ಪ್ರೇಯಸಿ ಮೇಲೆ ಪ್ರಿಯಕರನಿಂದ​ ಅತ್ಯಾಚಾರ​, 4 ವರ್ಷದ ಮಗುವಿನ ಮೇಲೆ ರೇಪ್​; ಎರಡು ಕೃತ್ಯದಿಂದ ಬೆಚ್ಚಿಬಿದ್ದ ನಗರಿ

Crime News Today in Kannada: ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಹೋದ ಪಕ್ಕದ ಮನೆಯಾತ ಮಗುವಿನ ಮೇಲೆ ಅತ್ಯಾಚಾವೆಸಗಿದ್ದಾನೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  Crime News: ಇತ್ತೀಚೆಗೆ ಬೆಳಗಿಕೆ ಬರುತ್ತಿರುವ ಪ್ರಕರಣಗಳನ್ನು ನೋಡಿದರೆ ಹೆಣ್ಣು ಮಗುವಿಗೆ ಇಡೀ ದೇಶದಲ್ಲಿ ಎಲ್ಲೂ ಸುರಕ್ಷತೆ ಇಲ್ಲ ಅನಿಸುತ್ತದೆ. ಚಿಕ್ಕ ಮಗು ಎಂಬುದನ್ನೂ ಲೆಕ್ಕಿಸದೇ ಕಾಮುಕರು, ಮಗುವಿನ ಮೇಲೆ ಅತ್ಯಾಚಾರ (Child rape cases) ಮಾಡುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ. ಹೈದರಾಬಾದಿನಲ್ಲಿ ಇಂತದ್ದೇ ಒಂದು ಪ್ರಕರಣ ಕೇಳಿ ಬಂದಿತ್ತು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ವರ್ಷದ ಮಗು ಮತ್ತು ಇನ್ನೊಬ್ಬ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ (Minor girl and toddler raped in Hyderabad). ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ಈ ಘಟನೆಗಳು ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿವೆ. ರಾಜೇಂದ್ರ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್​ 15ರಂದು ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಹೋದ ಪಕ್ಕದ ಮನೆಯಾತ ಮಗುವಿನ ಮೇಲೆ ಅತ್ಯಾಚಾವೆಸಗಿದ್ದಾನೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ.

  ಪಕ್ಕದ ಮನೆಯವನಿಂದಲೇ ಕೃತ್ಯ:

  ಪಕ್ಕದ ಮನೆಯಾತ ಹಲವು ವರ್ಷಗಳಿಂದ ಮಗುವಿನ ಮನೆಯವರಿಗೆ ಪರಿಚಿತನಾಗಿದ್ದ. ಆಗಾಗ ಅವರ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಆರೋಪಿ 23 ವರ್ಷದವನಾಗಿದ್ದು, ಮಗು ಆಟವಾಡುತ್ತಿರುವಾಗ ಚಾಕಲೇಟ್​ ಕೊಡುತ್ತೀನೆಂದು ಮನೆಗೆ ಕರೆದೊಯ್ದಿದ್ದಾನೆ. ನಂತರ ಮಗುವಿನ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಸಿ, ಆಕೆಯನ್ನು ವಾಪಸ್​ ಕಳಿಸಿದ್ದಾನೆ. ಗೊತ್ತಿದ್ದ ಹುಡುಗನಾದ್ದರಿಂದ, ಮನೆಗೆ ಕರೆದುಕೊಂಡು ಹೋಗಿ, ವಾಪಸ್​ ಬಿಟ್ಟಿದ್ದಾನೆ ಎಂದೇ ಮನೆಯವರು ತಿಳಿದುಕೊಂಡಿದ್ದರು. ಅದಾದ ನಂತರ ಕುಟುಂಬ ತಮ್ಮ ಊರಿಗೆ ಹೋಗಿದ್ದಾರೆ. ಆಗ ಮಗು ತನ್ನ ಮೇಲಾದ ಅತ್ಯಾಚಾರದ ಬಗ್ಗೆ ತನಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದೆ. ಇದರಿಂದ ಕಂಗಾಲಾದ ಕುಟುಂಬಸ್ಥರು, ಹೈದಾರಾಬಾದಿಗೆ (Hyderabad - Telangana State Capital) ವಾಪಸಾಗಿ ಪಕ್ಕದ ಮನೆಯ ಹುಡುಗನ ಮೇಲೆ ದೂರು ನೀಡಿದ್ದಾರೆ. ಸಹ ಪೊಲೀಸ್​ ಆಯುಕ್ತ ಬಿ ಗಂಗಾಧರ್​ ಸ್ಥಳೀಯ ಮಾಧ್ಯಮಗಳಿಗೆ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  ಪೋಕ್ಸೊ (POCSO - Prevention Of Children from Sexual Offences Act) ಅಡಿಯಲ್ಲಿ ಪ್ರಕರಣ ದಾಖಲು:

  ದೂರು ಪಡೆದುಕೊಂಡ ಪೊಲೀಸರು ಪೋಕ್ಸೊ ಕಾಯ್ದೆಯಡಿ (POCSO Act) ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಇನ್ನೂ ಆರೋಪಿ ಬೈಕ್​ ಮೆಕ್ಯಾನಿಕ್​ ಆಗಿದ್ದು, ಹೈದರಾಬಾದಿನಲ್ಲಿ ಗ್ಯಾರೇಜ್​ ನಡೆಸುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗೆ ಮದುವೆಯಾಗಿಲ್ಲ, ಆತ ಒಬ್ಬನೇ ವಾಸವಿದ್ದು ಅವನ ಕುಟುಂಬದವರು ಹೈದರಾಬಾದಿನಲ್ಲಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: Viral Video: ಲೈವ್​ನಲ್ಲಿದ್ದ ರಿಪೋರ್ಟರ್ ಮೊಬೈಲ್​​ ಕದ್ದ ಕಳ್ಳ: ಖತರ್ನಾಕ್​ ಖದೀಮನನ್ನು ಸೆರೆ ಹಿಡಿದ ವೀಕ್ಷಕರು!

  ಪ್ರೇಯಸಿಯ ಅತ್ಯಾಚಾರ ಮಾಡಿ ಪ್ರಿಯಕರ:

  ಮದುವೆಯಾಗುತ್ತೀನಿ ಎಂದು ನಂಬಿಸಿ ದೈಹಿಕ ಸಂಪರ್ಕ ಸಾಧಿಸಿ ನಂತರ ಮೋಸ ಮಾಡುವ ಪ್ರಕರಣಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದೇ ರೀತಿಯ ಪ್ರಕರಣ ಹೈದರಾಬಾದಿನಲ್ಲಿ ನಡೆದಿದ್ದು, ಪ್ರೇಯಸಿಯ ಮೇಲೆ ಪ್ರಿಯಕರ ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬಂಜಾರ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ (Banjara Hills police station) ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಇದನ್ನೂ ಓದಿ: Crime: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ: ಒಪ್ಪದ ಹೆಂಡತಿ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪತಿ

  ಆರೋಪಿ ಮತ್ತು ಸಂತ್ರಸ್ಥೆ ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿ ಇದ್ದರು. ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಹೊಂದಿ ವಂಚಿಸಿದ್ದಾನೆ. ಜತೆಗೆ ಇಷ್ಟವಿಲ್ಲದಿದ್ದರೂ ಸಂಭೋಗ ಪ್ರಕ್ರಿಯೆಯಲ್ಲಿ ತೊಡಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಇಬ್ಬರೂ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದು, ಯುವತಿ ಇನ್ನೂ ಅಪ್ರಾಪ್ತೆಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಇಂತಾ ಪ್ರಕರಣಗಳು ದಿನವೂ ದೇಶದ ಮೂಲೆ ಮೂಲೆಯಲ್ಲೂ ನಡೆಯುತ್ತಿರುವುದು ಬೇಸರದ ಸಂಗತಿ. ಇಂತಾ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್​ ಇಲಾಖೆಗೆ ವಾಸ್ತವಿಕವಾಗಿ ಸಾಧ್ಯವಿಲ್ಲ.
  Published by:Sharath Sharma Kalagaru
  First published: