• Home
 • »
 • News
 • »
 • national-international
 • »
 • Mars: ಮಂಗಳನ ಅಂಗಳಕ್ಕೆ ನಾಲ್ಕು ಜನರ 45 ದಿನಗಳ ಪ್ರಯಾಣ ಆರಂಭ..!

Mars: ಮಂಗಳನ ಅಂಗಳಕ್ಕೆ ನಾಲ್ಕು ಜನರ 45 ದಿನಗಳ ಪ್ರಯಾಣ ಆರಂಭ..!

ಮಂಗಳ ಗ್ರಹ

ಮಂಗಳ ಗ್ರಹ

Phobos: ಇದೊಂದು ನಿಜಕ್ಕೂ ಅದ್ಭುತವಾದ ಪ್ರವಾಸವಾಗಿದೆ. ನಭೋ ಮಂಡಲದಲ್ಲಿ ನಡೆಯುವ ಅದೆಷ್ಟೋ ಪ್ರಸಂಗಗಳು ಮನುಷ್ಯನಿಗೆ ತಿಳಿದಿಲ್ಲ. ಹಾಗಾಗಿ ಈ ಪ್ರವಾಸವೂ ಸಹ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು ಪ್ರಯಾಣದ ಸಂದರ್ಭದಲ್ಲಿ ಏನೆಲ್ಲ ನಡೆಯಲಿವೆ ಎಂಬುದರ ಬಗ್ಗೆ ತಿಳಿಯಲು ಇದು ಅನುಕೂಲ ಮಾಡಿಕೊಡಲಿದೆ.

ಮುಂದೆ ಓದಿ ...
 • Share this:

  ಇಂದು ಮನುಷ್ಯ ಎಲ್ಲ ರಂಗಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದಾನೆ. ಭೂಮಿಯ (Earth) ಆಳದಿಂದ ಹಿಡಿದು ಆಗಸದ ಎತ್ತರದಲ್ಲೂ ಹಲವು ವಿಸ್ಮಯಕಾರಿ ಸಂಶೋಧನೆಗಳನ್ನು ಇಂದು ಮನುಷ್ಯ ಮಾಡಿದ್ದಾನೆ. ಉಪಗ್ರಹಗಳ (Satellite) ಮೂಲಕ ಚಂದ್ರನ (Moon) ಅಂಗಳದಲ್ಲೂ ಮನುಷ್ಯ ಕಾಲೂರಿದ್ದು ಈಗ ಹಳೆಯ ಸಂಗತಿ. ಆದರೂ ತಂತ್ರಜ್ಞಾನದ (Technology) ಹಸಿವು ತಣಿಯದ ಮನುಷ್ಯನಿಗೆ ಇನ್ನೂ ಏನೇನೋ ಸಂಶೋಧನೆ (Research) ಮಾಡಬೇಕೆಂಬ ಉತ್ಕಟ ಹಂಬಲ. ಅದರ ಕುರುಹಾಗಿ ಈಗ ನಾಲ್ಕು ಜನರು ಮಂಗಳನ (Mars) ಅಂಗಳದಲ್ಲಿರುವ ಫೊಬೋಸ್ ಚಂದ್ರನ ಪ್ರವಾಸ ಕೈಗೊಂಡಿರುವ ಸುದ್ದಿ ವರದಿಯಾಗಿದೆ. ಮಂಗಳನಿಗೆ ಒಂದಕ್ಕಿಂತ ಹೆಚ್ಚು ಚಂದ್ರಗಳಿದ್ದು ಅದರಲ್ಲಿ ಫೊಬೋಸ್ (Phobos) ಕೂಡ ಒಂದು. ಸದ್ಯ ಈ ನಾಲ್ಕು ಜನರು ನಿಜಕ್ಕೂ ಮಂಗಳ ಗ್ರಹಕ್ಕೇನೆ ತೆರಳುತ್ತಿಲ್ಲ, ಬದಲಾಗಿ ಮುಂದೊಮ್ಮೆ ಭವಿಷ್ಯದಲ್ಲಿ ಅಲ್ಲಿಗೆ ತೆರಳುವ ದೃಷ್ಟಿಯಿಂದ ಅನುಕೂಲವಾಗಲೆಂದು ಸಿದ್ಧತೆಯ ಮೊದಲ ಹಂತ ಎಂಬಂತೆ ಮಂಗಳನ ಚಂದ್ರನಾದ ಫೊಬೋಸ್ ಬಳಿ ತೆರಳುತ್ತಿದ್ದಾರೆ.


  ಇದೊಂದು ನಿಜಕ್ಕೂ ಅದ್ಭುತವಾದ ಪ್ರವಾಸವಾಗಿದೆ. ನಭೋ ಮಂಡಲದಲ್ಲಿ ನಡೆಯುವ ಅದೆಷ್ಟೋ ಪ್ರಸಂಗಗಳು ಮನುಷ್ಯನಿಗೆ ತಿಳಿದಿಲ್ಲ. ಹಾಗಾಗಿ ಈ ಪ್ರವಾಸವೂ ಸಹ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು ಪ್ರಯಾಣದ ಸಂದರ್ಭದಲ್ಲಿ ಏನೆಲ್ಲ ನಡೆಯಲಿವೆ ಎಂಬುದರ ಬಗ್ಗೆ ತಿಳಿಯಲು ಇದು ಅನುಕೂಲ ಮಾಡಿಕೊಡಲಿದೆ. ಹಾಗಾಗಿ ನಭೋ ವಿಜ್ಞಾನಿಗಳ ಗಮನ ಈಗ ಈ ಪ್ರವಾಸದ ಮೇಲಿದೆ.


  ಈ ಪ್ರವಾಸದ ಮೂಲಕ, ಅವರು ಮನುಷ್ಯ ಈ ಪ್ರಯಾಣದಲ್ಲಿ ಯಾವೆಲ್ಲ ರೀತಿಯ ಸವಾಲುಗಳನ್ನು ಎದುರಿಸಬೇಕಾಗಬಹುದು, ನಭೋ ಮಂಡಲದ ವಾತಾವರಣ ಯಾವ ರೀತಿ ಮನುಷ್ಯನ ಶರೀರದ ಮೇಲೆ ಪರಿಣಾಮಗಳನ್ನು ಬೀರಬಹುದು ಎಂಬೆಲ್ಲ ಅಂಶಗಳನ್ನು ಕರಾರುವಕ್ಕಾಗಿ ದಾಖಲಿಸಲು ನಾಲ್ಕು ಜನರ ತಂಡ ಈ ಸಾಹಸಕ್ಕೆ ಕೈಹಾಕಿರುವುದಾಗಿ ವರದಿಯಾಗಿದೆ.


  ಮುಂದಿನ 45 ದಿನಗಳ ಕಾಲ ಒಂದೆ ಕಡೆ ಇರುವಂತೆ ನಾಲ್ಕು ಸದಸ್ಯರ ತಂಡವೊಂದು ಹ್ಯೂಮನ್ ಎಕ್ಸ್‌ಪ್ಲೋರೇಷನ್ ರಿಸರ್ಚ್ ಅನಾಲಾಗ್ (HERA) ಎಂಬ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ಉಪಕರಣದಲ್ಲಿ ಪ್ರವೇಶಿಸಿದ್ದು ಇದರ ಮೂಲಕ ಮಂಗಳನ ಒಂದು ಸ್ವಾಭಾವಿಕ ಉಪಗ್ರಹವಾದ ಫೊಬೋಸ್ ಬಳಿಗೆ ತೆರಳಿ ಹತ್ತಿರದಿಂದ ಚಿತ್ರಗಳನ್ನು ಸೆರೆ ಹಿಡಿಯಲಿದ್ದಾರೆ. ಈ ಪ್ರಾಥಮಿಕ ಪ್ರಯೋಗವು ಮುಂದೆ ಮಂಗಳನ ಬಗ್ಗೆ ನಡೆಸಬಹುದಾಗಿರುವ ಸಂಶೋಧನೆಗೆ ಬುನಾದಿ ಒದಗಿಸುವ ನಂಬಿಕೆ ವಿಜ್ಞಾನಿಗಳಲ್ಲಿದೆ.


  ಇದನ್ನು ಓದಿ: Viral Video: ಮೃಗಾಲಯದಲ್ಲಿ ಮಗುವನ್ನು ಕರಡಿ ಬಳಿಗೆ ಎಸೆದ ತಾಯಿ! ಮುಂದೆ ಆಗಿದ್ದೇನು?


  ಈ ಖಗೋಳಯಾನದ ಅನ್ವೇಷಣೆಯು ಸಾಕಷ್ಟು ರೋಮಾಂಚನ ಹಾಗೂ ಸವಾಲುಗಳಿಂದ ಕೂಡಿದ್ದು ನಾಲ್ಕು ಸದಸ್ಯರ ತಂಡವು ಈ ಸಾಹಸಕ್ಕೆ ಕೈಹಾಕಿದೆ. ಈ ತಂಡದಲ್ಲಿರುವ ಸದಸ್ಯರುಗಳೆಂದರೆ, ಜೇರ್ಡ್ ಬ್ರಾಡ್ರಿಕ್, ಪೀಟ್ರೋ ಡಿ ಟಿಲಿಯೊ, ಡ್ರಾಗೋಸ್ ಮೈಕೆಲ್ ಪೊಪೆಸ್ಕು, ಹಾಗೂ ಪ್ಯಾಟ್ರಿಕ್ ರಿಡ್ಜ್ ಲೆ. 45 ದಿನಗಳ ಈ ನಭೋ ಪ್ರವಾಸದಲ್ಲಿ ಈ ಸದಸ್ಯರುಗಳು ಹಲವು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಿದ್ದಾರೆ, ಏಕಾಂತತೆಯ ಅನುಭವ ಹಾಗೂ ಪರಿಣಾಮಗಳನ್ನು ದಾಖಲಿಸಲಿದ್ದಾರೆ, ಚಿತ್ರಗಳನ್ನು ಸೆರೆ ಹಿಡಿಯಲಿದ್ದಾರೆ ಎಂಬುದು ವರದಿಯಾಗಿದೆ. ಮಾರ್ಚ್ 14ರಂದು ಈ ಪ್ರವಾಸ ಕೊನೆಗೊಳ್ಳಲಿದೆ.


  ಹ್ಯೂಮನ್ ಎಕ್ಸ್‌ಪ್ಲೋರೇಷನ್ ರಿಸರ್ಚ್ ಅನಾಲಾಗ್ (HERA) ಎಂದರೇನು..?


  ಇದೊಂದು ಸದೃಶವಾದ ಕಾರ್ಯಾಚರಣೆಯಾಗಿದ್ದು ಇದು ಗಗನ ಯಾತ್ರಿಗಳು, ವಿಜ್ಞಾನಿಗಳು, ಇಂಜಿನಿಯರುಗಳ ತಂಡವನ್ನು ಭವಿಷ್ಯದಲ್ಲಿ ಉಲ್ಕೆಗಳು, ಮಂಗಳ ಗೃಹ ಹಾಗೂ ಚಂದ್ರನ ಕುರಿತು ಅನ್ವೇಷಣೆ ಮಾಡಲು ಸಕ್ಷಮವಾಗುವಂತೆ ಸಜ್ಜಾಗಿಸುತ್ತದೆ. ನಾಸಾ ಹೇಳುವಂತೆ ಇದೊಂದು ಭೂ ಪರೀಕ್ಷೆಯಾಗಿದ್ದು ಇದರಲ್ಲಿ ತಂಡದ ಸದಸ್ಯರು ಭೂಮಿಗಿಂತಲೂ ವೈಪರಿತ್ಯವಾದ ಸಂದರ್ಭಗಳನ್ನು ಎದುರಿಸುತ್ತಾರೆ. ಅವರಲ್ಲಿ ಸಂಭಾಷಣೆಯ ವ್ಯತ್ಯಾಸ ಮುಂತಾದ ಅಂಶಗಳ ಮೇಲೆ ಗಮನ ಹರಿಸಲಾಗುತ್ತದೆ.
  ಇದನ್ನು ಓದಿ: Arrest: ಮದುವೆ ಸಮಾರಂಭಗಳಲ್ಲಿ ಕ್ಯಾಮೆರಾ ಕದಿಯುತ್ತಿದ್ದ ಕಳ್ಳ! ಈತ ಎಷ್ಟು ಮೌಲ್ಯದ ಕ್ಯಾಮೆರಾ ಕದ್ದಿದ್ದಾನೆ ಗೊತ್ತಾ?


  "ಈ ಹೆರಾ ಅಭಿಯಾನದ ಮೂಲಕ ನಾವು ತಂಡವು ಹೇಗೆ ವ್ಯವಹರಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಯುತ್ತಿದ್ದೇವೆ. ಏಕೆಂದರೆ ಈ ತಂಡವು ಭೂಮಿಯೊಂದಿಗೆ ಅತ್ಯಂತ ಮಿತವ್ಯಯವಾದ ಸಂಪರ್ಕವನಷ್ಟೆ ಹೊಂದಿರುತ್ತಾರೆ" ಎಂದು ವಿವರಣೆ ನೀಡುತ್ತಾರೆ. ಕಾರ್ಯಾಚರಣೆ ಹಾಗೂ ಸಂಘಟಣೆಯ ವಿಜ್ಞಾನಿಯಾದ ಬ್ರೆಂಡಾನ್ ವೆಸ್ಸಿ ಅವರು.


  ಈಗಾಗಲೇ ಹೆರಾದ ಮಿಷನ್ 1, ನವೆಂಬರ್ 15, 2021ರಂದು ಕೊನೆಗೊಂಡಿದೆ ಹಾಗೂ ಈ ಸರಣಿಯಲ್ಲಿ ಕೊನೆಯ ಮಿಷನ್ ಸೆಪ್ಟೆಂಬರ್ 12, 2022ರಂದು ಕೊನೆಗೊಳ್ಳಲಿದೆ.

  Published by:Harshith AS
  First published: