Sherin Mathews Murder Case: ಭಾರತೀಯ ಮೂಲದ ಶೆರಿನ್ ಮ್ಯಾಥ್ಯೂಸ್​ ಹತ್ಯೆ ಪ್ರಕರಣ; ಬಾಲಕಿಯ ಸಾಕುತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಮೆರಿಕ

ವೆಸ್ಲಿ ಮ್ಯಾಥ್ಯೂಸ್​ ತನ್ನ 3 ವರ್ಷದ ಸಾಕುಮಗಳು ಶೆರಿನ್​ಳನ್ನು ಕೊಂದು ಆಕೆಯ ಶವವನ್ನು ಕಸ ತುಂಬಿದ ಬ್ಯಾಗ್​ನಲ್ಲಿಟ್ಟು ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾಲುವೆಯ ಬಳಿ ಮುಚ್ಚಿಟ್ಟು ಹೋಗಿದ್ದರು ಎಂಬುದು ಅಮೆರಿಕದ ಪೊಲೀಸರ ತನಿಖೆಯಿಂದ ಬಯಲಾಗಿತ್ತು.

Sushma Chakre | news18
Updated:June 27, 2019, 11:12 AM IST
Sherin Mathews Murder Case: ಭಾರತೀಯ ಮೂಲದ ಶೆರಿನ್ ಮ್ಯಾಥ್ಯೂಸ್​ ಹತ್ಯೆ ಪ್ರಕರಣ; ಬಾಲಕಿಯ ಸಾಕುತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಮೆರಿಕ
ಶೆರಿನ್ ಮ್ಯಾಥ್ಯೂಸ್
  • News18
  • Last Updated: June 27, 2019, 11:12 AM IST
  • Share this:
ಹ್ಯೂಸ್ಟನ್ (ಜೂ. 27): ಎರಡು ವರ್ಷಗಳ ಹಿಂದೆ ಅಮೆರಿಕದ ಹ್ಯೂಸ್ಟನ್​ನಲ್ಲಿ ಕಾಣೆಯಾಗಿದ್ದ ಭಾರತ ಮೂಲದ 3 ವರ್ಷದ ಬಾಲಕಿ ಶೆರಿನ್ ಮ್ಯಾಥ್ಯೂಸ್ ಸಾವಿನ ಪ್ರಕರಣದಲ್ಲಿ ಆಕೆಯ ಸಾಕುತಂದೆ ವೆಸ್ಲಿ ಮ್ಯಾಥ್ಯೂಸ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಕೇರಳ ಮೂಲದ ವೆಸ್ಲಿ ಮ್ಯಾಥ್ಯೂಸ್​ ಮತ್ತು ಸಿನಿ ಮ್ಯಾಥ್ಯೂಸ್​ ಶೆರಿನ್​ಳನ್ನು ದತ್ತು ಪಡೆದಿದ್ದರು. ಹಾಲು ಕೊಟ್ಟರೆ ಕುಡಿಯಲಿಲ್ಲ ಎಂಬ ಕಾರಣಕ್ಕೆ 2017ರ ಅಕ್ಟೋಬರ್​ 7ರಂದು ರಾತ್ರಿ 3 ಗಂಟೆಗೆ ಮನೆಯಿಂದ ಹೊರಗೆ ನಿಲ್ಲಿಸಿದ್ದೆವು. ಆದರೆ, ಸ್ವಲ್ಪ ಹೊತ್ತಿನ ಬಳಿಕ ಬಾಗಿಲು ತೆರೆದು ನೋಡಿದಾಗ ಆಕೆ ಅಲ್ಲಿರಲಿಲ್ಲ. ಬೆಳಗಾಗುವ ಹೊತ್ತಿಗೆ ಬರಬಹುದು ಎಂದು ಕಾದೆವು. ಮನೆಯ ಸುತ್ತಮುತ್ತ ಕಾಡುನಾಯಿಗಳು ಇರುವುದರಿಂದ ರಾತ್ರಿ ಹುಡುಕುವುದು ಬೇಡ ಎಂದು ನಾವು ನಿರ್ಧರಿಸಿದೆವು ಎಂದು ವೆಸ್ಲಿ ಮ್ಯಾಥ್ಯೂಸ್​ ಪೊಲೀಸರಿಗೆ ದೂರು ನೀಡಿದ್ದರು.

ಬಿಹಾರದಿಂದ ದತ್ತು ಪಡೆದಿದ್ದ ಮ್ಯಾಥ್ಯೂಸ್​ ದಂಪತಿ:

ಕೇರಳದವರಾದ ಮ್ಯಾಥ್ಯೂಸ್​ ದಂಪತಿ ಬಿಹಾರದ ಅನಾಥಾಶ್ರಮದಿಂದ ಶೆರಿನ್​ಳನ್ನು ದತ್ತು ಪಡೆದಿದ್ದರು. ಆಕೆಯ ದೇಹದ ಬೆಳವಣಿಗೆ ಸರಿಯಿರಲಿಲ್ಲ, ಮಾತನಾಡಲು ಕೂಡ ತೊದಲುತ್ತಿದ್ದಳು. ಆದರೆ, ಪೊಲೀಸರಿಗೆ ದೂರು ನೀಡಿದ 2 ವಾರಗಳ ಬಳಿಕ ವೆಸ್ಲಿ ಮ್ಯಾಥ್ಯೂಸ್​ ಮನೆಯಿಂದ ಅರ್ಧ ಮೈಲಿ ದೂರದಲ್ಲಿ ರಸ್ತೆ ಪಕ್ಕದ ಸುರಂಗದಲ್ಲಿ ಶೆರಿನ್ ಶವ ಪತ್ತೆಯಾಗಿತ್ತು. ಶೆರಿನ್​ಳ ನಿಗೂಢ ಸಾವಿನ ತನಿಖೆ ನಡೆಸಿದ ದಲ್ಲಾಸ್​ ಪೊಲೀಸರು ಆಕೆಯ ಸಾಕುತಂದೆಯೇ ಆಕೆಯನ್ನು ಕೊಲೆ ಮಾಡಿರುವ ವಿಷಯವನ್ನು ಬಹಿರಂಗಪಡಿಸಿದ್ದರು.

ನಡುರಸ್ತೆಯಲ್ಲಿ ಕ್ರಿಕೆಟ್ ಬ್ಯಾಟ್​ನಿಂದ ಸರ್ಕಾರಿ ಅಧಿಕಾರಿಗೆ ಹೊಡೆದ ಬಿಜೆಪಿ ಶಾಸಕನ ಬಂಧನ

ವೆಸ್ಲಿ ಮ್ಯಾಥ್ಯೂಸ್​ ತನ್ನ ಮಗಳು ಶೆರಿನ್​ಳನ್ನು ಕೊಂದು ಆಕೆಯ ಶವವನ್ನು ಕಸ ತುಂಬಿದ ಬ್ಯಾಗ್​ನಲ್ಲಿಟ್ಟು ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾಲುವೆಯ ಬಳಿ ಮುಚ್ಚಿಟ್ಟು ಹೋಗಿದ್ದರು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿತ್ತು. ಶೆರಿನ್​ಳ ಮೃತದೇಹ ಸಿಕ್ಕ ಬಳಿಕ ತನ್ನ ವರಸೆ ಬದಲಿಸಿದ್ದ ವೆಸ್ಲಿ ಮ್ಯಾಥ್ಯೂಸ್​, ತಾನು ಒತ್ತಾಯದಿಂದ ಮಗಳಿಗೆ ಹಾಲು ಕುಡಿಸುವಾಗ ಆಕೆಯ ನೆತ್ತಿಗೆ ಹತ್ತಿ ಮೃತಪಟ್ಟಿದ್ದಳು. ಭಯಗೊಂಡ ನಾನು ಪತ್ನಿಗೂ ಹೇಳದೆ ಶವ ಸಾಗಿಸಿದ್ದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಆ ಕಾರಣವನ್ನು ಪೊಲೀಸರು ಒಪ್ಪಿರಲಿಲ್ಲ. ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

sherin-mathews
ಶೆರಿನ್ ಮ್ಯಾಥ್ಯೂಸ್
ಕೊನೆಗೂ ಶೆರಿನ್ ಸಾವಿಗೆ ನ್ಯಾಯ ಸಿಕ್ಕಿತು:

ಇದೀಗ ಪ್ರಕರಣದ ವಿಚಾರಣೆ ನಡೆಸಿದ ದಲ್ಲಾಸ್ ನ್ಯಾಯಾಲಯ ಆಕೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 39 ವರ್ಷದ ಮ್ಯಾಥ್ಯೂಸ್​ಗೆ 12 ಸದಸ್ಯರ ನ್ಯಾಯಪೀಠ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವುದಾಗಿ ಅಮೆರಿಕ ಮಾಧ್ಯಮಗಳು ಹೇಳಿವೆ. ಅಚಾನಕ್ಕಾಗಿ ಮಗಳನ್ನು ಸಾಯಿಸಿದ ಮ್ಯಾಥ್ಯೂಸ್​ ನಂತರ ಗಾಬರಿಗೊಂಡಿದ್ದ. ತನ್ನ ಮೇಲೆ ಅನುಮಾನ ಬಾರದಂತೆ ಬಟ್ಟೆ ಸ್ವಚ್ಛಗೊಳಿಸಿಕೊಂಡ ಮ್ಯಾಥ್ಯೂಸ್​ ತನ್ನ ಮೊಬೈಲ್​ನ ಲೊಕೇಷನ್​ ಟ್ರ್ಯಾಕರ್​ ಅನ್ನು ಆಫ್​ ಮಾಡಿ ಆ ಮೃತದೇಹವನ್ನು ಸುರಂಗದ ಬಳಿ ಬಿಸಾಡಿ ಬಂದಿದ್ದ. ಆದರೆ, ಮಗು ಮೃತಪಟ್ಟಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿದ್ದರೂ ತಾನು ಶವವನ್ನು ಬಚ್ಚಿಟ್ಟಿರುವ ಜಾಗದ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ, 2 ವಾರಗಳ ನಂತರ ಶೆರಿನ್​ಳ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪೊಲೀಸ್​ ನಾಯಿ ಗುರುತಿಸಿತ್ತು.

ಕರೆಂಟ್​ ಬಿಲ್​ ಜಾಸ್ತಿ ಬಂದಿದ್ದೇ ಕಾರಣವಾಯ್ತು ಕೊಲೆಗೆ; ಸೊಸೆಯ ಕತ್ತು ಸೀಳಿ ಕೊಂದ ಮಾವ

ದೇಹ ಸಂಪೂರ್ಣ ಕೊಳೆತಿದ್ದರಿಂದ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಗಿರಲಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ನ್ಯಾಯಾಲಯದಲ್ಲಿ ತಾನು ಮಾಡಿದ್ದ ಕೆಲಸವನ್ನು ಸಮರ್ಥಿಸಿಕೊಂಡಿದ್ದ ಮ್ಯಾಥ್ಯೂಸ್​, ನನ್ನ ಮಗಳು ಅಮೆರಿಕದಲ್ಲಿ ಇದ್ದಷ್ಟೂ ದಿನವೂ ಅವಮಾನ ಅನುಭವಿಸಿದ್ದಳು. ಆಕೆಯ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಬೇರೆಯವರೊಂದಿಗೆ ಸಂವಹನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ದೈಹಿಕ ಬೆಳವಣಿಗೆಯೂ ಇರಲಿಲ್ಲ. ಆಕೆಯ 5 ಮೂಳೆಗಳು ಮುರಿದುಹೋಗಿವೆ ಎಂದು ವೈದ್ಯರು ಹೇಳಿದ್ದರು. ಆಕೆಯ ಹಲ್ಲುಗಳು ಉದುರಿಹೋಗಿದ್ದವು ಎಂದು ನ್ಯಾಯಾಲಯಕ್ಕೆ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸಿದ್ದರು. ಹಾಗೇ, ಆಕೆ ಅದೇ ರೀತಿ ಜೀವನವಿಡೀ ಬದುಕಬೇಕಾದ ಅನಿವಾರ್ಯತೆ ಎದುರಾಗುವುದು ಬೇಡ ಎಂದು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.

ಈ ಘಟನೆ ಭಾರತದಲ್ಲೂ ಸಂಚಲನ ಸೃಷ್ಟಿಸಿತ್ತು. ಆಗ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್​ ಈ ಪ್ರಕರಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಪ್ರಕರಣದಲ್ಲಿ ಶೆರಿನ್ ಸಾವಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕೆಂದು ಹೂಸ್ಟನ್​ನಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಶೆರಿನ್ ಸಾವಿನ ಬಳಿಕ ಭಾರತದಲ್ಲಿ ದತ್ತು ಪಡೆಯುವ ಪ್ರಕ್ರಿಯೆಯನ್ನು ಬಿಗಿಗೊಳಿಸಲಾಗಿತ್ತು.

 

First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading