Lunar Eclipse 2020: ನವೆಂಬರ್ 30ರಂದು ಸಂಭವಿಸಲಿದೆ ಈ ವರ್ಷದ ಕೊನೆಯ ಮತ್ತು 4ನೇ ಚಂದ್ರಗ್ರಹಣ

ಪೆನಂಬ್ರಲ್ ಚಂದ್ರಗ್ರಹಣ ನವೆಂಬರ್ 30ರ ಮಧ್ಯಾಹ್ನ 1 ಗಂಟೆ 2 ನಿಮಿಷಕ್ಕೆ ಶುರುವಾಗುತ್ತದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಮಧ್ಯಾಹ್ನ 3 ಗಂಟೆ 12 ನಿಮಿಷಕ್ಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಕೊನೆಗೆ ಸಂಜೆ 5 ಗಂಟೆ 23 ನಿಮಿಷಕ್ಕೆ ಚಂದ್ರಗ್ರಹಣ ಅಂತ್ಯಗೊಳ್ಳಲಿದೆ.

ಚಂದ್ರಗ್ರಹಣ

ಚಂದ್ರಗ್ರಹಣ

  • Share this:
     2020 ನೇ ವರ್ಷದ ನಾಲ್ಕನೇ ಹಾಗೂ ಕೊನೆಯ ಚಂದ್ರಗ್ರಹಣ ಇದೇ ನವೆಂಬರ್ 30ರಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಈ ವರ್ಷದ 4ನೇ ಚಂದ್ರಗ್ರಹಣವಾಗಿದೆ. ಈವರೆಗೆ ಈ ವರ್ಷದಲ್ಲಿ ಒಟ್ಟು ಮೂರು ಚಂದ್ರಗ್ರಹಣಗಳು ಸಂಭವಿಸಿವೆ. ವಿಶೇಷ ಎಂದರೆ ಈ ವರ್ಷದ ಕೊನೆಯ ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮ ದಿನದಂದು ಸಂಭವಿಸಲಿದೆ. ಇದು ಪೆನಂಬ್ರಲ್ ಚಂದ್ರಗ್ರಹಣವಾಗಿದೆ. ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಹಾದು ಹೋಗುತ್ತದೆ. ಈ ವೇಳೆ ಭೂಮಿಯ ನೆರಳು ಸೂರ್ಯನ ಮೇಲೆ ಬೀಳುವುದರಿಂದ ಸೂರ್ಯನ ಬೆಳಕು ಚಂದ್ರನನ್ನು ತಲುಪುವುದಿಲ್ಲ. ಆಗ ಚಂದ್ರ ಗ್ರಹಣ ಸಂಭವಿಸುತ್ತದೆ.

    ಒಟ್ಟು ಮೂರು ವಿಧದ ಚಂದ್ರಗ್ರಹಣಗಳಿವೆ. ಪೂರ್ಣ ಚಂದ್ರಗ್ರಹಣ, ಭಾಗಶಃ ಚಂದ್ರಗ್ರಹಣ ಮತ್ತು ಪೆನಂಬ್ರಲ್ ಚಂದ್ರಗ್ರಹಣ. ಕೆಲವೇ ದಿನಗಳಲ್ಲಿ ಸಂಭವಿಸಲಿರುವ ಚಂದ್ರಗ್ರಹಣವು ಪೆನಂಬ್ರಲ್ ಚಂದ್ರಗ್ರಹಣವಾಗಿದೆ.

    ಭೂಮಿಯ ಸೂರ್ಯನಿಗೆ ಅಡ್ಡಬರುವುದಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ. ಸೂರ್ಯನ ಬೆಳಕು ನೇರವಾಗಿ ಚಂದ್ರನಿಗೆ ತಲುಪಲು ಭೂಮಿಯು ಭಾಗಶಃ ನಿರ್ಬಂಧಿಸುತ್ತದೆ. ಈ ವೇಳೆ ಪೆನಂಬ್ರಲ್ ಚಂದ್ರಗ್ರಹಣ ಸಂಭವಿಸುತ್ತದೆ.

    National Flag: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ; ಮಹಿಳೆ ಸೇರಿ ಮೂವರು ಅಪ್ರಾಪ್ತರ ಬಂಧನ

    ಪೆನಂಬ್ರಾ ಎಂದು ಕರೆಯಲ್ಪಡುವ ಭೂಮಿಯ ಹೊರಗಿನ ನೆರಳು ಚಂದ್ರನ ಮೇಲೆ ಬೀಳುತ್ತದೆ. ಸಮಯ ಮತ್ತು ದಿನಾಂಕದ ಪ್ರಕಾರ, 2020ನೇ ವರ್ಷದ ಕೊನೆಯ ಚಂದ್ರಹ್ರಗಣವು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರವಾಗುತ್ತದೆ.

    ಭಾರತದಲ್ಲಿ ಚಂದ್ರಗ್ರಹಣವು ಗೋಚರವಾಗುವ ಸಮಯ ಇಂತಿದೆ. ನವೆಂಬರ್ 30ರಂದು ಸಂಭವಿಸುವ ಚಂದ್ರಗ್ರಹಣವು 4 ಗಂಟೆ 21 ನಿಮಿಷ ಗೋಚರವಾಗುತ್ತದೆ. ಗ್ರಹಣದ ಒಂದು ಭಾಗ ಮಾತ್ರ ಭಾರತದಲ್ಲಿ ಗೋಚರವಾಗುತ್ತದೆ.

    ಪೆನಂಬ್ರಲ್ ಚಂದ್ರಗ್ರಹಣ ನವೆಂಬರ್ 30ರ ಮಧ್ಯಾಹ್ನ 1 ಗಂಟೆ 2 ನಿಮಿಷಕ್ಕೆ ಶುರುವಾಗುತ್ತದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಮಧ್ಯಾಹ್ನ 3 ಗಂಟೆ 12 ನಿಮಿಷಕ್ಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಕೊನೆಗೆ ಸಂಜೆ 5 ಗಂಟೆ 23 ನಿಮಿಷಕ್ಕೆ ಚಂದ್ರಗ್ರಹಣ ಅಂತ್ಯಗೊಳ್ಳಲಿದೆ.
    Published by:Latha CG
    First published: