• Home
 • »
 • News
 • »
 • national-international
 • »
 • ಟ್ವಿಟರ್ ವಿರುದ್ಧ ಮುಂದುವರೆದ ಸಮರ; 4ನೇ ಕೇಸ್ ದಾಖಲಿಸಿದ ದೆಹಲಿ ಪೊಲೀಸರು

ಟ್ವಿಟರ್ ವಿರುದ್ಧ ಮುಂದುವರೆದ ಸಮರ; 4ನೇ ಕೇಸ್ ದಾಖಲಿಸಿದ ದೆಹಲಿ ಪೊಲೀಸರು

ಟ್ವಿಟ್ಟರ್.

ಟ್ವಿಟ್ಟರ್.

ಟ್ವಿಟ್ಟರ್​ ಜಾಲತಾಣದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಂಶಗಳು ಸುಲಭದಲ್ಲೇ ಸಿಗುತ್ತಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಆರೋಪಿಸಿತ್ತು. ಈ ಬಗ್ಗೆ ಎನ್​ಸಿಪಿಸಿಆರ್​​​ ಕಳೆದ ವಾರ ದೆಹಲಿ ಸೈಬರ್​ ಸೆಲ್​​ ಪೊಲೀಸರಿಗೆ ಮಾಹಿತಿಯನ್ನೂ ಕೂಡ ನೀಡಿತ್ತು.

ಮುಂದೆ ಓದಿ ...
 • Share this:

  ನವದೆಹಲಿ(ಜೂ.30): ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಇದುವರೆಗೂ ಟ್ವಿಟರ್​ ಮೇಲೆ 4 ಎಫ್​ಐಆರ್​​ಗಳು ದಾಖಲಾಗಿವೆ. ಮಕ್ಕಳ ಅಶ್ಲೀಲತೆ ಕುರಿತಾಗಿ ದೆಹಲಿ ಪೊಲೀಸರು ಟ್ವಿಟರ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಇಂದು ಹೊಸ ಕೇಸ್​ ದಾಖಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್​ಸಿಪಿಸಿಆರ್​​) ನೀಡಿದ ದೂರಿನನ್ವಯ ದೆಹಲಿ ಪೊಲೀಸರು ಪೋಕ್ಸೋ ಮತ್ತು ಐಟಿ ಕಾಯ್ದೆಯಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.


  ಟ್ವಿಟರ್​ ಜಾಲತಾಣದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಂಶಗಳು ಸುಲಭದಲ್ಲೇ ಸಿಗುತ್ತಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಆರೋಪಿಸಿತ್ತು. ಈ ಬಗ್ಗೆ ಎನ್​ಸಿಪಿಸಿಆರ್​​​ ಕಳೆದ ವಾರ ದೆಹಲಿ ಸೈಬರ್​ ಸೆಲ್​​ ಪೊಲೀಸರಿಗೆ ಮಾಹಿತಿಯನ್ನೂ ಕೂಡ ನೀಡಿತ್ತು. ಜೂನ್​ 29 ಅಥವಾ ಅದಕ್ಕೂ ಮುಂಚೆ ವೈಯಕ್ತಿಕವಾಗಿ ಸಂಪರ್ಕಿಸುವುದಾಗಿ ಹೇಳಿತ್ತು.


  ಇಷ್ಟೇ ಅಲ್ಲದೇ, ಟ್ವಿಟರ್ ವಿರುದ್ಧ​ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೇ 29ರಂದು ದೆಹಲಿ ಪೊಲೀಸರಿಗೆ ಪತ್ರ ಬರೆದಿತ್ತು. ಆದರೆ ದೆಹಲಿ ಪೊಲೀಸರು ಇನ್ನೂ ಸಹ ಕ್ರಮ ಕೈಗೊಂಡಿರಲಿಲ್ಲ. ಇದಕ್ಕೆ ಕಾರಣವೇನು ಎಂದು ಡಿಸಿಪಿ ಅನ್ಯೇಷ್​ ರಾಯ್​ ಅವರ ಬಳಿ ಎನ್​​ಸಿಪಿಸಿಆರ್​​ ವಿವರಣೆ ಕೇಳಿತ್ತು. ಈ ಎಲ್ಲಾ ಬೆಳವಣಿಗೆಗಗಳ ಬಳಿಕ ದೆಹಲಿ ಪೊಲೀಸರು ಟ್ವಿಟರ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.


  ಇದನ್ನೂ ಓದಿ:ಬಾಡಿಗೆ ಮನೆಗೆ ಹೋಗುವ ಮುನ್ನ ಈ ಅಂಶಗಳು ಗಮನದಲ್ಲಿರಲಿ...!


  ಡಾರ್ಕ್​ವೆಬ್​ಗೆ ಸಂಬಂಧಿಸಿದಂತೆ ಟೂಲ್​ ಕಿಟ್​​ ಕೂಡ ಟ್ವಿಟರ್​ನಲ್ಲಿ ಲಭ್ಯವಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಇದು ಎಲ್ಲಾ ಮಕ್ಕಳಿಗೂ ಅಂತಹ ಅಂಶಗಳನ್ನು ಪಡೆಯಲು ಸಹಕರಿಸುತ್ತದೆ ಎಂದು ಎನ್​​ಸಿಪಿಸಿಆರ್​​ ಬರೆದ ಪತ್ರದಲ್ಲಿ ಉಲ್ಲೇಖಿಸಿತ್ತು.


  ಈಗಾಗಲೇ ಭಾರತದಲ್ಲಿ ಅನೇಕ ವಿವಾದಗಳಿಗೆ ಒಳಗಾಗಿರುವ ಟ್ವಿಟರ್​ ಇತ್ತೀಚೆಗೆ ಭಾರತದ ನಕ್ಷೆಯ ವಿಚಾರದಲ್ಲೂ ವಿವಾದಕ್ಕೆ ಗುರಿಯಾಗಿತ್ತು. ಸೋಮವಾರ ಲಡಾಖ್​ನ ಲೆಹ್ ಪ್ರದೇಶವನ್ನು ಚೀನಾಕ್ಕೆ ಸೇರಿರುವಂತೆ ತೋರಿಸಿದ್ದ ಟ್ವಿಟರ್​ ನಕ್ಷೆ ವಿರುದ್ಧ ಭಾರತ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು.


  ಅದು ಸಾಲದೆಂಬಂತೆ ಮಂಗಳವಾರ ವಿವಾದಾತ್ಮಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಸ್ವತಂತ್ರ ದೇಶವೆಂಬಂತೆ ನಕ್ಷೆಯಲ್ಲಿ ತೋರಿಸಿ ಟ್ವಿಟರ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಟ್ವಿಟ್ಟರ್​ನ ಉದ್ಯೋಗ ವಿಭಾಗದಲ್ಲಿ ಈ ನಕ್ಷೆ ಇದ್ದು, ಭಾರತದ ಅಧಿಕೃತ ನಕ್ಷೆಯನ್ನು ತಪ್ಪಾಗಿ ತೋರಿಸುವುದು ಕೇಂದ್ರದ ಹೊಸ ಐಟಿ ನಿಯಮಗಳಿಗೆ ವಿರುದ್ಧವಾಗಿದೆ.


  ಈ ವಿಚಾರದ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯವು ಅವಲೋಕಿಸಿ ಮಾಹಿತಿ ಕಲೆಹಾಕಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿತ್ತು. ಅದರಂತೆ ನಿನ್ನೆ ಟ್ವಿಟರ್​ ಸಂಸ್ಥೆಯ ಮುಖ್ಯಸ್ಥ ಮನೀಶ್​ ಮಹೇಶ್ವರಿ ವಿರುದ್ಧ FIR ದಾಖಲಿಸಲಾಗಿದೆ.


  ಇದನ್ನೂ ಓದಿ:Cabinet Reshuffle: ಕೇಂದ್ರ ಸಚಿವ ಸಂಪುಟ ಪುನರ್ರಚನೆ; ರಾಜ್ಯದಿಂದ ಯಾರಿಗೆ ಸಿಗುತ್ತೆ ಕೇಂದ್ರ ಸಚಿವ ಸ್ಥಾನ?


  ಟ್ವಿಟರ್‌ನ ವೆಬ್‌ಸೈಟ್‌ನ "ಟ್ವೀಪ್ ಲೈಫ್" ವಿಭಾಗದಲ್ಲಿ ಭಾರತದ ತಪ್ಪಾದ ನಕ್ಷೆಯನ್ನು ಪ್ರಕಟಿಸಲಾಗಿತ್ತು. ಇದನ್ನು ಬಳಕೆದಾರರು ತಪ್ಪೆಂದು ತೋರಿಸಿದ ನಂತರ ಸೋಮವಾರ ತೆಗೆದು ಹಾಕಲಾಗಿದೆ. ಈ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಭಾರತದ ಹೊರಗಿರುವ ಪ್ರದೇಶ ಎಂದು ತೋರಿಸಲಾಗಿತ್ತು. ಇದು ಆಕ್ರೋಶಕ್ಕೆ ಗುರಿಯಾಗಿತ್ತು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

  Published by:Latha CG
  First published: