ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನಿಧನ

news18
Updated:August 19, 2018, 9:57 AM IST
ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನಿಧನ
news18
Updated: August 19, 2018, 9:57 AM IST
ನ್ಯೂಸ್ 18 ಕನ್ನಡ

ಜಿನೀವಾ (ಆ.19) : ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ (80) ಸ್ವಿಟ್ಜರ್​ಲೆಂಡ್​ನ  ಜಿನೀವಾದಲ್ಲಿ ಶನಿವಾರ ನಿಧನರಾದರು.

ವಿಶ್ವಸಂಸ್ಥೆಯ ಮೊದಲ ಕಪ್ಪು ಪ್ರಧಾನ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು 2001ರಲ್ಲಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದರು. ಕೋಫಿ ಅನ್ನಾನ್‌ ಅವರ ಸಾವಿನ ಸುದ್ದಿಯನ್ನು ವಿಶ್ವಸಂಸ್ಥೆ ಟ್ವಿಟರ್‌ ಮೂಲಕ ತಿಳಿಸಿ, ವಿಷಾದ ವ್ಯಕ್ತಪಡಿಸಿದೆ.

1938ರ ಏಪ್ರಿಲ್‌ 8ರಂದು ಗಾನಾ ದೇಶದ ಕುಮಸಿಯಲ್ಲಿ ಜನಿಸಿದ ಕೋಫಿ ಅನ್ನಾನ್‌, ಸಿರಿಯಾ ಬಿಕ್ಕಟ್ಟು ಸೇರಿದಂತೆ ಅನೇಕ ಜಾಗತಿಕ ವಿದ್ಯಮಾನಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿಯಾಗಿದ್ದರು. ಯುಎನ್‌ ಎಕಾನಾಮಿಕ್‌ ಕಮಿಷನ್‌ ಫಾರ್‌ ಆಫ್ರಿಕಾ, ಜಿನೀವಾ ನಿರಾಶ್ರಿತರ ಕಚೇರಿ ಹೈ ಕಮಿಷನರ್‌ ಆಗಿಯೂ ಅವರು ಕೆಲಸ ಮಾಡಿದ್ದರು.

ಜಾಗತಿಕ ಮಟ್ಟದಲ್ಲಿ ಏಡ್ಸ್‌ ವಿರುದ್ಧ ಹೋರಾಡಲು ವಿಶ್ವ ಏಡ್ಸ್‌ ನಿಧಿ, ಭಯೋತ್ಪಾದನೆ ನಿಗ್ರಹಕ್ಕೆ ಯೋಜನೆ, ಕ್ಷಯ ಹಾಗೂ ಮಲೇರಿಯಾ ರೋಗ ತಡೆಗೆ ಯೋಜನೆಗಳನ್ನು ರೂಪಿಸಿದ್ದರು. 2006ರಲ್ಲಿ ಇಸ್ರೇಲ್‌ ಹಾಗೂ ಹೆಜ್‌ಬೊಲ್ಲ ಸುರಕ್ಷತೆಗೆ ಕೋಫಿ ಅನ್ನಾನ್‌ ಮಧ್ಯಸ್ಥಿಕೆ ವಹಿಸಿದ್ದರು. ಅಂತೆಯೇ ಕ್ಯಾಮ್‌ರೂನ್‌ ಹಾಗೂ ನೈಜೀರಿಯಾ ನಡುವೆ ಬಕಾಸಿ ಪೆನಿನ್ಸುಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಅವರ ಕೊನೆಯ ಕಾರ್ಯ ಇದಾಗಿತ್ತು.
First published:August 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ