HOME » NEWS » National-international » FOUR CHARGED OF FRAUD IN FUND COLLECTION FOR AYODHYA RAM TEMPLE STG SNVS

ರಾಮ ಮಂದಿರಕ್ಕೆ ನಿಧಿ ಸಂಗ್ರಹ ಹೆಸರಲ್ಲಿ ವಂಚನೆ: ನಾಲ್ವರ ಬಂಧನ

ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ನೆಪದಲ್ಲಿ ನಕಲಿ ರಸೀದಿ ನೀಡಿ ಜನರನ್ನ ವಂಚಿಸುತ್ತಿದ್ದ ಜಾಲಗಳನ್ನ ಉತ್ತರ ಪ್ರದೇಶ ಪೊಲೀಸರು ಪತ್ತೆ ಮಾಡಿದ್ದಾರೆ. ಬುಲಂದಶಹರ್ ಮತ್ತು ಕಾನ್ಪುರದಲ್ಲಿ ಎಫ್ಐಆರ್​ಗಳು ದಾಖಲಾಗಿದ್ದು ಒಟ್ಟಾರೆ ನಾಲ್ವರನ್ನ ಬಂಧಿಸಲಾಗಿದೆ.

news18
Updated:February 13, 2021, 4:14 PM IST
ರಾಮ ಮಂದಿರಕ್ಕೆ ನಿಧಿ ಸಂಗ್ರಹ ಹೆಸರಲ್ಲಿ ವಂಚನೆ: ನಾಲ್ವರ ಬಂಧನ
ಅಯೋಧ್ಯೆ ರಾಮ ಮಂದಿರದ ವಿನ್ಯಾಸ
  • News18
  • Last Updated: February 13, 2021, 4:14 PM IST
  • Share this:
ಲಕ್ನೋ: ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ. ಕೋಟ್ಯಂತರ ಭಾರತೀಯರ ಕನಸು ನನಸಾಗುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈಗಾಗಲೇ ಭವ್ಯ ರಾಮಮಂದಿರ ನಿರ್ಮಾಣಕ್ಕೆ ‘ನಿಧಿ ಸಮರ್ಪಣೆ ಅಭಿಯಾನ’ಕ್ಕೆ ಚಾಲನೆ ನೀಡಲಾಗಿದೆ. ಸ್ವತಃ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ದೇಣಿಗೆ ನೀಡಿ, ಶುಭಕೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆದರೆ ಇದೀಗ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಹೆಸರಿನಲ್ಲಿ ಜನರಿಗೆ ಮೋಸ ಮಾಡುವ ವಂಚಕರ ಜಾಲಗಳು ಹುಟ್ಟಿಕೊಂಡಿವೆ.

ರಾಮ ಮಂದಿರಕ್ಕೆ ನಿಧಿ ಸಂಗ್ರಹ ಹೆಸರಲ್ಲಿ ಅನಧಿಕೃತ ಸಂಘಟನೆಯ ಹೆಸರಿನ ರಶೀದಿ ನೀಡಿ ಜನರಿಂದ ಹಣ ಸಂಗ್ರಹಿಸಿ ವಂಚಿಸಲಾಗುತ್ತಿದೆ. ಹೀಗೆ ಮೋಸ ಮಾಡಲು ಯತ್ನಿಸಿದ ಆರೋಪದ ಹಿನ್ನೆಲೆ ಉತ್ತರ ಪ್ರದೇಶದ ಬುಲಂದ್‌ಶಹರ್ ಮತ್ತು ಕಾನ್ಪುರ ಜಿಲ್ಲೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Supreme Court: ಪ್ರತಿಭಟಿಸುವ ಹಕ್ಕಿದೆ ಎಂದು ಎಲ್ಲಿ ಯಾವಾಗ ಬೇಕಾದರೂ ಪ್ರತಿಭಟಿಸುವಂತಿಲ್ಲ; ಸುಪ್ರೀಂ ಕೋರ್ಟ್​

ಕಾನ್ಪುರದ ಬಾರ್ರಾ ಪೊಲೀಸ್ ಠಾಣೆಯಲ್ಲಿ ಭಜರಂಗದಳದ ಸ್ಥಳೀಯ ಸಹ ಸಂಚಾಲಕರ ದೂರಿನ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಐಪಿಸಿಯ ಸೆಕ್ಷನ್ 420 (ಮೋಸ) ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಚುನ್ನು ಪ್ರಕಾಶ್ ತ್ರಿಪಾಠಿ ಮತ್ತು ಅಶೋಕ್ ರಜಪೂತ್ ಎಂಬುವರು ರಾಮ ಮಂದಿರ ನಿರ್ಮಾಣಕ್ಕೆ ನಕಲಿ ರಶೀದಿಗಳ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಕಾನ್ಪುರದ (ದಕ್ಷಿಣ) ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಭೂಕರ್ ತಿಳಿಸಿದ್ದಾರೆ. ‘ಈ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ನಾವು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

ಬುಲಂದ್‌ಶಹರ್‌ನಲ್ಲಿ ಕೂಡ ಇದೇ ರೀತಿಯ ಪ್ರಕರಣ ನಡೆದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ನಿರ್ಮಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ರಶೀದಿಗಳನ್ನು ಮುದ್ರಿಸಿ ಜನರಿಗೆ ವಂಚಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ದೀಪಕ್ ಠಾಕೂರ್ ಮತ್ತು ರಾಹುಲ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಭೂಕಂಪನವಾಗಿ ಭೂಮಿ ಕಂಪಿಸಿದರೂ ಜಪ್ಪಯ್ಯ ಎನ್ನದ ರಾಹುಲ್ ಗಾಂಧಿ…! ವಿಡಿಯೋ ನೋಡಿ

ಬಂಧಿತ ಆರೋಪಿಗಳು ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಕಲಿ ರಶೀದಿ ನೀಡಿ ಜನರಿಂದ ನಿಧಿ ಸಂಗ್ರಹಿಸಲು ಯೋಜಿಸಿದ್ದರು. ಜನರಿಗೆ ವಂಚಿಸುವ ಮುನ್ನವೇ ಅವರನ್ನು ಬಂಧಿಸಲಾಗಿದೆ ಎಂದು ಬುಲಂದ್‌ಶಹರ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.ಆರೋಪಿಗಳು ನೀಡಿದ ರಶೀದಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ. ರಶೀದಿ ಮುದ್ರಿಸಿರುವ ಪ್ರಿಟಿಂಗ್ ಪ್ರೆಸ್ ಮಾಲೀಕ ಇಖ್ಲಾಕ್ ಖಾನ್ ಎಂದು ಆರೋಪಿಗಳು ಬಾಯ್ಬಿಟ್ಟಿದ್ದು, ಆತನನ್ನೂ ಕೂಡ ಶೀಘ್ರವೇ ಬಂಧಿಸುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
Published by: Vijayasarthy SN
First published: February 13, 2021, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories