ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಯುವಕನಿಗೆ ರಸ್ತೆಯಲ್ಲಿ ತೆವಳುವಂತೆ ಒತ್ತಾಯ; ವಿಡಿಯೋ ವೈರಲ್​​

Latha CG | news18
Updated:October 4, 2018, 3:45 PM IST
ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಯುವಕನಿಗೆ ರಸ್ತೆಯಲ್ಲಿ ತೆವಳುವಂತೆ ಒತ್ತಾಯ; ವಿಡಿಯೋ ವೈರಲ್​​
Latha CG | news18
Updated: October 4, 2018, 3:45 PM IST
-ನ್ಯೂಸ್​ 18 ಕನ್ನಡ

ಜುನಾಗಢ,(ಅ.04): ಗುಜರಾತ್​ನ ಜುನಾಘಡ ಜಿಲ್ಲೆಯ ಮಂಡಪರ ಹಳ್ಳಿಯಲ್ಲಿ ದಲಿತ ಯುವಕನನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು, ವಿಡಿಯೋ ಬಹಳಷ್ಟು ವೈರಲ್​ ಆಗಿದೆ. ದಲಿತ ಯುವಕ ಮುಖೇಶ್​ ರಾಥೋಡ್​ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಈತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಎಂಬ ಆರೋಪದ ಮೇಲೆ ನಾಲ್ವರು ವ್ಯಕ್ತಿಗಳು ಆತನಿಗೆ ಥಳಿಸಿದ್ದಲ್ಲದೇ, ಸಾರ್ವಜನಿಕವಾಗಿ ರಸ್ತೆಯಲ್ಲಿ ತೆವಳಿಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ. ದಲಿತ ಯುವಕನನ್ನು ಶೋಷಣೆ ಮಾಡಿದ್ದಕ್ಕಾಗಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಮಹಿಳೆಗೆ ಕಿರುಕುಳ ನೀಡಿದ ಎಂಬ ಆರೋಪದಲ್ಲಿ ಆಟೋ ಚಾಲಕ ಮುಖೇಶ್​ನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಕ್ಟೋಬರ್​ 1 ರಂದು ಜುನಾಗಡದಲ್ಲಿ ನಡೆದ ಈ ಘಟನೆಯ ವಿಡಿಯೋ ಬಹಳಷ್ಟು ವೈರಲ್​ ಆಗಿದೆ. ಆರೋಪಿ ಮುಖೇಶ್​ ರಾಥೋಡ್​ ರಸ್ತೆಯಲ್ಲಿ ತೆವಳುವ ದೃಶ್ಯ ವಿಡಿಯೋದಲ್ಲಿದೆ. ಜೊತೆಗೆ ಆತನನ್ನು ಇಬ್ಬರು ವ್ಯಕ್ತಿಗಳು ಹಾಗೂ ಮಹಿಳೆಯೊಬ್ಬರು ನೂಕುವ ದೃಶ್ಯವೂ ಸಹ ಇದೆ.

ಈ ಘಟನೆ ನಡೆದಿರುವುದು ಸೋಮವಾರ, ಆದರೆ ದೂರು ದಾಖಲಾಗಿರುವುದು ಬುಧವಾರ ಎಂದು ಜುನಾಗಢದ ಪೊಲೀಸ್​ ಅಧಿಕಾರಿ ಎಂ.ಎಸ್​.ರಾಣಾ ತಿಳಿಸಿದ್ದಾರೆ. ರಾಥೋಡ್​ ತನಗೆ ಥಳಿಸಿದ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರ ಮೇಲೆ ಅಡ್ಡ ದೂರು ದಾಖಲಿಸಿದ್ದಾನೆ ಎಂದು ಹೇಳಿದರು.

ಐಪಿಸಿ ಸೆಕ್ಷನ್​ 354 ರ ಅಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪದ ಮೇಲೆ ಆರೋಪಿ ರಾಥೋಡ್​ ಮೇಲೆ ಕೇಸು ದಾಖಲಾಗಿದೆ. ಜುನಾಗಢದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ರಾಥೋಡ್​ ಲೈಂಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
First published:October 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...