ಆಗಾಗ ಭಾರತ (India) ದೇಶದಲ್ಲಷ್ಟೆ ಅಲ್ಲ ಜಗತ್ತಿನಾದ್ಯಂತ ಹಲವು ಹೀನಾಯ ಕೃತ್ಯಗಳು ನಡೆಯುತ್ತಿರುವುದನ್ನು ನೋಡುತ್ತಲೇ ಇರುತ್ತೇವೆ. ಇತ್ತೀಚಿಗಷ್ಟೆ ಅಮೆರಿಕದ (America) ಶಾಲಾ ಶಿಕ್ಷಕಿಯೊಬ್ಬರು (School Teacher) ವಿದ್ಯಾರ್ಥಿಗಳಿಗೆ ತಿನ್ನಲು ನೀಡಬೇಕಾಗಿದ್ದ ಕೇಕ್ ನಲ್ಲಿ ತನ್ನ ಗಂಡನ ವೀರ್ಯ ಬೆರೆಸಿ ನೀಡಿದ್ದು ಅಸಹ್ಯಕರವಾಗಿತ್ತು. ಅದಕ್ಕೆ ಆಕೆಗೆ 41 ವರ್ಷಗಳ ಸೆರೆವಾಸದ ಶಿಕ್ಷೆಯನ್ನು (Punishment) ವಿಧಿಸಲಾಗಿದ್ದನ್ನು ಸ್ಮರಿಸಿಕೊಳ್ಳಬಹುದು. ಅಂಥದ್ದೆ ಮತ್ತೊಂದು ಬಗೆಯ ಪೈಶಾಚಿಕ ಹಾಗೂ ಸಮಾಜವೇ ತಲೆ ತಗ್ಗಿಸುವಂತಹ ಮತ್ತೊಂದು ಘಟನೆಯು ಇದೀಗ ರಾಜಸ್ಥಾನದಿಂದ ವರದಿಯಾಗಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಾಮುಕರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಪ್ರಾಣಿಗಳನ್ನು ಬಳಸಿಕೊಳ್ಳುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಇಂತಹದ್ದೇ ಹೀನ ಕೃತ್ಯವೊಂದು ರಾಜಸ್ಥಾನದಲ್ಲಿ ನಡೆದಿದ್ದು, ಹೇಯ ಕೃತ್ಯವೆಸಗಿದ ನಾಲ್ವರು ಕಾಮಾಂಧರನ್ನು ಬಂಧಿಸಲಾಗಿದೆ.
ರಾಜಸ್ಥಾನದ (Rajastan) ಅಲ್ವಾರ್ ಜಿಲ್ಲೆಯ ಭಿವಾಡಿ ಪ್ರದೇಶದ ಚುಹಾದ್ಪುರದಲ್ಲಿ ಈ ವಿಲಕ್ಷಣ ಘಟನೆಯೊಂದು ನಡೆದಿದ್ದು, ನಾಲ್ವರು ಕೀಚಕರು ಕರುವಿನ ಮೇಲೆ ಅತ್ಯಾಚಾರ (Rape) ಎಸಗಿದ್ದಾರೆ. ಅಲ್ಲದೇ ಮೂಕ ಪ್ರಾಣಿಯ ಮೇಲೆ ನಡೆಸಲಾದ ಈ ಹೇಯ ಕೃತ್ಯ ಕ್ಯಾಮರಾದಲ್ಲಿ (Camera) ಸೆರೆಯಾಗಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral) ಆಗಿದೆ. ಈ ನಡುವೆ ಕರುವಿನ ಮೇಲೆ ವಿಕೃತಿ ಮೆರೆದ ನಾಲ್ವರು ಆರೋಪಿಗಳನ್ನು ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಬಂಧಿಸಿದ್ದು, ಇವರನ್ನು ಜುಬೈರ್, ತಾಲಿಮ್, ವಾರಿಸ್ ಮತ್ತು ಚುನಾ ಎಂದು ಗುರುತಿಸಲಾಗಿದೆ.
ಮಲಗಿದ್ದ ಕರುವಿನ ಮೇಲೆರಗಿದ ಕಾಮುಕರು
ಕರುವಿನ ಮೇಲೆ ನೀಚ ಕೃತ್ಯವೆಸಗಿರುವ ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿ ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಅತ್ಯಾಚಾರ ಎಸಗುತ್ತಿದ್ದರೆ, ಮತ್ತೋರ್ವ ಆರೋಪಿ ಕರು ಗಲಾಟೆ ಮಾಡದಂತೆ ತಡೆದಿರುವ ವಿಡಿಯೋ ವೈರಲ್ ಆಗಿದ್ದು ಉಳಿದ ಇಬ್ಬರು ಆರೋಪಿಗಳ ಪೈಕಿ ಓರ್ವ, ಈ ಹೀನ ಕೃತ್ಯವನ್ನು ಮೊಬೈಲ್ನಲ್ಲಿ (Mobile) ಚಿತ್ರೀಕರಿಸುತ್ತಿದ್ದಾನೆ ಎನ್ನಲಾಗಿದೆ. ಅಲ್ಲದೇ ಆರೋಪಿಗಳು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಈ ಕೃತ್ಯವೆಸಗಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಫತೇಹ್ ಮೊಹಮ್ಮದ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Rape Case: ಮಂಗಳೂರಲ್ಲಿ ನಾಚಿಕೆಗೇಡಿನ ಘಟನೆ.. ತಾಯಿಯ ಮೇಲೆ ಮಗನಿಂದಲೇ ಅತ್ಯಾಚಾರ!
ಆರೋಪಿಗಳ ಬಂಧನ
ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ ಶಾಂತನು ಕುಮಾರ್ ಸಿಂಗ್, ಪ್ರಕರಣ ಸಂಬಂಧ ನಾಲ್ವರು ಕಾಮುಕರನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 377ರ ಅಡಿಯಲ್ಲಿ ರಾಜಸ್ಥಾನ್ ಪೊಲೀಸರು ಬಂಧಿಸಿದ್ದು, ಈ ಎಲ್ಲಾ ಆರೋಪಿಗಳು 20 ರಿಂದ 22 ವರ್ಷದೊಳಗಿನವರಾಗಿದ್ದು, ಆರೋಪಿಗಳು ಮರರಂಜನೆಗಾಗಿ ಇಂತದ್ದೊಂದು ನೀಚ ಕೃತ್ಯವೆಸಗಿದ್ದಾರೆ ಎಂದು ಮಾಹಿತಿ (Information) ನೀಡಿರುವ ಅವರು, ಕರುವನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಹಸುವಿನ ಕಳ್ಳ ಸಾಗಣೆ
ಕರುವಿನ ಮೇಲೆ ಅತ್ಯಾಚಾರದಂತಹ ನೀಚಕೃತ್ಯ ನಡೆದ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಹಸು ಕಳ್ಳಸಾಗಣೆ ವಿಚಾರವಾಗಿ ಪೊಲೀಸರು (Police) ಮತ್ತು ಕಳ್ಳಸಾಗಣಿಕೆದಾರರ ನಡುವೆ ಎನ್ಕೌಂಟರ್ ನಡೆದಿದೆ ಎನ್ನಲಾಗಿದೆ. ಅಲ್ಲದೇ ಕಳೆದ ವಾರವೂ ಸಹ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಹಸು ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಹಸುವನ್ನು ವಶಕ್ಕೆ ಪಡೆದಿರುವುದು ತಿಳಿದು ಬಂದಿದೆ.
ಇದನ್ನೂ ಓದಿ: Dharwad: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರು ಅಪ್ರಾಪ್ತ ಬಾಲಕರ ಬಂಧನ
ಈ ಪ್ರಕರಣದಲ್ಲಿ ಬಂಧಿಸಿದವರನ್ನು ದಿನೇಶ್ ಧಿವಾರ್, ಜಗತ್ ಯಾದವ್ ಮತ್ತು ಜಗಜಿತ್ ಸಿಂಗ್ ಎನ್ನಲಾಗಿದೆ. ಈ ಮೂವರುಗಳ ವಿರುದ್ಧ ಶೇಖ್ಪುರ ಅಹಿರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಒಂದು ಜೀಪನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಶಾಂತನು ಕುಮಾರ್ ಸಿಂಗ್, ಕೆಲವು ದಿನಗಳ ಹಿಂದೆ ಕೂಡ ಗೋಹತ್ಯೆ ಆರೋಪದಲ್ಲಿ ಭಾಗಿಯಾಗಿ ಐದು ತಿಂಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದ್ದರೆನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ