ಭಾರತಕ್ಕೆ ಕಳಪೆ ಅಡಿಕೆ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಶ್ರೀಲಂಕಾ ಕ್ರಿಕೆಟ್​ ಸ್ಟಾರ್​ ಸನತ್​ ಜಯಸೂರ್ಯ

ಆರೋಪಿತ ಕ್ರಿಕೆಟ್​ ಆಟಗಾರರು ತಮ್ಮ ಪ್ರಭಾವವನ್ನು ಶ್ರೀಲಂಕಾ ಅಧಿಕಾರಿಗಳ ಮೇಲೆ ಬೀರಿ, ನಕಲಿ ದಾಖಲಾತಿಗಳನ್ನು ಮತ್ತು ವ್ಯಾಪಾರ ಪರವಾನಗಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು

news18
Updated:November 23, 2018, 2:01 PM IST
ಭಾರತಕ್ಕೆ ಕಳಪೆ ಅಡಿಕೆ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಶ್ರೀಲಂಕಾ ಕ್ರಿಕೆಟ್​ ಸ್ಟಾರ್​ ಸನತ್​ ಜಯಸೂರ್ಯ
ಫೈಲ್​ ಫೋಟೊ: ಸನತ್​ ಜಯಸೂರ್ಯ
  • News18
  • Last Updated: November 23, 2018, 2:01 PM IST
  • Share this:
ಕೊಲಂಬೋ: ಶ್ರೀಲಂಕಾ ಮಾಜಿ ಕ್ರಿಕೆಟ್​ ಕಪ್ತಾನ ಸನತ್​ ಜಯಸೂರ್ಯ ಮತ್ತು ಇನ್ನಿಬ್ಬರು ಕ್ರಿಕೆಟ್​ ಆಟಗಾರರು ಭಾರತಕ್ಕೆ ಕಳಪೆ ಅಡಿಕೆ ಕಳ್ಳ ಸಾಗಣೆ ಮಾಡಿ ಸಿಕ್ಕಿಬಿದ್ದಿದ್ದಾರೆ.

ದೈನಿಕ್​ ಭಾಸ್ಕರ್​ ಪತ್ರಿಕೆಯ ವರದಿಯ ಪ್ರಕಾರ ಸನತ್​ ಜಯಸೂರ್ಯ ಮತ್ತು ಇನ್ನಿಬ್ಬರು ಕ್ರಿಕೆಟಿಗರು ತೆರಿಗೆ ಉಳಿಸುವ ಸಲುವಾಗಿ ಇಂಡೋನೇಶಿಯಾದಿಂದ ಭಾರತಕ್ಕೆ ಅಡಿಕೆಯನ್ನು ಕಳ್ಳಸಾಗಣೆ ಮಾಡಿದ್ದಾರೆ. ಇಬ್ಬರು ಕ್ರಿಕೆಟ್​ ಆಟಗಾರರ ಹೆಸರು ಇನ್ನೂ ಬಹಿರಂಗವಾಗಿಲ್ಲ.

ಕಂದಾಯ ಗುಪ್ತಚರ ನಿರ್ದೇಶನಾಲಯ ನಾಗ್ಪುರದಲ್ಲಿ ಕೋಟ್ಯಾಂತರ ರೂಪಾಯಿ ಬೆಳೆಬಾಳುವ ಅಡಿಕೆಯನ್ನು ವಶಪಡಿಸಿಕೊಂಡ ನಂತರ ಈ ಕಳ್ಳಸಾಗಣೆ ಹಿಂದೆ ಜಯಸೂರ್ಯ ಇರುವುದು ಪತ್ತೆಯಾಗಿದೆ. ದಾಳಿಯ ಬೆನ್ನಲ್ಲೇ ಜಯಸೂರ್ಯರನ್ನು ಮುಂಬೈ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್​ ಜಾರಿಗೊಳಿಸಲಾಗಿದೆ.

ಪ್ರಾಥಮಿಕ ತನಿಖೆಯ ನಂತರ ನಿರ್ದೇಶನಾಲಯ ಹೆಚ್ಚಿನ ತನಿಖೆಯ ಅಂಗವಾಗಿ ಶ್ರೀಲಂಕಾ ಸರ್ಕಾರಕ್ಕೆ ಪತ್ರ ಬರೆದಿದೆ. ಇನ್ನಿಬ್ಬರು ಕ್ರಿಕೆಟ್​ ಆಟಗಾರರನ್ನು ಸಹ ವಿಚಾರಣೆಗೆ ಹಾಜರಾಗುವಂತೆ ನೊಟೀಸ್​ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಉಪ ನಿರ್ದೇಶಕ ದಿಲೀಪ್​ ಸಿವಾರೆ ಹೇಳುವ ಪ್ರಕಾರ ಇಂಡೋನೇಶಿಯಾದಿಂದ ಶ್ರೀಲಂಕಾ ಮಾರ್ಗವಾಗಿ ಅಡಿಕೆಯನ್ನು ಕಳ್ಳಸಾಗಣೆ ಮಾಡಲಾಗಿದೆ. "ನಕಲಿ ಸಂಸ್ಥೆಗಳನ್ನು ಶ್ರೀಲಂಕಾದಲ್ಲಿ ಸ್ಥಾಪಿಸಿ ದಕ್ಷಿಣ ಏಷಿಯಾ ಫ್ರೀ ಟ್ರೇಡ್​ ಏರಿಯಾ (ಸಫ್ತಾ) ಒಪ್ಪಂದದಡಿ ತೆರಿಗೆ ವಿನಾಯಿತಿ ಪಡೆಯಲು ಸಂಚು ರೂಪಿಸಲಾಗಿತ್ತು. ಶ್ರೀಲಂಕಾ ಮತ್ತು ಭಾರತದ ನಡುವೆ ಹಲವು ವಾಣಿಜ್ಯ ಬೆಳೆಗಳ ವ್ಯಾಪಾರಕ್ಕೆ ತೆರಿಗೆ ವಿನಾಯಿತಿಯಿದೆ," ಎಂದು ದಿಲೀಪ್​ ಸಿವಾರೆ ಇಂಡಿಯನ್​ ಎಕ್ಸ್​ಪ್ರೆಸ್​ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ರಾಜಕೀಯ ಬಿಕ್ಕಟ್ಟು; ವಿಶ್ವಾಸ ಮಂಡನೆಯಲ್ಲಿ ಮಹಿಂದಾ ರಾಜಪಕ್ಸಗೆ ಸೋಲು

ಮುಂದುವರೆದ ಅವರು, ಆರೋಪಿತ ಕ್ರಿಕೆಟ್​ ಆಟಗಾರರು ತಮ್ಮ ಪ್ರಭಾವವನ್ನು ಶ್ರೀಲಂಕಾ ಅಧಿಕಾರಿಗಳ ಮೇಲೆ ಬೀರಿ, ನಕಲಿ ದಾಖಲಾತಿಗಳನ್ನು ಮತ್ತು ವ್ಯಾಪಾರ ಪರವಾನಗಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು."ಶ್ರೀಲಂಕಾದ ಉದ್ಯಮಿಯೊಬ್ಬರು ಕೊಳೆತ ಅಡಿಕೆಯನ್ನು ನಾಗ್ಪುರದಲ್ಲಿ ಮಾರಲು ಮುಂದಾಗಿದ್ದರು. ಅದೂ ಮೂಲ ಬೆಲೆಯ ಶೇಕಡ 25ರಷ್ಟು ಕಡಿಮೆ ಮೊತ್ತಕ್ಕೆ. ಮಾರುಕಟ್ಟೆಯ ಬೆಲೆಯ ಪ್ರಕಾರ ನೇರವಾಗಿ ಆಮದು ಮಾಡಿಕೊಂಡರೆ ಶೇಕಡ 108ರಷ್ಟು ಮೊತ್ತ ಹೆಚ್ಚಾಗುತ್ತದೆ. ಕಳ್ಳ ಮಾರ್ಗದಿಂದ ವ್ಯಾಪಾರ ಮಾಡಿ ಕೊಳೆತ ಅಡಿಕೆಯನ್ನು ರಾಷ್ಟ್ರಾದ್ಯಂತೆ ಒಳ್ಳೆ ಅಡಿಕೆಯ ಜತೆ ಮಿಶ್ರಣ ಮಾಡಿ ಮಾರಾಟ ಮಾಡುವ ಸಾಧ್ಯತೆಯಿತ್ತು," ಎಂದು ದಿಲೀಪ್​ ಸಾವರೆ ಹೇಳಿದ್ದಾರೆ.

ಒಟ್ಟಿನಲ್ಲಿ ಸನತ್​ ಜಯಸೂರ್ಯ ಕ್ರೀಡಾಂಗಣದಿಂದ ಆಚೆ ಉಳಿದು ವರ್ಷಗಳೇ ಆದರೂ ಒಂದಿಲ್ಲೊಂದು ವಿವಾದಗಳಲ್ಲಿ ಸುದ್ದಿಯಾಗುತ್ತಿದ್ದಾರೆ.

First published:November 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading