್​

  • Share this:
ಫ್ರಾನ್ಸ್ ಸರ್ಕಾರವು ತನ್ನ ಎಲ್ಲಾ ಶಾಲೆಗಳಲ್ಲೂ ಲಿಂಗ ಸೂಚಕ ಪದಗಳ ಬಳಕೆಯನ್ನು ನಿಷೇಧಿಸಲು ನಿರ್ದೇಶಿಸಿದೆ. ಇಲ್ಲದಿದ್ದರೆ ಇದು ಫ್ರೆಂಚ್ ಭಾಷೆಯ ಅಸ್ಥಿತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ವೆಬ್‌ಸೈಟ್‌ನ ಪ್ರಕಾರ, ಈ ತೀರ್ಪನ್ನು ದೇಶದ ಶಿಕ್ಷಣ ಸಚಿವಾಲಯ ಕಳೆದ ವಾರ ಹೊರಡಿಸಿದ್ದು, ಇದು ಪದಗಳ ಕಡೆಯಲ್ಲಿ ಬರುವ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಸೂಚಕ ಪದಗಳ ಬಳಕೆಗೆ ಮುಕ್ತಾಯ ಹಾಡಬೇಕೆಂಬ ಗುರಿ ಹೊಂದಿದೆ. ಅಕಾಡೆಮಿ ಫ್ರಾಂಕೈಸ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿರುವ ಫ್ರೆಂಚ್ ಅಕಾಡೆಮಿಯು ಭಾಷೆಯ ಸಂರಕ್ಷಣೆ ಮತ್ತು ಅದರ ಪ್ರಚಾರವನ್ನು ವಹಿಸಿಕೊಂಡಿದೆ. ಈ ನಿಟ್ಟಿನಲ್ಲಿ ಫ್ರೆಂಚ್ ಭಾಷೆಯನ್ನು ಅಭ್ಯಸಿಸಲು ಮತ್ತು ಅರ್ಥ ಮಾಡಿಕೊಳ್ಳಲು ಈ ರೀತಿಯಾದ ಲಿಂಗ ಸೂಚಕ ಪದಗಳು ಹಾನಿಕಾರಕ ಎಂದು ಹೇಳಿದೆ.

ಫ್ರೆಂಚ್ ಭಾಷೆಯಲ್ಲಿ, ನಾಮಪದಗಳು, ಸರ್ವನಾಮಗಳು ಮತ್ತು ವಿಶೇಷಣಗಳು ಲಿಂಗಸೂಚಕವನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ನೋಡುವುದಾದರೆ, ಫ್ರೆಂಚ್‌ನ ಡಿರಿಜಿಯಂಟ್ಸ್ ಎಂಬ ಪದದ ಅರ್ಥ 'ನಾಯಕರು' ಎಂದಾಗುತ್ತದೆ. ಇದರಲ್ಲಿ ಪುರುಷ ಸೂಚಕ ಧ್ವನಿ ಇದೆ. ಆದ್ದರಿಂದ ಲಿಂಗ ಸೂಚಕ ಪದವನ್ನು ಹೇಳುವ ಭಾಷಣಕಾರರು, ಕಾರ್ಯಕರ್ತರು ಒಂದು ಸಲಹೆ ನೀಡಿದ್ದಾರೆ. ಅದೆನೆಂದರೆ ಪದಗಳು ಮುಗಿಯುವ ಮುನ್ನ ಮಧ್ಯದಲ್ಲಿ ಒಂದು ಬಿಂದುವನ್ನು ಇಟ್ಟು ‘e’ ಎನ್ನುವ ಸಂಕೇತವನ್ನು ಬಳಸಬೇಕು ಎಂದಿದ್ದಾರೆ. ಅಂದರೆ ‘dirigeant.es’ (‘ಡಿರಿಜಿಯಂಟ್. ಸ್’) ಎಂದು ಬಳಸುವಂತೆ ಸೂಚಿಸಿದ್ದಾರೆ. ಆ ಮೂಲಕ ಈ ಪದ ಸೂಚಕ ಕೇವಲ ಪುರುಷರಿಗೆ ಮಾತ್ರ ಅನ್ವಯವಾಗದೆ, ಪುರುಷ ಮತ್ತು ಮಹಿಳೆ ಇಬ್ಬರೂ ಕೂಡ ನಾಯಕರು ಎನ್ನುವ ಅರ್ಥ ಬರುವಂತೆ ಬಳಸಾಗಿದೆ.

ಆದ್ದರಿಂದ, ಮಹಿಳಾ ಹಕ್ಕುಗಳ ಪ್ರತಿಪಾದಕರು ಈ ಅಕ್ಷರಗಳ ಬದಲಾವಣೆಯ ವಿಧಾನವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೂ ‘ಡಿರಿಜಿಯಂಟ್ಸ್ ’ ಮತ್ತು ‘ಡಿರಿಜಿಯಂಟ್. ಸ್’ ಒಂದೇ ಉಚ್ಚಾರಣೆಯನ್ನು ಧ್ವನಿಸುತ್ತಿದೆ.

ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಸರ್ಕಾರದ ಅಡಿಯಲ್ಲಿ ಶಿಕ್ಷಣ ಸಚಿವಾಲಯವು ಈ ಬದಲಾವಣೆ ಬಗ್ಗೆ ತನ್ನ ನಿಲುವು ತಿಳಿಸಿದೆ. ಈ ಬದಲಾವಣೆ ಹೆಚ್ಚು ಗೊಂದಲವನ್ನು ಉಂಟು ಮಾಡುತ್ತದೆ. ಇದರಿಂದ ಫ್ರೆಂಚ್ ಭಾಷೆ ಕಲಿಯಲು ನಿರುತ್ಸಾಹ ಮೂಡುತ್ತದೆ ಎಂದಿದ್ದಾರೆ.

'ಇಂಗ್ಲೀಷ್ ಭಾಷೆಯನ್ನೇ ಹೆಚ್ಚಾಗಿ ಬಳಸುವುದರಿಂದ ಈ ಭಾಷೆ ಬಹುತೇಕ ತನ್ನ ಅಧಿಪತ್ಯ ಸ್ಥಾಪಿಸಿದೆ. ಇದು ಖಂಡಿತವಾಗಿಯೂ ಮತ್ತು ಬಹುಶಃ ಎಂದೆಂದಿಗೂ ಫ್ರೆಂಚ್ ಭಾಷೆಯನ್ನು ಸೋಲಿಸುತ್ತದೆ' ಎಂದು ಮೇಲ್ ಶಿಕ್ಷಣ ಉಲ್ಲೇಖಿಸಿ ಫ್ರೆಂಚ್ ಶಿಕ್ಷಣ ಸಚಿವ ನಥಾಲಿ ಎಲಿಮಸ್ ಅವರು ನಿಷೇಧವನ್ನು ಜಾರಿಗೊಳಿಸಿದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನಮ್ಮ ದೇಶವೂ ಕೂಡ ಭಾಷೆ ಬಳಕೆ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನೋಡಿದೆ. ಹಲವಾರು ರಾಜಕೀಯ ಪಕ್ಷಗಳು ಹಿಂದಿ ಮಾತನಾಡದ ಪ್ರದೇಶದಲ್ಲಿ ಹಿಂದಿಯನ್ನು ಹೇರುತ್ತಿದೆ ಎಂದು ಆರೋಪಿಸುತ್ತಲೇ ಇರುತ್ತವೆ. ಅದರಲ್ಲೂ ದಕ್ಷಿಣದಲ್ಲಿ ಸಾಕಷ್ಟು ರಾಜಕೀಯ ಪಕ್ಷಗಳು ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿವೆ.
First published: