ಮೂರನೇ ದಿನಕ್ಕೆ ಕಾಲಿಟ್ಟ ಅಮರನಾಥ ಯಾತ್ರೆ; ಇಂದು 4 ಸಾವಿರಕ್ಕೂ ಹೆಚ್ಚು ಯಾತ್ರಿಕರ ಯಾತ್ರೆ ಆರಂಭ

ಈ ಅಮರನಾಥ ಯಾತ್ರೆ ರಕ್ಷಾ ಬಂಧನದ ಪ್ರಯುಕ್ತ ಆಗಸ್ಟ್​​ 15ರಂದು ಮುಕ್ತಾಯಗೊಳ್ಳಲಿದೆ.

Latha CG | news18
Updated:July 3, 2019, 5:16 PM IST
ಮೂರನೇ ದಿನಕ್ಕೆ ಕಾಲಿಟ್ಟ ಅಮರನಾಥ ಯಾತ್ರೆ; ಇಂದು 4 ಸಾವಿರಕ್ಕೂ ಹೆಚ್ಚು ಯಾತ್ರಿಕರ ಯಾತ್ರೆ ಆರಂಭ
ಸಾಂದರ್ಭಿಕ ಚಿತ್ರ
  • News18
  • Last Updated: July 3, 2019, 5:16 PM IST
  • Share this:
ಜಮ್ಮು,(ಜು.03): ಅಮರನಾಥ ಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ 11,546 ಯಾತ್ರಿಕರು ದರ್ಶನ ಪಡೆದಿದ್ದಾರೆ. ಇಂದು ಭಾರೀ ಬಿಗಿ ಭದ್ರತೆಯ ನಡುವೆಯೇ ನಾಲ್ಕನೇ ಬ್ಯಾಚ್​ನ ಯಾತ್ರಾರ್ಥಿಗಳು ಅಮರನಾಥ ಯಾತ್ರೆಯನ್ನು ಆರಂಭಿಸಿದ್ದಾರೆ.

ಜಮ್ಮುವಿನಿಂದ ಒಟ್ಟು 4,694 ಯಾತ್ರಾರ್ಥಿಗಳು ಅಮರನಾಥ ಗುಹಾ ದೇವಾಲಯಕ್ಕೆ ಯಾತ್ರೆ ಅರಂಭಿಸಿದ್ದಾರೆ. ಅವರಲ್ಲಿ 791 ಮಹಿಳೆಯರು ಇದ್ದಾರೆ. ಇಂದು ಭಾಗವತಿ ನಗರದ ಬೇಸ್​ ಕ್ಯಾಂಪ್​ನಿಂದ ಯಾತ್ರೆಯನ್ನು ಆರಂಭಿಸಿದ್ದಾರೆ.

ಸಮುದ್ರ ಮಟ್ಟದಿಂದ 3,880 ಮೀಟರ್​ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರದ ಪವಿತ್ರ ಅಮರನಾಥ ಗುಹೆಗೆ ತೆರಳಿ ಶಿವನ ದರ್ಶನ ಪಡೆಯಲಿದ್ದಾರೆ. ಇಲ್ಲಿ ಹಿಮದಿಂದ ಕೂಡಿರುವ ಶಿವಲಿಂಗ ಶಿವನ ಪೌರಾಣಿಕ ಶಕ್ತಿಗಳನ್ನು ಸಂಕೇತಿಸುತ್ತದೆ.

ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದ ಕೆ. ಮಹದೇವ್; ರಾಜೀನಾಮೆಗಾಗಿ ರಮೇಶ್ 80 ಕೋಟಿ ಕೇಳಿದ್ದು ನಿಜಾನ?

ಈ 4,694 ಯಾತ್ರಾರ್ಥಿಗಳಲ್ಲಿ ಮಹಿಳೆಯರ ಜೊತೆಗೆ 24 ಮಕ್ಕಳು, 70 ಸಾಧುಗಳು ಇದ್ದಾರೆ. ಅನಂತ್​ನಾಗ್​ ಜಿಲ್ಲೆಯ ಪಹಲ್ಗಮ್​ ಮತ್ತು ಗಂದೇರ್​ಬಾಲ್​ ಜಿಲ್ಲೆಯ ಬಲ್ಟಾಲ್​ ಬೇಸ್​ ಕ್ಯಾಂಪ್​ಗಳನ್ನು ಇಂದು ರಾತ್ರಿಯೊಳಗೆ ತಲುಪಲಿದ್ದಾರೆ. ಈ ಅಮರನಾಥ ಯಾತ್ರೆ ರಕ್ಷಾ ಬಂಧನದ ಪ್ರಯುಕ್ತ ಆಗಸ್ಟ್​​ 15ರಂದು ಮುಕ್ತಾಯಗೊಳ್ಳಲಿದೆ.

ಭದ್ರತಾ ಕ್ರಮವಾಗಿ ಕೇಂದ್ರೀಯ ಮೀಸಲು ಪಡೆ ಸಿಆರ್‌ಪಿಎಫ್ ರಾಜ್ಯ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಜಮ್ಮು ನಗರದಲ್ಲಿ ಮತ್ತು ಹೆದ್ದಾರಿಯಲ್ಲಿ ನಿಯೋಜಿಸಲಾಗಿದೆ.
First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading