ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಸೈನಿಕರಿಗೆ ಗಾಯ

ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್, ಅಮೆರಿಕ ಮಧ್ಯ ಏಷ್ಯಾದಲ್ಲಿರುವ ತಮ್ಮ ವಾಯುನೆಲೆಗಳನ್ನು ತೆರವುಗೊಳಿಸಬೇಕು. ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ನಮ್ಮ ಪಾಲಿಗೆ ಅಮೆರಿಕದ ಸೈನಿಕರೇ ಉಗ್ರಗಾಮಿಗಳು. ಹೀಗಾಗಿ ನಾವು ಉಗ್ರಗಾಮಿಗಳ ವಿರುದ್ಧ ಹೋರಾಡುತ್ತೇವೆಯೇ ಹೊರತು, ಅಮೆರಿಕದ ವಿರುದ್ಧ ಯುದ್ಧವನ್ನು ಭಯಸುವುದಿಲ್ಲ ಎಂದು ಹೇಳುವ ಮೂಲಕ ಯುದ್ಧವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.

zahir | news18-kannada
Updated:January 12, 2020, 11:13 PM IST
ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಸೈನಿಕರಿಗೆ ಗಾಯ
ಸಾಂದರ್ಭಿಕ ಚಿತ್ರ
  • Share this:
ಇರಾಕ್(ಜ.12):  ಸೇನಾ ಮುಖ್ಯಸ್ಥ ಖಾಸಿಂ ಸುಲೈಮಾನಿ ಹತ್ಯೆ ನಂತರ ಇರಾನ್ ಸೇನೆ ಅಮೆರಿಕ ಮೇಲೆ ಪ್ರತೀಕಾರ ಕ್ರಮಗಳನ್ನು ಮುಂದುವರೆಸಿದೆ. ಇಂದು ಇರಾಕ್​ನ ಬಲಾದ್​ನಲ್ಲಿರುವ ಅಮೆರಿಕ ಸೇನಾ ವಾಯುನೆಲೆಗಳ ಮೇಲೆ ನಾಲ್ಕು ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ನಾಲ್ವರು ಇರಾಕಿ ಸೈನಿಕರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.​ 

ಬಾಗ್ದಾದ್‌ನ ಉತ್ತರದಿಂದ 80 ಕಿ.ಮೀ (50 ಮೈಲಿ) ದೂರದಲ್ಲಿರುವ ರನ್‌ವೇಯಲ್ಲಿ ಕ್ಷಿಪಣಿ ಬಾಂಬ್‌ಗಳು ಬಿದ್ದಿವೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಈ ವೇಳೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇರಾಕ್​ನ ನಾಲ್ವರು ಸೈನಿಕರು ಗಾಯಗೊಂಡಿದ್ದು, ಯಾವುದೇ ಸಾವು ನೋವು ಉಂಟಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇರಾಕ್​ನಿಂದ  ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಬಾಗ್ದಾದ್​ಗೆ ನಿಯೋಗವನ್ನು ಕಳುಹಿಸಿಕೊಡುವಂತೆ ಮೂರು ದಿನಗಳ ಹಿಂದೆ ಇರಾಕ್‌ ಉಸ್ತುವಾರಿ ಪ್ರಧಾನಿ ಅದೆಲ್ ಅಬ್ದೆಲ್ ಮಹ್ದಿ ಅವರು ಅಮೆರಿಕಾಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ವಾಯು ನೆಲೆಗಳ ಮೇಲೆ ರಾಕೆಟ್ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರೊಂದಿಗೆ ಗುರುವಾರ ದೂರವಾಣಿ ಮೂಲಕ ಮಾತನಾಡಿದ ಅಬ್ದೆಲ್ ಮಹ್ದಿ, ಇರಾಕ್‌ನಿಂದ ವಿದೇಶಿ ಪಡೆಗಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲು ಮತ್ತು ಸಂಸತ್ತಿನಲ್ಲಿ ಈ ನಿರ್ಧಾರವನ್ನು ಜಾರಿಗೆ ತರಲು ತಮ್ಮ ಪ್ರತಿನಿಧಿಗಳನ್ನು ಇರಾಕ್‌ಗೆ ಕಳುಹಿಸುವಂತೆ ವಿನಂತಿಸಿಕೊಂಡಿದ್ದರು.

ಇರಾಕ್ ಸರ್ಕಾರದ ಈ ತೀರ್ಮಾನದ ಬೆನ್ನಲ್ಲೇ ದಾಳಿ ನಡೆಸಲಾಗಿದ್ದು, ಮತ್ತೆ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇರಾಕ್​ನ ಹಲವು ಭಾಗಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ನಿರ್ನಾಮ ಮಾಡಲು 5,200 ಯುಎಸ್ ಸೈನಿಕರು ನೆಲೆಸಿದ್ದು, ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.

ಇನ್ನು ಮೂರು ದಿನಗಳ ಹಿಂದೆ ಇರಾಕ್​ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಅಮೆರಿಕಾದ 80 ಸೈನಿಕರನ್ನು ಕೊಂದಿದ್ದೇವೆ ಎಂದು ಇರಾನ್ ಹೇಳಿಕೊಂಡಿತ್ತು.

ಆದರೆ ಈ ಸಂಬಂಧ ಅಮೆರಿಕ ಶ್ವೇತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ, ''ಇರಾನ್ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ವಾಯುನೆಲೆಗಳಿಗೆ ಹಾನಿ ಉಂಟಾಗಿದೆಯೇ ಹೊರತು ದೇಶದ ಯಾವೊಬ್ಬ ಸೈನಿಕನೂ ಮೃತಪಟ್ಟಿಲ್ಲ. ಮಧ್ಯ ಏಷ್ಯಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಸೈನಿಕರು ಹಾಗೂ ಅಮೆರಿಕದ ಪ್ರಜೆಗಳು ಸುರಕ್ಷಿತವಾಗಿದ್ದಾರೆ'' ಎಂದು ತಿಳಿಸಿದ್ದರು. ಅಲ್ಲದೆ, ಇರಾನ್ ವಿರುದ್ಧದ ಯುದ್ಧವನ್ನು ತಳ್ಳಿ ಹಾಕಿದ್ದರು.ಹಾಗೆಯೇ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್, ''ಅಮೆರಿಕ ಮಧ್ಯ ಏಷ್ಯಾದಲ್ಲಿರುವ ತಮ್ಮ ವಾಯುನೆಲೆಗಳನ್ನು ತೆರವುಗೊಳಿಸಬೇಕು. ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ನಮ್ಮ ಪಾಲಿಗೆ ಅಮೆರಿಕದ ಸೈನಿಕರೇ ಉಗ್ರಗಾಮಿಗಳು. ಹೀಗಾಗಿ ನಾವು ಉಗ್ರಗಾಮಿಗಳ ವಿರುದ್ಧ ಹೋರಾಡುತ್ತೇವೆಯೇ ಹೊರತು, ಅಮೆರಿಕದ ವಿರುದ್ಧ ಯುದ್ಧವನ್ನು ಭಯಸುವುದಿಲ್ಲ'' ಎಂದು ಹೇಳುವ ಮೂಲಕ ಯುದ್ಧವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.

ಆದರೀಗ ಇರಾಕ್​ನಲ್ಲಿರುವ ಅಮೆರಿಕ ವಾಯುನೆಲೆಗಳ ನಾಲ್ಕು ರಾಕೆಟ್​ಗಳು ಅಪ್ಪಳಿಸಿವೆ ಎಂಬುದನ್ನು ಮಿಲಿಟರಿ ಮೂಲಗಳು ದೃಢಪಡಿಸಿದೆ. ಹೀಗಾಗಿ ಇರಾನ್ ವಿದೇಶಾಂಗ ಸಚಿವರು ಹೇಳಿದಂತೆ ಅಮೆರಿಕ ಸೈನಿಕರ ಮೇಲೆ ದಾಳಿ ಮುಂದುವರೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

(details awaited)
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ