Amarnath Yatra: ಅಮರನಾಥ ಯಾತ್ರೆಯ ಸಾವಿನ ಸಂಖ್ಯೆ 30ಕ್ಕೆ ಏರಿಕೆ; ಕಳೆದ ವರ್ಷದ ದಾಖಲೆಯನ್ನು ಮುರಿದ ಭಕ್ತರ ಪ್ರಮಾಣ

ಅತ್ಯಂತ ದುರ್ಗಮ ದಾರಿ ಎಂದೇ ಕರೆಯಲಾಗುವ ಅಮರನಾಥ ಯಾತ್ರೆಗೆ ಈ ಬಾರಿ 2 ಲಕ್ಷಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿಕೊಂಡಿದ್ದರು. ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾದ ಈ ದೇವಾಲಯ ಹಿಂದುಗಳಿಗೆ ಪವಿತ್ರ ಕ್ಷೇತ್ರಗಳಲ್ಲೊಂದು.

Sushma Chakre | news18
Updated:July 24, 2019, 4:01 PM IST
Amarnath Yatra: ಅಮರನಾಥ ಯಾತ್ರೆಯ ಸಾವಿನ ಸಂಖ್ಯೆ 30ಕ್ಕೆ ಏರಿಕೆ; ಕಳೆದ ವರ್ಷದ ದಾಖಲೆಯನ್ನು ಮುರಿದ ಭಕ್ತರ ಪ್ರಮಾಣ
ಅಮರನಾಥ ಯಾತ್ರೆಯ ಸಾಂದರ್ಭಿಕ ಚಿತ್ರ
Sushma Chakre | news18
Updated: July 24, 2019, 4:01 PM IST
ಶ್ರೀನಗರ (ಜು. 24): ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಯಾತ್ರೆಗೆ ತೆರಳಿರುವ ಭಕ್ತರ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 1 ದಿನದಲ್ಲಿ 4 ಭಕ್ತರು ಸಾವನ್ನಪ್ಪಿದ್ದಾರೆ. ಅಲ್ಲಿಗೆ, ಈ ವರ್ಷ ಅಮರನಾಥ ಯಾತ್ರೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೇರಿದೆ.

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಅಧಿಕಾರಿಗಳು, ಮಂಗಳವಾರ ಮೂವರು ಭಕ್ತರು ಸಾವನ್ನಪ್ಪಿದ್ದರು. ಇಂದು ಮುಂಜಾನೆ ಓರ್ವ ಭಕ್ತ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅತ್ಯಂತ ದುರ್ಗಮ ದಾರಿ ಎಂದೇ ಕರೆಯಲಾಗುವ ಅಮರನಾಥ ಯಾತ್ರೆಗೆ ಈ ಬಾರಿ 2 ಲಕ್ಷಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿಕೊಂಡಿದ್ದರು. ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾದ ಈ ದೇವಾಲಯ ಹಿಂದುಗಳಿಗೆ ಪವಿತ್ರ ಕ್ಷೇತ್ರಗಳಲ್ಲೊಂದು.

ಆ್ಯಂಬುಲೆನ್ಸ್​ಗೆ ದಾರಿಬಿಡದಿದ್ದರೆ 10 ಸಾವಿರ ದಂಡ; ಅಪ್ರಾಪ್ತರಿಂದ ತಪ್ಪಾದರೆ ಪೋಷಕರು ಹೊಣೆ; ಹೊಸ ಮೋಟಾರು ವಾಹನ ಕಾಯ್ದೆಯ ವಿವರಗಳು

ಈ ವರ್ಷ ಅಮರನಾಥ ಯಾತ್ರೆಯಲ್ಲಿ ಸಾವನ್ನಪ್ಪಿದವರಲ್ಲಿ 26 ಭಕ್ತರು, ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಸ್ವಯಂಸೇವಕರು ಸೇರಿದ್ದಾರೆ. ಇದಲ್ಲದೆ 40 ಜನರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಸಿಜನ್ ಕೊರತೆ, ಅತಿಯಾದ ಶೀತಪ್ರದೇಶ ಮತ್ತು ದುರ್ಗಮ ಹಾದಿಯಲ್ಲಿ 3,888 ಮೀಟರ್​ ದೂರ ನಡೆಯಬೇಕಾದ್ದರಿಂದ ಇಲ್ಲಿಗೆ ಆಗಮಿಸುವ ಮುನ್ನ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಭಕ್ತರಿಗೆ ಸೂಚನೆ ನೀಡಲಾಗುವುದು. ಇಲ್ಲಿಗೆ ಬರುವ ಭಕ್ತರೆಲ್ಲ ವೈದ್ಯರಿಂದ ತಮ್ಮ ಆರೋಗ್ಯದ ಬಗ್ಗೆ ಸರ್ಟಿಫಿಕೇಟ್​ ತರಬೇಕಾಗುತ್ತದೆ.

ಶಿವಲಿಂಗವಿರುವ ಈ ಪವಿತ್ರ ಗುಹೆಯ ದರ್ಶನ ಪಡೆಯಲು ಕಳೆದ 24 ದಿನಗಳಲ್ಲಿ 2.96 ಲಕ್ಷ ಭಕ್ತರು ಆಗಮಿಸಿದ್ದಾರೆ. ಕಳೆದ ವರ್ಷ 2.83 ಲಕ್ಷ ಭಕ್ತರು ಅಮರನಾಥನ ದರ್ಶನ ಪಡೆದಿದ್ದರು. ಅದಕ್ಕೆ ಹೋಲಿಸಿದರೆ ಈಗಾಗಲೇ ಕಳೆದ ವರ್ಷಕ್ಕಿಂತ ಹೆಚ್ಚು ಜನರು ಆಗಮಿಸಿದ್ದಾರೆ. ಇನ್ನೂ ಭಕ್ತರ ಸಂಖ್ಯೆ ಹೆಚ್ಚು ಸಾಧ್ಯತೆಯಿದೆ.

First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...