• Home
  • »
  • News
  • »
  • national-international
  • »
  • Covishield: ಕೋವಿಶೀಲ್ಡ್​ ಲಸಿಕೆ ಪಡೆದಿದ್ದರೆ ಫ್ರಾನ್ಸ್​​ಗೆ ಇನ್ಮುಂದೆ ಪ್ರಯಾಣ ಸುಲಭ

Covishield: ಕೋವಿಶೀಲ್ಡ್​ ಲಸಿಕೆ ಪಡೆದಿದ್ದರೆ ಫ್ರಾನ್ಸ್​​ಗೆ ಇನ್ಮುಂದೆ ಪ್ರಯಾಣ ಸುಲಭ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೋವಿಶೀಲ್ಡ್​ ಲಸಿಕೆ ಪಡೆದವರಿಗೆ ಈಗಾಗಲೇ ಪ್ರಪಂಚದ  40 ದೇಶಗಳು ಗಡಿ ಪ್ರವೇಶಿಸಲು ಅನುಮತಿ ನೀಡಿದೆ

  • Share this:

    ನವದೆಹಲಿ (ಜು. 17):  ಜಾಗತಿಕ ಸೋಂಕು ಕೋವಿಡ್​ ವಿರುದ್ಧ ಹೋರಾಟದಲ್ಲಿ ಕೋವಿಶೀಲ್ಡ್​ ಲಸಿಕೆ ಪರಿಣಾಮಕಾರಿಯಾಗಿದೆ. ಭಾರತದಲ್ಲಿ ತಯಾರಿಸಿದ ಈ ಲಸಿಕೆಗೆ  ಪರಿಣಾಮಕಾರಿತ್ವವನ್ನು ವಿದೇಶಗಳು ಕೂಡ  ಒಪ್ಪಿಕೊಂಡಿವೆ. ಇದೇ ಕಾರಣಕ್ಕೆ ಈಗ ಫ್ರಾನ್ಸ್​ ಕೂಡ ಕೋವಿಶೀಲ್ಡ್​ ಲಸಿಕೆ ಪಡೆದ ಪ್ರಯಾಣಿಕರಿಗೆ ತಮ್ಮ ದೇಶ ಪ್ರವೇಶಿಸಲು ಅನುಮತಿ ನೀಡಿದೆ. ಆದರೆ, ಇದೇ ವೇಳೆ ಭಾರತದಲ್ಲಿ ಕಂಡು ಬಂದಿರುವ ಡೆಲ್ಟಾ ರೂಪಾಂತರ ತಳಿ ಬಗ್ಗೆ ಎಚ್ಚರವಹಿಸಿರುವ ಫ್ರಾನ್ಸ್​ ಡೆಲ್ಟಾ ರೂಪಾಂತರದ ಹರಡುವಿಕೆಯನ್ನು ನಿಯಂತ್ರಿಸಲು ಗಡಿ ತಪಾಸಣೆಗಳನ್ನು ಬಿಗಿಗೊಳಿಸುತ್ತಿದೆ ಎಂದು ತಿಳಿಸಿದೆ.


    ಕೋವಿಶೀಲ್ಡ್​ ಲಸಿಕೆ ಪಡೆದವರಿಗೆ ಈಗಾಗಲೇ ಪ್ರಪಂಚದ  40 ದೇಶಗಳು ಗಡಿ ಪ್ರವೇಶಿಸಲು ಅನುಮತಿ ನೀಡಿದೆ. ಇದರಲ್ಲಿ 9 ಯುರೋಪಿಯನ್​ ರಾಷ್ಟ್ರಗಳಿವೆ. ಇತ್ತೀಚೆಗೆ, ಯುರೋಪ್​ "ಗ್ರೀನ್ ಪಾಸ್" ಕಾರ್ಯಕ್ರಮವನ್ನು ಪ್ರಾರಂಭಿಸಿತು, ಈ ಮೂಲಕ ಲಸಿಕೆ ಪಡೆದ ಪ್ರಯಾಣಿಕರಿಗೆ ಯುರೋಪಿನ 27 ದೇಶದ ವಲಯದೊಳಗೆ ಪ್ರಯಾಣಿಸಲು ಅವಕಾಶ ನೀಡಿದೆ.


    ಭಾರತೀಯ ಕೋವಿಡ್​ ಲಸಿಕೆಯನ್ನು ನಾವು ಸ್ವೀಕರಿಸಿದೆ ಎಂದು ಫ್ರಾನ್ಸ್​ ತಿಳಿಸಿದೆ. ಇದೇ ವೇಳೆ ಫ್ರಾನ್ಸ್​ ಚೀನಾ ಹಾಗೂ ರಷ್ಯಾ ಲಸಿಕೆಗೆ ಇನ್ನು ಅನುಮತಿ ನೀಡದಿರುವುದು ಗಮನಾರ್ಹ. ಫ್ರಾನ್ಸ್​ ಪ್ರವೇಶಿಸಲು ಬಯಸುವವರು ಫೈಜರ್, ಬಯೋಟೆಕ್, ಮಾಡರ್ನಾ, ಜಾನ್ಸನ್ ಮತ್ತು ಜಾನ್ಸನ್ ಮತ್ತು ಅಸ್ಟ್ರಾಜೆನೆಕಾ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.
    ಇದೇ ವೇಳೆ ಫ್ರಾನ್ಸ್​, ಬ್ರಿಟನ್, ಸ್ಪೇನ್, ಪೋರ್ಚುಗಲ್, ನೆದರ್ಲ್ಯಾಂಡ್ಸ್, ಗ್ರೀಸ್ ಅಥವಾ ಸ್ಪೇನ್ ನಿಂದ ಲಸಿಕೆ ಪಡೆಯದೇ ಗಡಿ ಪ್ರವೇಶಿಸುವವರು 24 ಗಂಟೆಗಳ ಮುಂಚೆ ಕೋವಿಡ್​ ಪರೀಕ್ಷೆಗೆ ಒಳಗಾಗಿ ನೆಗಟಿವ್​ ವರದಿ ತರುವುದು ಕಡ್ಡಾಯ ಎಂದು ತಿಳಿಸಿದೆ.


    ಇದನ್ನು ಓದಿ: ಪುರುಷರೇ ಇಲ್ನೋಡಿ: ನಿಮ್ಮ ಗಡ್ಡದ ತೊಂದರೆಗಳು, ಅದಕ್ಕೆ ಚಿಕಿತ್ಸೆ ನೀಡುವ ಮಾರ್ಗಗಳು ಹೀಗಿವೆ...


    ಫ್ರಾನ್ಸ್​ ಹೊರತಾಗಿ ಪ್ರಪಂಚದ ಇನ್ನಿತರ ದೇಶಗಳು ಕೂಡ ಕೋವಿಶೀಲ್ಡ್​ ಲಸಿಕೆಗೆ ಪರಿಣಾಮ ಕಾರಿತ್ವಕ್ಕೆ ಒಪ್ಪಿಗೆ ಸೂಚಿಸಿದೆ. ಇದೇ ಹಿನ್ನಲೆ ಕೋವಿ ಶೀಲ್ಡ್​ ಲಸಿಕೆ ಪಡೆದ ಭಾರತೀಯರು ಮುಕ್ತವಾಗಿ ತಮ್ಮ ದೇಶಕ್ಕೆ ಪ್ರವೇಶಿಸಬಹುದು ಎಂದು ತಿಳಿಸಿದೆ. ಆ ದೇಶಗಳ ಪಟ್ಟಿ ಇಂತಿದೆ.


    ಜರ್ಮನಿ, ಆಸ್ಟ್ರಿಯಾ, ಗ್ರೀಸ್​, ಐರ್ಲೆಂಡ್​, ಸ್ಪೇನ್​, ಐಸ್​ ಲ್ಯಾಂಡ್​, ಇಸ್ಟೋನಿಯಾ, ಸ್ವೀಜರ್​ಲ್ಯಾಂಡ್​, ನೆಥರ್​ ಲ್ಯಾಂಡ್​, ಅಫಘಾನಿಸ್ತಾನ, ಆಂಟಿಗೋವಾ ಮತ್ತು ಬರ್ಬುಡಾ, ಅರ್ಜೆಂಟಿನಾ, ಬಹ್ರೇನ್​, ಬಾಂಗ್ಲಾ ದೇಶ, ಭೂತನ್​, ಬ್ರೆಸಿಲ್​, ಕೆನಡಾ, ಡೋಮಿನಿಕಲ್​, ಈಥಿಯೋಪಿಯಾಮ, ಘಾನಾ, ಈಜಿಪ್ಟ್​, ಹಂಗೇರಿಯಾ, ಲೆಬನಾನ್​, ಮಾಲ್ಡೀವ್​​, ಮೊರೊಕೊ, ನೈಜೀರಿಯಾ, ಸೋಮಾಲಿಯಾ,  ದಕ್ಷಿಣ ಆಫ್ರಿಕಾ ಮತ್ತಿತ್ತರ ದೇಶಗಳು


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

    Published by:Seema R
    First published: