• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Stampede: ಉಚಿತ ಸೀರೆ, ಪಂಚೆ ಆಸೆಗೆ ಜೀವ ಕಳೆದುಕೊಂಡ ಜನರು! ಕಾಲ್ತುಳಿತಕ್ಕೆ ಸಿಲುಕಿ ನಾಲ್ವರು ಸಾವು

Stampede: ಉಚಿತ ಸೀರೆ, ಪಂಚೆ ಆಸೆಗೆ ಜೀವ ಕಳೆದುಕೊಂಡ ಜನರು! ಕಾಲ್ತುಳಿತಕ್ಕೆ ಸಿಲುಕಿ ನಾಲ್ವರು ಸಾವು

ಸಾಂದರ್ಭಿಕ ಚಿತ್ರ (ಕೃಪೆ: Internet)

ಸಾಂದರ್ಭಿಕ ಚಿತ್ರ (ಕೃಪೆ: Internet)

ಉಚಿತವಾಗಿ ಕೊಡುವ ಸೀರೆ ಹಾಗೂ ಪಂಚೆ ಆಸೆಗೆ ಬಂದ ಜನರು ಕಾಲ್ತುಳಿತದಲ್ಲಿ ಸಿಲುಕಿ ಪರದಾಡಿದ್ದಾರೆ. ಇಷ್ಟೇ ಅಲ್ಲ ಸೀರೆ ಆಸೆಗೆ ಬಂದಿದ್ದ ಮಹಿಳೆಯರ ಪೈಕಿ ನಾಲ್ವರು ಕಾಲ್ತುಳಿತಕ್ಕೆ ಸಿಲುಕಿ ಬಲಿಯಾಗಿದ್ದಾರೆ.

 • News18 Kannada
 • 2-MIN READ
 • Last Updated :
 • Tamil Nadu, India
 • Share this:

ತಮಿಳುನಾಡು: ಉಚಿತವಾಗಿ (free) ಸಿಗುತ್ತೆ ಅಂದರೆ ನಮ್ಮ ಜನಗಳೂ ಜೀವವನ್ನೂ ಲೆಕ್ಕಸದೇ ಮುನ್ನುಗ್ಗುತ್ತಾರೆ. ತಮಿಳುನಾಡಿನಲ್ಲೂ (Tamil Nadu) ಇದೇ ರೀತಿ ಆಗಿದೆ. ಉಚಿತವಾಗಿ ಕೊಡುವ ಸೀರೆ (Saree) ಹಾಗೂ ಪಂಚೆ (Panche) ಆಸೆಗೆ ಬಂದ ಜನರು ಕಾಲ್ತುಳಿತದಲ್ಲಿ (stampede) ಸಿಲುಕಿ ಪರದಾಡಿದ್ದಾರೆ. ಇಷ್ಟೇ ಅಲ್ಲ ಸೀರೆ ಆಸೆಗೆ ಬಂದಿದ್ದ ಮಹಿಳೆಯರ ಪೈಕಿ ನಾಲ್ವರು ಕಾಲ್ತುಳಿತಕ್ಕೆ ಸಿಲುಕಿ ಬಲಿಯಾಗಿದ್ದಾರೆ. ಇಂಥದ್ದೊಂದು ಘಟನೆ ತಮಿಳುನಾಡು ರಾಜ್ಯದ ತಿರುಪತ್ತೂರಿನವಾಣಿಯಂಬಾಡಿ (Vaniyambadi in Tirupattur) ಎಂಬ ಪ್ರದೇಶದಲ್ಲಿ ನಡೆದಿದೆ. ತಮಿಳು ನಾಡಲ್ಲಿ ಈ ಸಂದರ್ಭದಲ್ಲಿ ತೈಪೂಸಂ ಎಂಬ ಹಬ್ಬ ಆಚರಿಸಲಾಗುತ್ತದೆ. ಈ ಬಾರಿಯೂ ಜನರು ಸಂಪ್ರದಾಯದಂತೆ ತೈಪೂಸಂ ಹಬ್ಬದ (Thaipusam festival) ಆಚರಣೆಯಲ್ಲಿ ನಿರತರಾಗಿದ್ದರು ಈ ವೇಳೆ ವಾಣಿಯಂಬಾಡಿಯ ಸ್ಥಳೀಯ ರಾಜಕೀಯ ಮುಖಂಡರೊಬ್ಬರು (local political leader) ಬಡವರಿಗೆ ಉಚಿತ ಸೀರೆ ಮತ್ತು ಪಂಚೆ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಉಚಿತವಾಗಿ ಸೀರೆ, ಪಂಜೆ ಪಡೆಯಲು ಬಂದ ಜನರು ಗಲಾಟೆ ಎಬ್ಬಿಸಿದ್ದಾರೆ. ಹೀಗಾಗಿ ಕಾಲ್ತುಳಿತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.


ಹಬ್ಬದ ಪ್ರಯುಕ್ತ ಉಚಿತ ಸೀರೆ, ಪಂಚೆ ವಿತರಣೆ


ತೈಪೂಸಂ ಎಂಬುದು ತಮಿಳು ತಿಂಗಳ ಥಾಯ್‌ನಲ್ಲಿ ಹುಣ್ಣಿಮೆಯಂದು ಹಿಂದೂ ತಮಿಳು ಸಮುದಾಯದಿಂದ ಆಚರಿಸಲಾಗುವ ಹಬ್ಬವಾಗಿದೆ. ತಮಿಳುನಾಡು ಪೊಲೀಸರ ಪ್ರಕಾರ, 'ತೈಪೂಸಂ' ಹಬ್ಬದ ಮುನ್ನ ಸ್ಥಳೀಯ ಮುಖಂಡ ಅಯ್ಯಪ್ಪನ್ ಎಂಬಾತ ಬಡವರಿಗೆ ಉಚಿತ ಸೀರೆ ಹಾಗೂ ಪಂಜೆ ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದ. ಈ ವೇಳೆ ಟೋಕನ್‌ಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಹೀಗಾಗಿ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ.


ಕಾಲ್ತುಳಿತಕ್ಕೆ ಬಲಿಯಾದ ಜನ


ನಾಲ್ವರು ಸಾವು, 11 ಮಂದಿಗೆ ಗಾಯ


ಈ ವೇಳೆ ಗಂಡಸರು, ಹೆಂಗಸರು, ಮುದುಕರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಜನರು ಉಚಿತ ಸೀರೆ, ಪಂಚೆಗಾಗಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಈ ವೇಳೆ ಅಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ಕಾಲ್ತುಳಿಕ್ಕೆ ಸಿಲುಕಿ ನಾಲ್ವರು ವೃದ್ಧೆಯರು ಗಾಯಗೊಂಡು, ಪ್ರಾಣ ಬಿಟ್ಟಿದ್ದಾರೆ. ಅಲ್ಲದೇ ಘಟನೆಯಲ್ಲಿ 11 ಮಂದಿಗೆ ಗಾಯವಾಗಿದೆ ಅಂತ ಹೇಳಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ


ಇದನ್ನೂ ಓದಿ: Pakistan: ಅಣುಬಾಂಬ್ ಹಿಡಿದು ಜಗತ್ತಿನಿಂದ ಹಣ ವಸೂಲಿ ಮಾಡಿ! ಪಾಕಿಸ್ತಾನಕ್ಕೆ ಮುಸ್ಲಿಂ ನಾಯಕನ ಬಿಟ್ಟಿ ಸಲಹೆ


ಪ್ರಜ್ಞೆ ಕಳೆದುಕೊಂಡು ಬಿದ್ದ ಜನರು


ಉಚಿತ ಸೀರೆ ಮತ್ತು ಉಡುಪನ್ನು ಸಂಗ್ರಹಿಸುವ ಧಾವಂತವು ಕಾಲ್ತುಳಿತಕ್ಕೆ ಕಾರಣವಾಯಿತು. ಒಂದೆಡೆ ನಾಲ್ವರು ವೃದ್ಧೆಯರು ಸಾವನ್ನಪ್ಪಿದ್ದರೆ, 11ಕ್ಕೂ ಅಧಿಕ ಮಂದಿ ಗಾಯಗೊಂಡರು. ಜೊತೆಯಲ್ಲಿ ಅನೇಕರು ಪ್ರಜ್ಞೆ ಕಳೆದುಕೊಂಡಿದ್ದಾರಂತೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ಗಳು ಸ್ಥಳಕ್ಕಾಗಮಿಸಿದಾಗಲೂ ಸ್ಥಳೀಯರು ಪ್ರಜ್ಞೆ ಕಳೆದುಕೊಂಡವರ ಮುಖದ ಮೇಲೆ ನೀರು ಎರಚುತ್ತಿರುವುದು ಕಂಡುಬಂದಿತ್ತು ಅಂತಿವೆ ಮೂಲಗಳು.


ಕಾಲ್ತುಳಿತದ ಸ್ಥಳ


ಸೂಕ್ತ ತನಿಖೆಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆದೇಶ


ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು ಮುಖ್ಯಮಂತ್ರಿಗಳು ಪ್ರತಿ ಮಹಿಳೆಯ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ. ಜೊತೆಗೆ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಇನ್ನು ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡಿಲ್ಲ. ಹೀಗಾಗಿ ಎಲ್ಲಾ ರೀತಿಯಿಂದಲೂ ತನಿಖೆ ನಡೆಯುತ್ತಿದೆ ಅಂತ ಪೊಲೀಸರು ಹೇಳಿದ್ದಾರೆ.

Published by:Annappa Achari
First published: