• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tragedy: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು, ಮಕ್ಕಳ ಅನಾರೋಗ್ಯದಿಂದ ದೊಡ್ಡವರ ದುಡುಕಿನ ನಿರ್ಧಾರ!

Tragedy: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು, ಮಕ್ಕಳ ಅನಾರೋಗ್ಯದಿಂದ ದೊಡ್ಡವರ ದುಡುಕಿನ ನಿರ್ಧಾರ!

ಆತ್ಮಹತ್ಯೆ

ಆತ್ಮಹತ್ಯೆ

ತಮ್ಮ ಮಕ್ಕಳನ್ನು ಆರೋಗ್ಯದಿಂದ ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ ದಂಪತಿ ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • News18 Kannada
  • 5-MIN READ
  • Last Updated :
  • Hyderabad, India
  • Share this:

ಹೈದರಾಬಾದ್​​: ಇಲ್ಲಿನ ಕುಷಾಯಿಗುಡದಲ್ಲಿ (Kushaiguda) ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಸತೀಶ್, ಆತನ ಪತ್ನಿ ವೇದಾ ಹಾಗೂ ಮಕ್ಕಳಾದ ಒಂಬತ್ತು ವರ್ಷದ ನಿಶಿಕೇತ್ , ಐದು ವರ್ಷದ ನಿಹಾಲ್ ಎಂದು ಗುರುತಿಸಲಾಗಿದೆ. ಪೊಲೀಸರ (Police) ಪ್ರಕಾರ, ಸತೀಶ್ ಅವರ ಮಗ ನಿಶಿಕೇತ್ ಮೆದುಳು ಸಂಬಂಧಿತ ಕಾಯಿಲೆಯಿಂದ ಹಾಗೂ ಎರಡನೇ ಮಗ ನಿಹಾಲ್ ಮಾನಸಿಕ ಅಸ್ವಸ್ಥತೆಯಿಂದ (Mental Illness) ಬಳಲುತ್ತಿದ್ದರು ಎನ್ನಲಾಗಿದೆ. ಇದರಿಂದ ಸತೀಶ್, ಪತ್ನಿ ವೇದಾ ತಮ್ಮ ಮಕ್ಕಳ ಆರೋಗ್ಯದ ವಿಚಾರವಾಗಿ ಮಾನಸಿಕವಾಗಿ ಕುಗ್ಗಿದ್ದರು. ತಮ್ಮ ಮಕ್ಕಳ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.


ಮಕ್ಕಳನ್ನು ಕೊಂದು, ದಂಪತಿ ಆತ್ಮಹತ್ಯೆ


ದಂಪತಿಗೆ ತಮ್ಮ ಮಕ್ಕಳನ್ನು ಆರೋಗ್ಯದಿಂದ ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದರು, ಇದೇ ಕಾರಣದಿಂದ ಮಕ್ಕಳನ್ನು ಕೊಂದು ತಾವೂ ಸಾಯಲು ನಿರ್ಧರಿಸಿದ್ದಾರೆ. ಮೊದಲು ಮಕ್ಕಳಿಗೆ ವಿಷ ನೀಡಿ ಸಾಯಿಸಿದ್ದಾರೆ, ಆ ಬಳಿಕ ದಂಪತಿಯೂ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಕುಟುಂಬಸ್ಥರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ


ಕುಟುಂಬಸ್ಥರು ಸತೀಶ್​ಗೆ ಕರೆ ಮಾಡಿದ್ದು, ಯಾರೊಬ್ಬರೂ ಸ್ಪಂದಿಸದೇ ಇದ್ದಾಗ ಅನುಮಾನಗೊಂಡು ಮನೆಗೆ ಬಂದಿದ್ದಾರೆ. ಆಗ ನಾಲ್ವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ತಾಯಿ ಮತ್ತು ಮಗುವಿನ ಶವಗಳು ಹಾಸಿಗೆಯ ಮೇಲೆ ಬಿದ್ದಿದ್ದವು. ಸತೀಶ್ ಶವ ಕೋಣೆಯ ಮೂಲೆಯಲ್ಲಿ ಪತ್ತೆಯಾಗಿದೆ ಎಂದು ಕುಷಾಯಿಗುಡ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Actress Death: ಹೋಟೆಲ್ ರೂಮ್​ನಲ್ಲಿ ನಟಿ ಮೃತದೇಹ ಪತ್ತೆ!


ಶುಕ್ರವಾರವೇ ಆತ್ಮಹತ್ಯೆ


ಇಡೀ ಕುಟುಂಬವು ಶುಕ್ರವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸತೀಶ್ ಸಂಬಂಧಿಕರು ಶನಿವಾರ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಮಗೆ ಮಧ್ಯಾಹ್ನ 2 ಗಂಟೆಗೆ ಮಾಹಿತಿ ತಿಳಿಯಿತು. ಮೃತರ ದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


>


ನಟಿ ಆತ್ಮಹತ್ಯೆ


ಭೋಜ್​ಪುರಿಯ ಖ್ಯಾತ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ವಾರಣಾಸಿ ಹೊಟೇಲ್​ನಲ್ಲಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜನಿಸಿದ ಆಕಾಂಕ್ಷಾ ದುಬೆ ಮೇರಿ ಜಂಗ್ ಮೇರಾ ಫೈಸ್ಲಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಸಿನಿಮಾದ ಶೂಟಿಂಗ್​ಗಾಗಿ ವಾರಣಾಸಿಯ ಖಾಸಗಿ ಹೊಟೇಲ್​ನಲ್ಲಿ ತಂಗಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!


ಸಾಯುವ ಕೆಲವೇ ನಿಮಿಷಗಳ ಹಿಂದೆ ವಿಡಿಯೋ ಪೋಸ್ಟ್

top videos


    ಆಕಾಂಕ್ಷಾ ದುಬೆ ಸಾಯುವ ಕೆಲವು ಗಂಟೆಗಳ ಮುನ್ನಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಭೋಜ್‌ಪುರಿಯ ಹಿಲೋರೆ ಮಾರೆ ಎಂಬ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಲು  ಪ್ರಯತ್ನಪಟ್ಟಿದ್ದರು. ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈ ವಿಡಿಯೋ ಪೋಸ್ಟ್ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಅವರು ಕೊನೆಯುರೆಳೆದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಉಂಟು ಮಾಡಿದೆ.

    First published: