HOME » NEWS » National-international » FOURTH COVID WAVE IN DELHI MUCH MORE DANGEROUS SAYS ARVIND KEJRIWAL MAK

Arvind Kejriwal: ಕೊರೋನಾ ಉಲ್ಬಣಗೊಳ್ಳುತ್ತಿದೆ, ಲಸಿಕೆ ಮೇಲಿನ ನಿರ್ಬಂಧ ತೆಗೆಯಿರಿ; ಅರವಿಂದ ಕೇಜ್ರಿವಾಲ್ ಮನವಿ

ಕೊರೋನಾ ಲಸಿಕೆ ತೆಗೆದುಕೊಳ್ಳುವ ವಯಸ್ಸಿನ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ನಾನು ಕೇಂದ್ರವನ್ನು ಹಲವು ಬಾರಿ ವಿನಂತಿಸಿದ್ದೇನೆ. ಜನರಿಗೆ ಲಸಿಕೆ ನೀಡಲು ಮನೆ-ಮನೆಗೆ ಅಭಿಯಾನ ನಡೆಸಲು ದೆಹಲಿ ಸರ್ಕಾರ ಸಿದ್ಧವಾಗಿದೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

news18-kannada
Updated:April 11, 2021, 7:02 PM IST
Arvind Kejriwal: ಕೊರೋನಾ ಉಲ್ಬಣಗೊಳ್ಳುತ್ತಿದೆ, ಲಸಿಕೆ ಮೇಲಿನ ನಿರ್ಬಂಧ ತೆಗೆಯಿರಿ; ಅರವಿಂದ ಕೇಜ್ರಿವಾಲ್ ಮನವಿ
ಅರವಿಂದ್ ಕೇಜ್ರಿವಾಲ್.
  • Share this:
ದೆಹಲಿ (ಏಪ್ರಿಲ್ 11); ಕೊರೋನಾ ಎರಡನೇ ಅಲೆ ದೇಶದಲ್ಲಿ ಉಲ್ಭಣವಾಗುತ್ತಿದೆ. ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ನೀಡುವ ಬದಲು ಕೇಂದ್ರ ಸರ್ಕಾರ ಅಗತ್ಯ ಇದ್ದರೆ ಮಾತ್ರ ಲಸಿಕೆ ಪಡೆಯುವಂತೆ ಸೂಚಿಸಿದೆ. ಅಲ್ಲದೆ, ವಯೋಮಿತಿಯನ್ನು ನಿಗದಿಪಡಿಸಿದೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, "ಕೊರೋನಾ ವ್ಯಾಕ್ಸಿನೇಷನ್ ಮೇಲಿನ ವಯಸ್ಸಿನ ನಿರ್ಬಂಧಗಳನ್ನು ತೆಗೆದುಹಾಕಿ. ಇನ್ನು ಕೇವಲ 7 ರಿಂದ 10 ದಿನಗಳವರೆಗೆ ಆಗುವಷ್ಟು ಲಸಿಕೆಗಳು ಮಾತ್ರ ಉಳಿದಿದ್ದು, ದೆಹಲಿಯಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ಮೂರನೇ ಅಲೆಯಲ್ಲಿ ದೆಹಲಿ ಕಂಡದ್ದಕ್ಕಿಂತ ಈ ಬಾರಿಯ ನಾಲ್ಕನೇ ಅಲೆಯಲ್ಲಿ ಕೊರೊನಾ ಪ್ರಕರಣಗಳ ಉಲ್ಬಣವು “ಕೆಟ್ಟದಾಗಿದೆ” ಮತ್ತು ಇದು “ಹೆಚ್ಚು ಅಪಾಯಕಾರಿ” ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪೂರ್ಣ ಲಾಕ್ ಡೌನ್ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದರು, ಜೊತೆಗೆ ದೆಹಲಿಯಲ್ಲಿ ಹಲವಾರು ಹೊಸ ನಿರ್ಬಂಧಗಳನ್ನು ಘೋಷಿಸಿದ್ದರು. "ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 10,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ, ಇದು ಆತಂಕಕಾರಿ ಪರಿಸ್ಥಿತಿ" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ತಿಳಿಸಿದ್ದಾರೆ.

"ಕೊರೋನಾ ಲಸಿಕೆ ತೆಗೆದುಕೊಳ್ಳುವ ವಯಸ್ಸಿನ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ನಾನು ಕೇಂದ್ರವನ್ನು ಹಲವು ಬಾರಿ ವಿನಂತಿಸಿದ್ದೇನೆ. ಜನರಿಗೆ ಲಸಿಕೆ ನೀಡಲು ಮನೆ-ಮನೆಗೆ ಅಭಿಯಾನ ನಡೆಸಲು ದೆಹಲಿ ಸರ್ಕಾರ ಸಿದ್ಧವಾಗಿದೆ. ದೆಹಲಿಯಲ್ಲಿ ಶೇಕಡಾ 65 ರಷ್ಟು ರೋಗಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: CoronaVirus: ಕೊರೋನಾ ಯುದ್ಧ ಭಾರತ-ಪಾಕ್ ಯುದ್ಧದಂತೆ ಅಲ್ಲ; ಬಿಜೆಪಿಗೆ ಕುಟುಕಿದ ಶಿವಸೇನೆ..!

"ನಾನು ಲಾಕ್‌ಡೌನ್ ಪರವಾಗಿಲ್ಲ, ಅದು ಪರಿಹಾರ ಎಂದು ನಂಬಬೇಡಿ. ರಾಜ್ಯದ ಆರೋಗ್ಯ ಸೌಲಭ್ಯಗಳು ಕುಸಿದಾಗ ಮಾತ್ರ ಲಾಕ್‌ಡೌನ್ ವಿಧಿಸಬೇಕಾಗುತ್ತದೆ. ನಮ್ಮ ಸರ್ಕಾರವು ಪ್ರಸ್ತುತ ಆಸ್ಪತ್ರೆಗಳ ನಿರ್ವಹಣೆಯತ್ತ ಗಮನ ಹರಿಸುತ್ತಿದೆ. ಜನರು ಖಾಸಗಿ ಆಸ್ಪತ್ರೆಗಳ ಬದಲು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ. ಖಾಸಗಿ ಆಸ್ಪತ್ರೆಗಳ ಕಡೆಗೆ ಓಡಬೇಡಿ. ಅಲ್ಲಿ ಹಾಸಿಗೆಗಳು ಕಡಿಮೆ. ದಯವಿಟ್ಟು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ" ಎಂದು ಮನವಿ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಾಡ್ಡಾ ಲಸಿಕೆ ಸಾರ್ವತ್ರಿಕೀಕರಣ ಮತ್ತು ಲಸಿಕೆ ತುರ್ತು ಅವಶ್ಯಕತೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. "ಹಲವಾರು ರಾಜ್ಯಗಳಲ್ಲಿ ಲಸಿಕೆಗಳ ದಾಸ್ತಾನು ಮುಗಿದಿವೆ ಮತ್ತು ಉಳಿದ ರಾಜ್ಯಗಳಲ್ಲಿ ಕೇವಲ ಮೂರರಿಂದ ಐದು ದಿನಗಳವರೆಗೆ ಆಗುವಷ್ಟು ದಾಸ್ತಾನು ಮಾತ್ರ ಉಳಿದಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
Published by: MAshok Kumar
First published: April 11, 2021, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories