Uttarakhand: ಮಾಜಿ ಸಿಎಂ ಬೆಂಗಾವಲು ಪಡೆ ಎದುರು ಬಂದ ಗಜರಾಜ, ಬಂಡೆಕಲ್ಲು ಏರಿ ಪ್ರಾಣ ಉಳಿಸಿಕೊಂಡ ನಾಯಕ!

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಬೆಂಗಾವಲು ಪಡೆಯ ಮುಂದೆ ಆನೆ ಬಂದಿದೆ. ಇದರಿಂದ ಮಾಜಿ ಸಿಎಂ ಕಾರಿನಿಂದ ಕೆಳಗಿಳಿದು ಬಂಡೆ ಕಲ್ಲಿನ ಮೇಲೆ ಏರಿ ಪ್ರಾಣ ಉಳಿಸಿಕೊಳ್ಳಬೇಕಾಯಿತು. ಆನೆ ದಾಳಿ ಮಾಡುವ ಭೀತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಆನೆಯನ್ನು ಅರಣ್ಯಕ್ಕೆ ಓಡಿಸಿದರು.

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್

  • Share this:
ಡೆಹ್ರಾಡೂನ್(ಸೆ.15): ಪೌರಿಯಿಂದ ಕೋಟ್‌ದ್ವಾರಕ್ಕೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ (Former Uttarakhand CM Trivendra Singh Rawat) ಅವರ ಬೆಂಗಾವಲು ವಾಹನದ ಮುಂದೆ ಆನೆ ಬಂದಿತ್ತು. ಇದರಿಂದ ಮಾಜಿ ಸಿಎಂ ಕಾರಿನಿಂದ ಕೆಳಗಿಳಿದು ಬಂಡೆ ಕಲ್ಲಿನ ಮೇಲೆ ಏರಿ ಪ್ರಾಣ ಉಳಿಸಿಕೊಳ್ಳಬೇಕಾಯಿತು. ಕೂಡಲೇ ಅರಣ್ಯ ಇಲಾಖೆಗೆ (Forest Department) ಮಾಹಿತಿ ನೀಡಲಾಯಿತು. ಸುಮಾರು ಅರ್ಧ ಗಂಟೆ ಪ್ರಯತ್ನದ ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಹೊರದಬ್ಬಲಾಯಿತು. ಲಾನ್ಸ್‌ಡೌನ್ ಅರಣ್ಯ ವಿಭಾಗದ ದುಗಡ್ಡಾ ವ್ಯಾಪ್ತಿಯಲ್ಲಿ ಆನೆಗಳು (Elephant) ರಸ್ತೆಯಲ್ಲಿ ಅಬ್ಬರ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬುಧವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 534ರ ಐದನೇ ಗಿರಣಿ ಬಳಿ ದೈತ್ಯ ಆನೆಯೊಂದು ರಸ್ತೆಗೆ ಬಂದಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಜನರು ಸಿಲುಕಿಕೊಂಡರು. ರಸ್ತೆಯಲ್ಲಿ ಬರುವ ವಾಹನಗಳ ಎರಡೂ ಬದಿಯಲ್ಲಿ ಉದ್ದನೆಯ ಸಾಲುಗಳು ನಿರ್ಮಾಣವಾದವು. ಇದರಿಂದಾಗಿ ತ್ರಿವೇಂದ್ರ ಸಿಂಗ್ ರಾವತ್ ಅವರ ಬೆಂಗಾವಲು ಪಡೆ ಸುಮಾರು ಅರ್ಧ ಗಂಟೆಗಳ ಕಾಲ ತಂಗಿತು. ಕೆಲಕಾಲ ಮಾಜಿ ಸಿಎಂ ಕಾರಿನಲ್ಲಿಯೇ ಕುಳಿತಿದ್ದು, ಆನೆ ಅವರ ಕಾರಿನ ಬಳಿ ಬರಲು ಆರಂಭಿಸಿದಾಗ ಅವರೂ ಕಾರು ಬಿಟ್ಟು ಓಡಲಾರಂಭಿಸಿದರು.


ಆನೆ ದಾಳಿ ಮಾಡುವ ಭೀತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಆನೆಯನ್ನು ಅರಣ್ಯಕ್ಕೆ ಓಡಿಸಿದರು. ಮಾಜಿ ಸಿಎಂ ಹೆದ್ದಾರಿಯಲ್ಲಿ ಸಾಗಿದ ನಂತರ ಅರಣ್ಯ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Published by:Precilla Olivia Dias
First published: