• Home
  • »
  • News
  • »
  • national-international
  • »
  • Zooನಲ್ಲಿನ ಅಳಿಲು ಕೋತಿಯನ್ನೇ ಕಿಡ್ನಾಪ್​ ಮಾಡಿದ ನೌಕರರು; ಕಾರಣ ಇದು!

Zooನಲ್ಲಿನ ಅಳಿಲು ಕೋತಿಯನ್ನೇ ಕಿಡ್ನಾಪ್​ ಮಾಡಿದ ನೌಕರರು; ಕಾರಣ ಇದು!

ಕೋತಿ

ಕೋತಿ

ಅಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು ಇವರಿಬ್ಬರಿಗೂ ಗೊತ್ತಾಗಿಯೇ ಈ ಕೆಲಸವನ್ನು ತುಂಬಾನೇ ಸುಲಭವಾಗಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • Share this:

ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರು ಮೃಗಾಲಯದಲ್ಲಿ (Vandalur Zoo) ಇತ್ತೀಚೆಗೆ ಸುಮಾರು 80 ಸಿಬ್ಬಂದಿಗೆ ಕೊರೊನಾ ಸೋಂಕು (Covid)  ತಗುಲಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ಮುಚ್ಚಲಾಗಿತ್ತು ಎಂಬ ಸುದ್ದಿ ಮಾಧ್ಯಮದಲೆಲ್ಲಾ ಪ್ರಸಾರವಾಗಿದ್ದು ಬಹುತೇಕರು ನೋಡಿರುತ್ತಾರೆ. ಅದರ ಹಿನ್ನೆಲೆಯಲ್ಲಿ ಈ ಮೃಗಾಲಯವನ್ನು ಜನವರಿ 31ರವರೆಗೆ ಮುಚ್ಚಲಾಗಿದ್ದು, ಇದೀಗ ಮತ್ತೆ ಅದನ್ನು ತೆಗಯಲಾಗಿತ್ತು ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಈಗ ಮಾತೇಕೆ ಅಂತೀರಾ..? ಇದೇ ಮೃಗಾಲಯದಿಂದ ಕಳೆದ ವಾರ ಎರಡು ಅಳಿಲು ಕೋತಿಗಳನ್ನು ಯಾರೋ ಕದ್ದು ಸ್ಥಳದಿಂದ ಪರಾರಿಯಾಗಿದ್ದರು ಎಂಬ ಸುದ್ದಿ ಬಂದಿತ್ತು.  ಇದೀಗ ಸ್ಥಳೀಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಿ, ಆ ಕದ್ದೊಯ್ದ ಅಳಿಲು ಕೋತಿಗಳನ್ನು ಹತ್ತಿರದ ಕೊಲತ್ತೂರು ನಗರದಲ್ಲಿರುವ ಸಾಕು ಪ್ರಾಣಿಗಳ ಮಾರಾಟ ಅಂಗಡಿಯಿಂದ ಅವುಗಳನ್ನು ರಕ್ಷಿಸಿದ್ದಾರೆ.


ಆ ಅಂಗಡಿಯ ಮಾಲೀಕನನ್ನು ಮತ್ತು ಅವನ ಜೊತೆಗೆ ಈ ಪ್ರಕರಣದಲ್ಲಿ ಭಾಗಿಯಾದ ಇನ್ನೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.


ನಾಲ್ವರ ಬಂಧನ


ಈ ಪ್ರಕರಣದಲ್ಲಿ ಬಂಧಿಸಿದ ಆರೋಪಿಗಳನ್ನು ಎಸ್. ಸತ್ಯವೇಲು, ಡಿ ಜಾನಕಿರಾಮನ್, 29 ವರ್ಷ ವಯಸ್ಸಿನ ವಿನೋತ್ ಮತ್ತು ಇವರಿಗೆ ಸಹಾಯ ಮಾಡಿದ ಇನ್ನೊಬ್ಬ 21 ವರ್ಷ ವಯಸ್ಸಿನ ಲೋಕನಾಥನ್ ಎಂದು ಗುರುತಿಸಲಾಗಿದೆ.


ಈ ಕಳ್ಳತನದ ಹಿಂದೆ 34 ವರ್ಷ ವಯಸ್ಸಿನ ಸತ್ಯವೇಲು ಅವರ ಕೈವಾಡವಿರುವುದು ತಿಳಿದು ಬಂದಿದ್ದು, ಈತ ಮೃಗಾಲದಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಫೆಬ್ರವರಿ 7 ರಂದು ಈ ಕಳ್ಳತನದಲ್ಲಿ ತನ್ನ ಇನ್ನೊಬ್ಬ ಸಹಚರನಾದ 21 ವರ್ಷ ವಯಸ್ಸಿನ ಜಾನಕಿರಾಮನ್ ಎಂಬ ವ್ಯಕ್ತಿಯು ಟಿಕೆಟ್ ತೆಗೆದುಕೊಂಡು ಮೃಗಾಲಯಕ್ಕೆ ಬಂದಿದ್ದಾನೆ.


ಎಚ್ಚರಿಕೆಯಿಂದ ಕಿಡ್ನಾಪ್​​


ಅದೇ ದಿನ ಸಂಜೆ 7.30 ರಿಂದ 8.30 ರವರೆಗೆ ಈ ಇಬ್ಬರು ಅಳಿಲು ಕೋತಿಗಳ ಪಂಜರವನ್ನು ಕತ್ತರಿಸಿ ತಮ್ಮ ಬ್ಯಾಗುಗಳಲ್ಲಿ ಅವುಗಳನ್ನು ಹಾಕಿಕೊಂಡು ಅವುಗಳಿಗೆ ಉಸಿರಾಡಲು ಸಹಾಯಕ ಆಗುವಂತೆ ಆ ಬ್ಯಾಗುಗಗಳಿಗೆ ಚಿಕ್ಕ ತೂತು ಮಾಡಿ ಕೊಂಡೊಯ್ಯದಿದ್ದಾರೆ.   ಅಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು ಇವರಿಬ್ಬರಿಗೂ ಗೊತ್ತಾಗಿಯೇ ಈ ಕೆಲಸವನ್ನು ತುಂಬಾನೇ ಸುಲಭವಾಗಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಸತ್ಯವೇಲು ತಾವು ಮಾಡಿದ್ದು ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಬಾರದೆಂದು ತಪ್ಪಿಸಿಕೊಂಡು ಹೋಗಲು ಜಾನಕಿರಾಮನ್‌ಗೆ ಆನೆಗಳ ಪಾರ್ಕ್‌ನಲ್ಲಿರುವ ಗಿಡದ ಮೇಲೆ ಹೋಗಿ ಅವಿತುಕೊಂಡು ಕುಳಿತುಕೊಳ್ಳಲು ಹೇಳಿದ್ದಾನೆ. ರಾತ್ರಿ ಆದಂತೆ ಆ ಮೃಗಾಲಯದಲ್ಲಿರುವ ದೊಡ್ಡ ಮರವನ್ನು ಹತ್ತಿ ಆ ಕಾಂಪೌಂಡ್ ಹತ್ತಿಕೊಂಡು ಅಲ್ಲಿಂದ ಆ ಕಡೆಗೆ ಕೆಳಗೆ ಹಾರಿದ್ದಾನೆ. ವಂಡಲೂರು ಮತ್ತು ಕೆಲಂಬಕ್ಕಂ ರಸ್ತೆಯಲ್ಲಿ ಸತ್ಯವೇಲು ತನ್ನ ಬೈಕ್ ಮೇಲೆ ಆತನಿಗಾಗಿ ಕಾಯುತ್ತಿದ್ದು, ಆತನನ್ನು ಬೈಕ್ ಮೇಲೆ ಕೂರಿಸಿಕೊಂಡು ಅಲ್ಲಿಂದ ಇಬ್ಬರು ಪರಾರಿಯಾಗಿದ್ದಾರೆ.


ಹಣಕ್ಕಾಗಿ ಕಿಡ್ನಾಪ್​​


ಈ ಇಬ್ಬರು ಸಾಕು ಪ್ರಾಣಿಗಳ ಮಾರಾಟದ ಅಂಗಡಿಯ ಮಾಲೀಕನಾದ ವಿನೋತ್ ಬಳಿ ಹೋಗಿ ಈ ಎರಡು ಅಳಿಲು ಕೋತಿಗಳನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಪೊಲೀಸರು ಈ ಪ್ರಾಣಿ ಕಳುವಿನ ಬಗ್ಗೆ ತಿಳಿದು ಮೃಗಾಲಯದಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ನೋಡಿದ್ದಾರೆ.


ಗೇಟಿನ ಹತ್ತಿರ ಸತ್ಯಾವೇಲು ಒಬ್ಬ ವ್ಯಕ್ತಿಗೆ ಬ್ಯಾಗನ್ನು ನೀಡುತ್ತಿರುವುದನ್ನು ನೋಡಿದ ಪೊಲೀಸರು ಈತನ ಮೇಲೆ ಸಂಶಯ ಪಟ್ಟು ವಿಚಾರಣೆ ಮಾಡಿದ್ದಾರೆ. ವಿನೋತ್‌ ಈ ಎರಡು ಕೋತಿಗಳನ್ನು ತನ್ನ ಮನೆಯಲ್ಲಿ ಒಂದು ಹಣ್ಣಿನ ಬ್ಯಾಸ್ಕೆಟ್‌ನಲ್ಲಿ ಹಾಕಿ ಇಟ್ಟಿದ್ದು, ಇವುಗಳನ್ನು ವಿದೇಶದಿಂದ ತರಿಸಲಾಗಿದೆ ಎಂದು ಹೇಳಿ ಅವುಗಳನ್ನು ಮಾರಲು ಪ್ರಯತ್ನಿಸುತ್ತಿದ್ದಾಗ ನಾವು ಅವನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


ವಿನೋತ್‌ ಈ ಕೋತಿಗಳನ್ನು ಮೃಗಾಲಯದಿಂದ ಕಳುವಾದ ಸುದ್ದಿ ಊರಲ್ಲೆಲ್ಲಾ ಹಬ್ಬಿದ ತಕ್ಷಣವೇ ಅವುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರಿಂದ ನಾವು ಅವನನ್ನು ಬಂಧಿಸಿ, ಪ್ರಾಣಿಗಳನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದರು. ನಂತರ ಈ ಪ್ರಾಣಿಗಳನ್ನು ಪೊಲೀಸರು ಮೃಗಾಲಯಕ್ಕೆ ಒಪ್ಪಿಸಿದ್ದು, ಈ ನಾಲ್ಕು ಜನರನ್ನು ಬಂಧಿಸಿದ್ದಾರೆ.

Published by:Seema R
First published: