News18 India World Cup 2019

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ನಾಲ್ವರು ಪೊಲೀಸರ ಗುಂಡೇಟಿಗೆ ಬಲಿ


Updated:August 29, 2018, 5:52 PM IST
ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ನಾಲ್ವರು ಪೊಲೀಸರ ಗುಂಡೇಟಿಗೆ ಬಲಿ

Updated: August 29, 2018, 5:52 PM IST
ನ್ಯೂಸ್​ 18 ಕನ್ನಡ

ಕಾಶ್ಮೀರ (ಆ.29): ದಕ್ಷಿಣ ಕಾಶ್ಮೀರದ ಶೋಫಿಯಾನ್​ ಜಿಲ್ಲೆಯಲ್ಲಿ ಇಂದುನಡೆದ ಭಯೋತ್ಪಾದಕ ದಾಳಿಯಲ್ಲಿ ಉಗ್ರರ ಗುಂಡಿಗೆ ನಾಲ್ಕು ಪೊಲೀಸರು ಸಾವನ್ನಪ್ಪಿದ್ದಾರೆ.

ಶಸ್ತ್ರಾಸ್ತ್ರ ತುಂಬಿದ ಸೇನಾ ವಾಹನ ಕೆಟ್ಟಿದ್ದರಿಂದಾಗಿ ಅರ್ಹಮ್​ ಹಣ್ಣಿನ ಮಂಡಿ ಬಳಿ ಇರುವ ಆಟೋಮೊಬೈಲ್​ ವರ್ಕ್​ಶಾಪ್​ಗೆ ರಿಪೇರಿಗೆ ಹೋಗಿದ್ದಾರೆ. ಈ ವೇಳೆ ಉಗ್ರರು ದಾಳಿ ಮಾಡಿದ್ದು, ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಮೂರು ಎ.ಕೆ.47 ಗನ್​ಗಳನ್ನು ಕೂಡ ಉಗ್ರರು ತೆಗೆದುಕೊಂಡು ಹೋಗಿದ್ದಾರೆ.

ಘಟನೆಯಾದಾಕ್ಷಣ ಭದ್ರತಾ ಪಡೆ ಉಗ್ರರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ, ಈ ವೇಳೆಗಾಗಲೇ ಅವರು ತಪ್ಪಿಸಿಕೊಂಡಿದ್ದಾರೆ,

ಘಟನೆಯಲ್ಲಿ  ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪೇದೆಗಳಾದ ಇಶ್ಫಾಕ್​ ಅಹ್ಮದ್​ ಮಿರ್​, ಜಾವೀದ್​ ಅಹ್ಮದ್​ ಭಟ್​, ಮೊಹಮ್ಮದ್​ ಇಕ್ಬಾಲ್​ ಮಿರ್​ ಹಾಗೂ ಎಸ್ಪಿಒ ಅದಿಲ್​ ಮನ್ಸೂರ್​ ಭಟ್​ ಘಟನೆಯಲ್ಲಿ ಸಾವನ್ನಪ್ಪಿದವರು.

ಕಳೆದ ವಾರ ಮೂವರು ಈದ್​ ಸಂಭ್ರಮಾಚರಣೆ ವೇಳೆ ನಡೆದ ಉಗ್ರರ ದಾಳಿ ವೇಳೆ ಮೂವರು ಪೊಲೀಸರು ಸಾವನ್ನಪ್ಪಿದ್ದರು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...