ಜಾತ್ರೆಯಲ್ಲಿ (Festival) ವಿಗ್ರಹ ಹೊತ್ತಿಕೊಂಡಿದ್ದ ಕ್ರೇನ್ (Crane) ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಅಪಘಾತದ ಸಮಯದಲ್ಲಿ ಸುಮಾರು ಒಂಬತ್ತು ಜನ ಭಕ್ತರು ಗಾಯಗೊಂಡಿದ್ದಾರೆ ಎಂದು ಪೊಲೀಸರು (Police) ಮಾಹಿತಿ ನೀಡಿದ್ದಾರೆ. ತಮಿಳುನಾಡಿನ (Tamil Nadu) ರಾಣಿಪೇಟೆ ಜಿಲ್ಲೆಯ ಅರಕ್ಕೋಣಂ ತಾಲೂಕಿನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಊರ ಜಾತ್ರೆಯ ಸಂಭ್ರಮದಲ್ಲಿದ್ದ ಜನರೀಗ ನೋವಿನಲ್ಲಿದ್ದಾರೆ. ಅರಕ್ಕೋಣಂ ತಾಲೂಕಿನ ಕಿಲ್ವೀಡಿ ಗ್ರಾಮದಲ್ಲಿರುವ ಈ ದ್ರೌಪದಿ ದೇವಾಲಯದಲ್ಲಿ (Temple) ಪ್ರತಿವರ್ಷದಂತೆ ಸಂಕ್ರಾಂತಿ ಹಬ್ಬದ ನಂತರ ನಡೆಯುವ ದ್ರೌಪತಿ ಅಮ್ಮನವರ ಉತ್ಸವ ಅದ್ಧೂರಿಯಾಗಿ ಸಾಗುತ್ತಿದ್ದಾಗ ಈ ದುರ್ಘಟನೆ (Accident) ನಡೆದಿದೆ.
ಆಕಸ್ಮಿಕವಾಗಿ ಕುಸಿದ ಕ್ರೇನ್
ಸಾಮಾನ್ಯವಾಗಿ ಪ್ರತಿವರ್ಷ ಈ ಜಾತ್ರೆಯ ಸಮಯದಲ್ಲಿ ಸಂಜೆಯ ನಂತರ ದೇವಿಯ ವಿಗ್ರಹದ ಮೆರವಣಿಗೆ ಆರಂಭವಾಗುತ್ತದೆ. ಕ್ರೇನ್ ನಲ್ಲಿದ್ದ ದೇವಿಯ ಮೂರ್ತಿಯ ಬಳಿ ಸುಮಾರು 8 ಜನ ಭಕ್ತರು ನಿಂತಿದ್ದರು. ಈ 8 ಜನ ಭಕ್ತರಿಂದ ಬರುವ ಹೂಮಾಲೆಗಳನ್ನು ದೇವಿಗೆ ಅರ್ಪಿಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಕ್ರೇನ್ ಬಿದ್ದ ಪರಿಣಾಮ ಸಾವು,ನೋವು ಸಂಭವಿಸಿದೆ.
ಈ ಘಟನೆ ನಿನ್ನೆ ರಾತ್ರಿ ಸುಮಾರು 8.15 ಗಂಟೆಗೆ ನಡೆದಿದ್ದು, ದೇವಿಗೆ ಹಾರ ಹಾಕಲು ಕ್ರೇನ್ನಲ್ಲಿ 8 ಜನ ನಿಂತಿದ್ದ ಕಾರಣದಿಂದ, ಭಾರ ತಡೆಯಲು ಆಗದೇ ಕ್ರೇನ್ ಒಂದು ಬದಿ ವಾಲಿ, ನಂತರ ಕುಸಿದುಬಿದ್ದಿದೆ. ಮಾಹಿತಿಯ ಪ್ರಕಾರ ಇದ್ದಕ್ಕಿದ್ದಂತೆ ಕ್ರೇನ್ ಕುಸಿದ ಕಾರಣ 3 ಜನ ಸ್ಥಳದಲ್ಲಿ ಸಾವಿಗೀಡಾಗಿದ್ದು, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರ ತುಣುಕು ಇಲ್ಲಿದೆ.
#TamilNadu | 4 people died & 9 others were injured after a #cranecollapsed during a temple festival event in #Keelveethi in #Arakkonam. #BREAKING #craneaccident #arakkonam #Accident #Temple #Death #India | #Crane | #Accident | #Dead | #Injury | #TN | #TempleFestival | pic.twitter.com/iKCjaw7OFV
— Harish Deshmukh (@DeshmukhHarish9) January 23, 2023
ಕ್ರೇನ್ ಬಳಸಲು ಇರಲಿಲ್ಲ ಅನುಮತಿ
ಇನ್ನು ಪೊಲೀಸ್ ಅಧಿಕಾರಿಗಳ ಪ್ರಕಾರ ಈ ದೇವಸ್ಥಾನದ ಜಾತ್ರೆಯಲ್ಲಿ ಕ್ರೇನ್ ಬಳಸಲು ಯಾವುದೇ ಅನುಮತಿ ಪಡೆದಿರಲಿಲ್ಲ. ಅಲ್ಲದೇ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಹ ಮಾಹಿತಿ ನೀಡಿರಲಿಲ್ಲವಂತೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೇನ್ ಆಪರೇಟರ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಇದು ಖಾಸಗಿ ದೇವಾಲಯವಾಗಿದ್ದು, ಪ್ರತಿವರ್ಷ ಇಲ್ಲಿ ಮಕರ ಸಂಕ್ರಾಂತಿಯ ನಂತರ ದ್ರೌಪತಿ ಮತ್ತು ಮಂಡಿಯಮ್ಮನ್ ದೇವಾಲಯಗಳಲ್ಲಿ ಉತ್ಸವ ಮಾಡಲಾಗುತ್ತದೆ. ಈ ಉತ್ಸವದ ಸಮಯದಲ್ಲಿ ಭಕ್ತರು ದೇವರಿಗೆ ಹಾರ ನೀಡುತ್ತಾರೆ. ಅದನ್ನು ಮೂರ್ತಿಗೆ ಹಾಕಲು, ವಿಗ್ರಹದ ಬಳಿ ಕೆಲ ಜನರು ನಿಂತಿರುತ್ತಾರೆ. ಸಾಮಾನ್ಯವಾಗಿ ಟ್ರ್ಯಾಕ್ಟರ್ ಅಥವಾ ಬೇರೆ ಗಾಡಿಗಳಲ್ಲಿ ವಿಗ್ರಹದ ಮೆರವಣಿಗೆ ಮಾಡಲಾಗುತ್ತದೆ. ಆದರೆ, ಈ ವರ್ಷ ದೇವರಿಗೆ ಮಾಲೆ ಹಾಕಲು ಕ್ರೇನ್ ಬಳಸಿದ್ದಾರೆ. ಹಾಗಾಗಿ ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ್ ಪಾಂಡಿಯನ್ ಮಾಹಿತಿ ಕೊಟ್ಟಿದ್ದಾರೆ.
ಈ ಘಟನೆಯಲ್ಲಿ 39 ವರ್ಷದ ಕೆ.ಮುತ್ತುಕುಮಾರನ್, 40 ವರ್ಷದ ಎಸ್.ಭೂಪಾಲನ್ ಹಾಗೂ 17 ವರ್ಷದ ಬಿ ಜ್ಯೋತಿಬಾಬು ಸೇರಿದಂತೆ ಒಟ್ಟು ನಾಲ್ವರು ಸಾವಿಗೀಡಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ