ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಮತ್ತೆ ಉಗ್ರರ (Terrorist) ಉಪಟಳ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಉಗ್ರ ಚಟುವಟಿಕೆ (Activities) ನಿಧಾನಕ್ಕೆ ಜಾಸ್ತಿಯಾಗುತ್ತಿದ್ದು, ಕಾಶ್ಮೀರಿ ಪಂಡಿತರ (Kashmir Pandits) ಹತ್ಯಾಕಾಂಡವೂ (massacre) ನಡೆದಿತ್ತು. ಆದರೆ ಜಮ್ಮು ಕಾಶ್ಮೀರ ಪೊಲೀಸರು (Police) ಹಾಗೂ ಭಾರತೀಯ ಸೇನಾಪಡೆ (Indian Army) ಉಗ್ರರ ಉಪಟಳಕ್ಕೆ ಬ್ರೇಕ್ ಹಾಕೋದಕ್ಕೆ ಮುಂದಾಗಿದೆ. ಇಂದು ಒಂದೇ ದಿನ ಜಮ್ಮು ಕಾಶ್ಮೀರದಲ್ಲಿ ಬೇರೆ ಬೇರೆ ಪ್ರಕರಣದಲ್ಲಿ ಒಟ್ಟು ನಾಲ್ವರು ಭಯೋತ್ಪಾದಕರನ್ನು ಹೊಡೆದು ಉರುಳಿಸಲಾಗಿದೆ. ಈ ಪೈಕಿ ಮೂವರು ಪಾಕಿಸ್ತಾನ (Pakistan) ಮೂಲದ ಉಗ್ರ ಸಂಘಟನೆಗೆ ಸೇರಿದ ಸದಸ್ಯರೆನ್ನುವುದು ದೃಢಪಟ್ಟಿದೆ. ಇನ್ನು ಗಡಿಯಾಚೆಗಿನ ಉಗ್ರರ ಒಳನುಸುಳುವಿಕೆಯ ವಿರುದ್ಧ ಕೇಂದ್ರವು "ಶೂನ್ಯ ಸಹಿಷ್ಣುತೆ" (Zero tolerance) ನೀತಿಯನ್ನು ತಳೆಯುತ್ತಿದೆ ಅಂತ ಕೇಂದ್ರ ಗೃಹಸಚಿವ ಅಮಿತ್ ಶಾ (Union Home Minister Amit Shah) ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಅಭಿವೃದ್ಧಿ ಮತ್ತು ಶಾಂತಿಯುತ ಜಮ್ಮು ಮತ್ತು ಕಾಶ್ಮೀರದ ನಿರ್ಮಾಣದ ಗುರಿಯನ್ನು ಈಡೇರಿಸಲು ಇದು ಅವಶ್ಯಕವಾಗಿದೆ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
ಉನ್ನತ ಮಟ್ಟದ ಸಭೆ ನಡೆದ 24 ಗಂಟೆಯೊಳಗೆ ಎನ್‌ಕೌಂಟರ್
ಪಾಕಿಸ್ತಾನದ ಗಡಿಯಲ್ಲಿ ಡ್ರೋಣ್ ಹಾರಾಟ ಜಾಸ್ತಿಯಾಗಿದ್ದು, ಗಡಿಯಲ್ಲಿ ಉಗ್ರ ಚಟುವಟಿಕೆ ನಿಧಾನಕ್ಕೆ ತಲೆ ಎತ್ತುತ್ತಿತ್ತು. ಇದನ್ನು ಗಮಸಿಸಿದ್ದ ಕೇಂದ್ರ ಸರ್ಕಾರ ಉಗ್ರ ನಿಗ್ರಹಕ್ಕೆ ಕಾರ್ಯ ಯೋಜನೆ ರೂಪಿಸುತ್ತಿತ್ತು. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ಸಭೆ ನಂತರ ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ. ಹತ್ಯೆಗೀಡಾದವರಲ್ಲಿ ಮೂವರು ಪಾಕಿಸ್ತಾನಿಗಳಾಗಿದ್ದು, ನಾಲ್ಕನೆಯವರನ್ನು ಗುರುತಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ರಕ್ಷಣಾ ತಂಡಗಳಿಂದ ಏಕಕಾಲಕ್ಕೆ ದಾಳಿ
ವಿವಿಧ ರಕ್ಷಣಾ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದು ಉರುಳಿಸಲಾಗಿದೆ. ಭಾರತೀಯ ಸೇನೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಮೃತ ಉಗ್ರರಿಂದ ಎಕೆ-56 ಬಂದೂಕುಗಳು, ಗ್ರೆನೇಡ್‌ಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: RSS ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ, ಓರ್ವ ಆರೋಪಿ ಅರೆಸ್ಟ್! ಇತ್ತ ಬೆಂಗಳೂರಲ್ಲೂ ಬಿಗಿ ಭದ್ರತೆ
ಹತ್ಯೆಯಾದ ಉಗ್ರರು ಯಾರು?
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಹಾಗೂ ಬಾರಾಮುಲ್ಲಾದಲ್ಲಿ ಎರಡು ಪ್ರತ್ಯೇಕ ಎನ್ಕೌಂಟರ್ ನಡೆಸಿದೆ. ಕುಪ್ವಾರದ ಚಕ್ತಾರಸ್ ಕಂಡಿ ಪ್ರದೇಶದಲ್ಲಿ ಎಂಬ ಪ್ರದೇಶಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಂದು ಭಾರತೀಯ ಸೇನಾಪಡೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಹತ್ಯೆ ಮಾಡಿಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಮೇಲೆ ಉಗ್ರರಿಂದ ಪ್ರತಿದಾಳಿ
ರಕ್ಷಣಾ ಪಡೆಗಳ ದಾಳಿ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಲು ಆರಂಭಿಸಿತು. ಇದರಂತೆ ಉಗ್ರರ ದಾಳಿಗೆ ತಕ್ಕ ಉತ್ತರ ನೀಡಿ ಪಾಕಿಸ್ತಾನಿ ಭಯೋತ್ಪಾದಕ ತುಫೈಲ್ ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಭಯೋತ್ಪಾದಕರು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಲಾಗಿದೆ.
ಅಮಿತ್ ಶಾ ಮಹತ್ವದ ಸಭೆ
ಜಮ್ಮು ಕಾಶ್ಮೀರದಲ್ಲಿ ಈ ವರ್ಷದ ಅಮರನಾಥ ಯಾತ್ರೆಗೆ ಭದ್ರತಾ ಸಿದ್ಧತೆಗಳ ನಡುವೆ ಅಮಿತ್ ಶಾ ಅವರು 15 ದಿನಗಳಲ್ಲಿ ಕನಿಷ್ಠ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಗಡಿ ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆದಿದ್ದು, ಗೃಹ ಕಾರ್ಯದರ್ಶಿಯವರ ನೇತೃತ್ವದಲ್ಲಿ ಪ್ರತ್ಯೇಕ ಸಭೆಯೂ ನಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ