ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ: ರಾಜೇಶ್ ದಾಸ್ ವಿರುದ್ಧ ಎಫ್ಐಆರ್ ದಾಖಲು

ತಮಿಳುನಾಡು ಸಿಎಂ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಹಿಳಾ ಐಪಿಎಸ್ ಅಧಿಕಾರಿಯನ್ನು ಮಾಜಿ ವಿಶೇಷ ಡಿಜಿಪಿ ರಾಜೇಶ್ ದಾಸ್ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕಿರುಕುಳ ನೀಡುವ ಪ್ರಯತ್ನ ಮಾಡಿದ್ದರೆಂದು ದೂರಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಚೆನ್ನೈ: ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರ ಲೈಂಗಿಕ ಕಿರುಕುಳದ ಆರೋಪದ ಮೇರೆಗೆ ತಮಿಳುನಾಡು ಸಿಐಡಿ ಪೊಲೀಸ್ ಅಪರಾಧ ವಿಭಾಗ(ಸಿಬಿ-ಸಿಐಡಿ)ವು ಮಾಜಿ ವಿಶೇಷ ಪೊಲೀಸ್ ಮಹಾನಿರ್ದೇಶಕ ರಾಜೇಶ್ ದಾಸ್ ವಿರುದ್ಧ ಎಫ್ಐಆರ್ ದಾಖಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜೇಶ್ ದಾಸ್ ವಿರುದ್ಧ ತಮಿಳುನಾಡು ಮಹಿಳಾ ಕಿರುಕುಳ ತಡೆ ಕಾಯ್ದೆಯ ಐಪಿಸಿ ಸೆಕ್ಷನ್ 354(ಮಹಿಳೆಯರನ್ನು ಅಸ್ಥಿರಗೊಳಿಸುವುದು), ಸೆಕ್ಷನ್ 3(ಮಹಿಳಾ ಕಿರುಕುಳ ನಿಷೇಧ), ಸೆಕ್ಷನ್ 4(ಮಹಿಳೆಯ ಮೇಲಿನ ಕಿರುಕುಳಕ್ಕೆ ದಂಡ)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  ದಾಸ್ ವಿರುದ್ಧ ದೂರು ದಾಖಲಿಸಲು ಚೆನ್ನೈಗೆ ತೆರಳುತ್ತಿದ್ದಾಗ ಮಹಿಳಾ ಐಪಿಎಸ್ ಅಧಿಕಾರಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾಗಿ ಚೆಂಗಲ್‌ಪಟ್ಟಿ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಣ್ಣನ್ ಒಪ್ಪಿಕೊಂಡಿದ್ದಾರೆಂದು ಎಫ್‌ಐಆರ್​ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತನ್ನ ಉನ್ನತ ಅಧಿಕಾರಿಯಾಗಿದ್ದ ದಾಸ್ ಅವರ ಆದೇಶದ ಮೇರೆಗೆ ತಾನು ಹೀಗೆ ಮಾಡಿರುವುದಾಗಿ ಕಣ್ಣನ್ ತಪ್ಪೊಪ್ಪಿಕೊಂಡಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿ ತನ್ನ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಎಲ್ಲಾ ಆರೋಪಗಳನ್ನು ದಾಸ್ ನಿರಾಕರಿಸಿದ್ದಾರೆ.

  ಇದನ್ನೂ ಓದಿ: ಯಾರಿಗೆ ಕೋವಿಡ್ ಲಸಿಕೆ ಸಿಗುತ್ತೆ? ಉಸಿರಾಟ ತೊಂದರೆ, ಹೆಚ್ಐವಿ, ಕ್ಯಾನ್ಸರ್ ಸೇರಿ 20 ಕಾಯಿಲೆಗಳ ಪಟ್ಟಿ

  ದಾಸ್ ವಿರುದ್ಧ ಮಹಿಳಾ ಐಪಿಎಸ್ ಅಧಿಕಾರಿ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಇಲಾಖೆಗೆ ನಿರ್ದೇಶನ ನೀಡಿ ತಮಿಳುನಾಡು ಡಿಜಿಪಿ ಜೆ.ಕೆ.ತ್ರಿಪಾಠಿ ಶನಿವಾರ ಆದೇಶ ಹೊರಡಿಸಿದ್ದರು. ಅದರ ಮರುದಿನವೇ ಸಿಬಿ-ಸಿಐಡಿ ಅಧಿಕಾರಿಗಳು ದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರವು ಲೈಂಗಿಕ ಕಿರುಕುಳ ಕಾಯ್ದೆಯ ಪ್ರಕಾರ ಮಹಿಳಾ ಐಪಿಎಸ್ ಅಧಿಕಾರಿ ಮೇಲಿನ ಕಿರುಕುಳ ಪ್ರಕರಣದ ತನಿಖೆಗಾಗಿ ಆಂತರಿಕ ದೂರುಗಳ ಸಮಿತಿ ರಚಿಸಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗವು (ಎಸ್‌ಎಚ್‌ಆರ್‌ಸಿ) ಈ ವಿಷಯದ ಬಗ್ಗೆ ಸು ಮೋಟು ಪ್ರಕರಣ ದಾಖಲಿಸಿದೆ. ಮತ್ತು 2 ವಾರಗಳಲ್ಲಿ ಸರ್ಕಾರ ಮತ್ತು ಡಿಜಿಪಿಯಿಂದ ವಿವರವಾದ ವರದಿ ನೀಡುವಂತೆ ಕೋರಿದೆ.

  ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಹಿಳಾ ಐಪಿಎಸ್ ಅಧಿಕಾರಿಯನ್ನು ರಾಜೇಶ್ ದಾಸ್ ಅವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕಿರುಕುಳ ನೀಡುವ ಪ್ರಯತ್ನ ಮಾಡಿದ್ದರೆಂದು ದೂರಲಾಗಿದೆ. ಮಹಿಳಾ ಅಧಿಕಾರಿ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಲು ತಮಿಳುನಾಡು ಸರ್ಕಾರ ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ, ಯೋಜನಾ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜಯಶ್ರೀ ರಘುನಂದನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.
  Published by:Vijayasarthy SN
  First published: