Covid-19: ಜೂನ್‌ನಿಂದ ಭಾರತದಲ್ಲಿ ಕೋರೋನಾ 4ನೇ ಅಲೆ..! ಲೇಟೆಸ್ಟ್ ವರದಿ ಏನ್ ಹೇಳುತ್ತೆ?

ಸಂಶೋಧಕರ ಪ್ರಕಾರ, ಭಾರತದಲ್ಲಿ ಕೋವಿಡ್-19 ನಾಲ್ಕನೇ ಅಲೆಯು ಆರಂಭಿಕ ದತ್ತಾಂಶ ಲಭ್ಯತೆ ದಿನಾಂಕವಾದ ಜನವರಿ 30,2020 ರಿಂದ 936 ದಿನಗಳ ನಂತರ ಬರಲಿದೆ ಎಂದು ದತ್ತಾಂಶವು ಸೂಚಿಸುತ್ತದೆ.

ಕೊರೋನಾ ವೈರಸ್.

ಕೊರೋನಾ ವೈರಸ್.

  • Share this:
ಸುಮಾರು ಎರಡು ವರ್ಷಗಳು ಕಳೆದರೂ ಈ ಕೋವಿಡ್-19 (Covid-19) ಸಂಕ್ರಾಮಿಕ ರೋಗದ ಅಟ್ಟಹಾಸ ನಿಲ್ಲುತ್ತಲೇ ಇಲ್ಲ ಎಂದು ಹೇಳಬಹುದು. ಯಾರೊಬ್ಬರ ಊಹೆಗೂ ನಿಲುಕದೆ ಹೊಸ ಹೊಸ ರೂಪಾಂತರಿಗಳಿಂದ ಅಲೆಗಳ ಮೇಲೆ ಅಲೆಗಳು ಬರುತ್ತಲೇ ಇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಎಂದು ಹೇಳಿದ ಓಮಿಕ್ರಾನ್‌ ವೈರಸ್ (Omicron Virus) ಹಾವಳಿಯು ದಿನೇ ದಿನೇ ಕುಸಿಯುತ್ತಿದ್ದು, ಸ್ವಲ್ಪ ಮಟ್ಟಿಗೆ ಜನರು ಭಯವನ್ನು ಬಿಟ್ಟು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವುದರೊಂದಿಗೆ ಮನೆಯಿಂದ ಹೊರಗೆ ಓಡಾಡುವಂತೆ ಆಗಿದೆ. ಅಷ್ಟರಲ್ಲಿಯೇ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ (ಐಐಟಿ-ಕೆ) ಸಂಶೋಧಕರು ಇಲ್ಲೊಂದು ಆಘಾತಕಾರಿ ಸುದ್ದಿಯೊಂದು ಬಿಚ್ಚಿಟ್ಟಿದ್ದಾರೆ ನೋಡಿ. ಅದೇನಪ್ಪಾ ಎಂದರೆ ಭಾರತದಲ್ಲಿ ಜೂನ್‌ನಲ್ಲಿ ನಾಲ್ಕನೇ ಅಲೆ ಶುರುವಾಗಲಿದೆಯಂತೆ ಎಂದು ಭವಿಷ್ಯ ನುಡಿದಿದ್ದಾರೆ.

ಐಐಟಿ-ಕೆ ಸಂಶೋಧಕರು ನಡೆಸಿದ ಸಂಶೋಧನೆಯ ಪ್ರಕಾರ, ಭಾರತವು ಜೂನ್ ತಿಂಗಳ ಮಧ್ಯ ಅಥವಾ ಅಂತ್ಯದಲ್ಲಿ ಕೋವಿಡ್-19 ನಾಲ್ಕನೆಯ ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಮತ್ತು ಈ ಅಲೆಯು ಸುಮಾರು 4 ತಿಂಗಳುಗಳವರೆಗೆ ಹಾಗೆಯೇ ಮುಂದುವರಿಯಲಿದೆ. ಆದರೂ, ಅಲೆಯ ತೀವ್ರತೆಯು ಹೊಸ ರೂಪಾಂತರಗಳ ಉಗಮ, ಲಸಿಕೆ ಸ್ಥಿತಿ ಮತ್ತು ಬೂಸ್ಟರ್ ಡೋಸ್‌ಗಳ ನೀಡುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ವರದಿಯ ಮಾಹಿತಿ ಇದು

ಜಿಂಬಾಬ್ವೆಯ ದತ್ತಾಂಶದ ಆಧಾರದ ಮೇಲೆ ಕಾನ್ಪುರದ ಐಐಟಿಯ ಗಣಿತ ವಿಭಾಗದ ಶಬರಾ ಪರ್ಷದ್‌ ರಾಜೇಶ್ ಭಾಯ್, ಶುಭ್ರಾ ಶಂಕರ ಧರ್ ಮತ್ತು ಶಲಾಬ್ ಈ ಸಂಶೋಧನೆಯ ನೇತೃತ್ವ ವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಐಐಟಿ-ಕೆ ಅಧ್ಯಯನವನ್ನು MedRxiv ನಲ್ಲಿ ಪೂರ್ವ-ಮುದ್ರಣವಾಗಿ ಪ್ರಕಟಿಸಲಾಗಿದೆ ಮತ್ತು ಇನ್ನೂ ಸಮಾನ ಮನಸ್ಕರು ಇದರ ಬಗ್ಗೆ ಯಾವುದೇ ವಿಮರ್ಶೆ ಮಾಡಿಲ್ಲ.

ನಾಲ್ಕನೇ ಕೋವಿಡ್ ಅಲೆ ಭಾರತಕ್ಕೆ ಅಪ್ಪಳಿಸುವುದು ಯಾವಾಗ..?

ಸಂಶೋಧಕರ ಪ್ರಕಾರ, ಭಾರತದಲ್ಲಿ ಕೋವಿಡ್-19 ನಾಲ್ಕನೇ ಅಲೆಯು ಆರಂಭಿಕ ದತ್ತಾಂಶ ಲಭ್ಯತೆ ದಿನಾಂಕವಾದ ಜನವರಿ 30,2020 ರಿಂದ 936 ದಿನಗಳ ನಂತರ ಬರಲಿದೆ ಎಂದು ದತ್ತಾಂಶವು ಸೂಚಿಸುತ್ತದೆ.

ಇದನ್ನೂ ಓದಿ: Coronavirus Vaccine: ಕೊರೋನಾ ವೈರಸ್​ಗೆ ರಷ್ಯಾದಿಂದ ಮೊದಲ ಲಸಿಕೆ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ

"ಆದ್ದರಿಂದ, ನಾಲ್ಕನೇ ಅಲೆಯು ಜೂನ್ 22, 2022 ರಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಆಗಸ್ಟ್ 23, 2022 ರಂದು ಗರಿಷ್ಠ ಮಟ್ಟವನ್ನು ತಲುಪುತ್ತದೆ ಮತ್ತು ಅಕ್ಟೋಬರ್ 24, 2022 ರಂದು ಕೊನೆಗೊಳ್ಳುತ್ತದೆ" ಎಂದು ಅವರು ಹೇಳಿದರು. "ಇದಲ್ಲದೆ, ನಾಲ್ಕನೇ ಅಲೆಯು ಉತ್ತುಂಗವನ್ನು ಸುಮಾರು ಆಗಸ್ಟ್ 15, 2022 ರಿಂದ ಆಗಸ್ಟ್ 31, 2022 ರವರೆಗೆ ಇರುತ್ತದೆ" ಎಂದು ಸಂಶೋಧಕರು ಹೇಳಿದರು.

ಎಷ್ಟು ತೀವ್ರವಾಗಿರುತ್ತೆ ಈ ನಾಲ್ಕನೇ ಅಲೆ?

ಕೊರೊನಾ ವೈರಸ್‌ನ ಹೊಸ ರೂಪಾಂತರವು ಹೊರ ಹೊಮ್ಮುವ ಅವಕಾಶವಿದೆ ಮತ್ತು ಇಡೀ ವಿಶ್ಲೇಷಣೆಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಅಧ್ಯಯನವು ಹೇಳಿದೆ. "ಪರಿಣಾಮದ ತೀವ್ರತೆಯು ಸೋಂಕು, ಸಾವು ಮುಂತಾದ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಸಂಶೋಧಕರು ಹೇಳಿದರು.

ಮುಂದಿನ ರೂಪಾಂತರವು ಹೇಗೆ ಹೊರಹೊಮ್ಮುವ ಸಾಧ್ಯತೆಯಿದೆ..?

ಐಐಟಿ-ಕೆ ಅಧ್ಯಯನವನ್ನು ಹೊರತುಪಡಿಸಿ, ಮತ್ತೊಂದು ಸಂಶೋಧನೆಯು ಮುಂದಿನ ಕೋವಿಡ್-19 ರೂಪಾಂತರವು 2 ವಿಭಿನ್ನ ರೀತಿಯಲ್ಲಿ ಹೊರ ಹೊಮ್ಮಬಹುದು ಎಂದು ತೋರಿಸಿದೆ. ಹೊಸ ರೂಪಾಂತರವು ಈ ಹಿಂದೆ ಗುರುತಿಸಲಾದ ರೂಪಾಂತರಗಳಿಗಿಂತ ಕಡಿಮೆ ತೀವ್ರವಾಗಿರುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ಸಂಶೋಧಕರು ಹೇಳಿದರು.

ಇದನ್ನೂ ಓದಿ: ಕೊರೋನಾ ವೈರಸ್​ಗೆ ಜೀವವೇ ಇಲ್ಲ, ಹೀಗಾಗಿ ಅದನ್ನು ಕೊಲ್ಲೋದು ಕಷ್ಟ!; ಸಂಶೋಧನೆಯಲ್ಲಿ ಬಯಲಾಯ್ತು ಶಾಕಿಂಗ್​ ವಿಚಾರ

ಮೊದಲನೆಯದಾಗಿ, ಓಮಿಕ್ರಾನ್‌ ವಿಕಸನಗೊಳ್ಳುತ್ತಲೇ ಇದೆ, ಇದು ಕೆಟ್ಟ ರೀತಿಯ ಓಮಿಕ್ರಾನ್-ಪ್ಲಸ್ ರೂಪಾಂತರವನ್ನು ಸೃಷ್ಟಿಸುತ್ತದೆ. ಇದನ್ನು 1 ಅಥವಾ ಬಿಎ.2 ಎಂದು ಹೇಳಬಹುದಾಗಿದೆ. ಎರಡನೆಯ ಸಾಧ್ಯತೆಯೆಂದರೆ ಹೊಸ ಸಂಬಂಧವಿಲ್ಲದ ರೂಪಾಂತರವು ಕಾಣಿಸಿಕೊಳ್ಳುತ್ತದೆ ಎಂದು ಸಿಯಾಟಲ್‌ನ ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ವಿಕಸನೀಯ ವೈರಾಲಜಿಸ್ಟ್ ಜೆಸ್ಸಿ ಬ್ಲೂಮ್ ವೈಜ್ಞಾನಿಕ ಜರ್ನಲ್ ನೇಚರ್‌ಗೆ ತಿಳಿಸಿದರು.

Key Words: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ,

Story link: Fourth wave of Covid-19 in India from June, to last for 4 months, says study | India News | Zee News

Srinivas Reddy
Published by:Divya D
First published: