ನ್ಯೂಯಾರ್ಕ್ ಬ್ರೂಕ್ಲಿನ್ನಲ್ಲಿ ಗುಂಡಿನ ಸದ್ದು: ನಾಲ್ಕು ಮಂದಿ ಬಲಿ; ಮೂವರಿಗೆ ತೀವ್ರ ಗಾಯ
ಈಗಾಗಲೇ ನ್ಯೂಯಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪ್ರಕರಣದ ಆರೋಪಿಗಳಿಗಾಗಿ ಶೋಧಕಾರ್ಯವೂ ನಡೆಯುತ್ತಿದೆ.
news18-kannada Updated:October 12, 2019, 7:15 PM IST

ನ್ಯೂಯಾರ್ಕ್ ಪೊಲೀಸ್
- News18 Kannada
- Last Updated: October 12, 2019, 7:15 PM IST
ನವದೆಹಲಿ(ಅ.12): ನ್ಯೂಯಾರ್ಕ್ ಬ್ರೂಕ್ಲಿನ್ನಲ್ಲಿ ಬಂದೂಕುಧಾರಿಯೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಬೆಳಿಗ್ಗೆ ಈ ಗುಂಡಿನ ದಾಳಿ ನಡೆದಿದ್ದು, ಸ್ಥಳದಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೊಲೀಸ್ ಮೂಲಗಳು ತಿಳಿಸಿವೆ.
ಬ್ರೂಕ್ಲಿನ್ನಲ್ಲಿನ ಖಾಸಗಿ ಕ್ಲಬ್ವೊಂದರಲ್ಲಿ ಈ ಅಮಾನುಷ ಕೃತ್ಯ ಸಂಭವಿಸಿದೆ ಎಂದು ವಿದೇಶಿ ಮೂಲದ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಲ್ಲದೇ ಈ ದಾಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಈ ಗುಂಡಿನ ದಾಳಿಗೆ ನಿಕರವಾದ ಕಾರಣವೇನೆಂದು ತಿಳಿದು ಬಂದಿಲ್ಲ. ಇದರ ಹಿಂದೆ ಯಾರ ಕೈವಾಡವಿದೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ. ಹಾಗಾಗಿ ಪ್ರಕರಣ ಸಂಬಂಧ ಯಾರ ಬಂಧನವೂ ಆಗಿಲ್ಲ ಎಂದು ನ್ಯೂಯಾರ್ಕ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮತ್ತೆ ಗ್ರೆನೇಡ್ ದಾಳಿ: 7 ಮಂದಿಗೆ ತೀವ್ರ ಗಾಯ
ಬಂದೂಕುಧಾರಿ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ ಮೂವರಿಗೆ ತೀವ್ರ ಗಾಯಗಳಾಗಿವೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಈಗಾಗಲೇ ನ್ಯೂಯಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪ್ರಕರಣದ ಆರೋಪಿಗಳಿಗಾಗಿ ಶೋಧಕಾರ್ಯವೂ ನಡೆಯುತ್ತಿದೆ.
---------
ಬ್ರೂಕ್ಲಿನ್ನಲ್ಲಿನ ಖಾಸಗಿ ಕ್ಲಬ್ವೊಂದರಲ್ಲಿ ಈ ಅಮಾನುಷ ಕೃತ್ಯ ಸಂಭವಿಸಿದೆ ಎಂದು ವಿದೇಶಿ ಮೂಲದ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಲ್ಲದೇ ಈ ದಾಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಕೂಡ ಹೇಳಲಾಗುತ್ತಿದೆ.