• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Abdul Nazeer: ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಸುಪ್ರೀಂ ನಿವೃತ್ತ ಜಡ್ಜ್‌ ಅಬ್ದುಲ್ ನಝೀರ್‌ ನೇಮಕ

Abdul Nazeer: ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಸುಪ್ರೀಂ ನಿವೃತ್ತ ಜಡ್ಜ್‌ ಅಬ್ದುಲ್ ನಝೀರ್‌ ನೇಮಕ

ಎಸ್‌ ಅಬ್ದುಲ್ ನಝೀರ್

ಎಸ್‌ ಅಬ್ದುಲ್ ನಝೀರ್

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು, ಕರ್ನಾಟಕ ಮೂಲದ ಎಸ್‌ ಅಬ್ದುಲ್ ನಝೀರ್ ಅವರನ್ನು ಆಂಧ್ರ ಪ್ರದೇಶದ ನೂತನ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Andhra Pradesh, India
  • Share this:

ಹೈದರಾಬಾದ್: ಆಂಧ್ರ ಪ್ರದೇಶದ ನೂತನ ರಾಜ್ಯಪಾಲರನ್ನಾಗಿ(Andhra Pradesh Governor)  ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು, ಕರ್ನಾಟಕ ಮೂಲದ ಎಸ್‌ ಅಬ್ದುಲ್ ನಝೀರ್ (Justice S Abdul Nazeer) ಅವರನ್ನು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ. ಐತಿಹಾಸಿಕ ಅಯೋಧ್ಯೆಯ ರಾಮ ಜನ್ಮಭೂಮಿ (Ram janma bhoomi Verdict) ವಿವಾದ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರ ಪೈಕಿ ಒಬ್ಬರಾಗಿದ್ದ ಅಬ್ದುಲ್ ನಝೀರ್ ಅವರು ಕಳೆದ ಜನವರಿ ನಾಲ್ಕರಂದು ನಿವೃತ್ತರಾಗಿದ್ದರು.


1958ರ ಜನವರಿ 5ರಂದು ಜನಿಸಿದ್ದ ಅಬ್ದುಲ್ ನಜೀರ್ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಬೆಳುವಾಯಿ ಮೂಲದವರು. ಇತ್ತೀಚೆಗಷ್ಟೇ ಮಂಗಳೂರಿಗೆ ಬಂದು ಹತ್ತಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. 1983ರ ಫೆಬ್ರವರಿ 18ರಂದು ವಕೀಲರಾಗಿ ನೋಂದಾಯಿಸಿಕೊಂಡ ಅವರು ನಂತರದ ದಿನಗಳಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು. 2003ರ ಮೇ 12ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.


ಇದನ್ನೂ ಓದಿ: Ayodhya Rama Mandir: ಮಕರ ಸಂಕ್ರಾಂತಿಯಂದು ವಿರಾಜಮಾನನಾಗಲಿದ್ದಾರೆ ಶ್ರೀರಾಮ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅಯೋಧ್ಯೆ ದೇಗುಲ


ನಿನ್ನೆ ಮೊನ್ನೆವರೆಗೆ ಪಾಸ್‌ಪೋರ್ಟ್‌ ಇರಲಿಲ್ಲ!


ಜನವರಿ ನಾಲ್ಕರಂದು ಸುಪ್ರೀಂ ಕೋರ್ಟ್‌ನಿಂದ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾಗಿ ಬೀಳ್ಕೊಡುವ ಸಂದರ್ಭದಲ್ಲಿ ಸಿಜೆಐ ಡಿವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರ ಸರಳತೆಯ ಬಗ್ಗೆ ಪ್ರಸ್ತಾಪಿಸಿದ್ದರು. 2019ರವರೆಗೆ ಅಬ್ದುಲ್ ನಝೀರ್ ಅವರ ಬಳಿ ಪಾರ್ಸ್‌ಪೋರ್ಟ್‌ ಇರಲಿಲ್ಲ. ಕೆಲವೇ ವಾರಗಳ ಹಿಂದೆ ದೇಶದಿಂದ ಹೊರಗೆ ಮೊದಲ ಬಾರಿಗೆ ಮಾಸ್ಕೋಗೆ ಪ್ರಯಾಣ ಮಾಡಿ ಬಂದರು ಎಂದು ಅವರ ಸರಳತೆಯ ಬಗ್ಗೆ ನ್ಯಾ ಚಂದ್ರಚೂಡ್ ಹೇಳಿದ್ದರು.


ಸಿಜೆಐ ಅವರಿಂದಲೇ ಸರಳ ಜೀವನಕ್ಕೆ ಸರ್ಟಿಫಿಕೇಟ್


ಅಲ್ಲದೇ, ಅಬ್ದುಲ್ ನಝೀರ್ ಅವರು ನಿಜ ಜೀವನದಲ್ಲಿ ತುಂಬಾ ಸರಳವಾಗಿ ಬದುಕುತ್ತಿದ್ದಾರೆ. ಇತ್ತಿಚಿನವರೆಗೆ ಅವರ ಬಳಿ ನ್ಯಾಯಧೀಶರ ಐಡಿ ಮಾತ್ರ ಇತ್ತು. ಅವರು ಪಾಸ್‌ಪೋರ್ಟ್‌ ಮಾಡಿದ್ದೇ 2019ರಲ್ಲಿ. ಕೆಲ ವಾರಗಳ ಹಿಂದೆ ಅವರು ಮಾಸ್ಕೋಗೆ ಹೋಗಿ ಬಂದಿದ್ದರು. ಆಗ ಆ ಪಾಸ್‌ಪೋರ್ಟ್‌ನಲ್ಲಿ ಅವರ ಮೊದಲ ಪ್ರಯಾಣದ ಸ್ಟ್ಯಾಂಪ್ ಮಾತ್ರ ಇತ್ತು ಎಂದು ಹೇಳುವ ಮೂಲಕ ನ್ಯಾ. ಎಸ್‌ ಅಬ್ದುಲ್ ನಝೀರ್ ಅವರ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: Border Conflict: ಇಂದು ಸುಪ್ರೀಂ ಕೋರ್ಟ್​ನಲ್ಲಿ ಬೆಳಗಾವಿ ಗಡಿ ವಿವಾದ ಕೇಸ್ ವಿಚಾರಣೆ; ಕುತೂಹಲಕ್ಕೆ ಇಂದೇ ಬೀಳಲಿದ್ಯಾ ತೆರೆ?


2017ರಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಹೊಂದಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಅವರು ಕೆ.ಎಸ್.ಪುಟ್ಟಸ್ವಾಮಿ ಪ್ರಕರಣ, ತ್ರಿವಳಿ ತಲಾಖ್ ಪ್ರಕರಣ, ಅಯೋಧ್ಯೆ-ಬಾಬರಿ ಮಸೀದಿ ವಿವಾದ, ನೋಟು ನಿಷೇಧ ಪ್ರಕರಣಗಳ ತೀರ್ಪು ನೀಡುವ ವಿಚಾರದಲ್ಲಿ ಪ್ರಮುಖ ಭಾಗವಾಗಿದ್ದರು.


ಹತ್ತಿ ಬಂದ ಮೆಟ್ಟಿಲು ಮರೆಯದ ಅಬ್ದುಲ್ ನಝೀರ್


ನ್ಯಾ.ಅಬ್ದುಲ್ ನಝೀರ್ ಅವರು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ವೇಳೆ ಅವರಿಗೆ ಮೂಡಬಿದಿರೆ ವಕೀಲರ ಸಂಘ ಮತ್ತು ಪುತ್ತೂರಿನಲ್ಲಿ ಸನ್ಮಾನ ಮಾಡಲಾಗಿತ್ತು. ಈ ವೇಳೆ ಅವರು ತಮ್ಮ ಹುಟ್ಟೂರಿನ ಬಗ್ಗೆ ಸಹಜವಾಗಿ ಪ್ರೀತಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಾನು ಓದಿದ ಶಾಲೆ, ಬಾಲ್ಯದಲ್ಲಿ ನಡೆದಾಡಿದ ನೆಲ, ವೃತ್ತಿ ಜೀವನದ ಗುರುಗಳು, ತಂದೆ ತಾಯಿ, ಪ್ರೀತಿ ಕೊಟ್ಟ ನೆರೆ ಹೊರೆ-ಊರವರ ಬಗ್ಗೆ ಅಭಿಮಾನದ ಮಾತನ್ನಾಡಿದ್ದರು.


ಇದನ್ನೂ ಓದಿ: Supreme Court: ಸುಪ್ರೀಂ ನಿರ್ಧಾರದಿಂದ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ನಡುಕ, ಶಿಕ್ಷೆ ವಿಧಿಸಲು ಈ ವಿಚಾರವಷ್ಟೇ ಪರಿಗಣನೆ!

Published by:Avinash K
First published: