• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral News: ಮದುವೆಗೆ ಬಂದ ಅತಿಥಿಗಳಿಗೆ ರಾಶಿ ರಾಶಿ ಹಣದ ಕಂತೆ ಎಸೆದ ಕುಟುಂಬ! ದುಡ್ಡಿಗಾಗಿ ಮುಗಿಬಿದ್ದ ಜನ

Viral News: ಮದುವೆಗೆ ಬಂದ ಅತಿಥಿಗಳಿಗೆ ರಾಶಿ ರಾಶಿ ಹಣದ ಕಂತೆ ಎಸೆದ ಕುಟುಂಬ! ದುಡ್ಡಿಗಾಗಿ ಮುಗಿಬಿದ್ದ ಜನ

ರಾಶಿ ರಾಶಿ ಹಣದ ಕಂತೆ ಎಸೆದ ಕುಟುಂಬ

ರಾಶಿ ರಾಶಿ ಹಣದ ಕಂತೆ ಎಸೆದ ಕುಟುಂಬ

ಕರೀಂ ಯಾದವ್ ಅವರ ಸೋದರಳಿಯ ರಜಾಕ್ ಅವರ ವಿವಾಹದ ಆಚರಣೆಯ ಭಾಗವಾಗಿ ಹಣದ ಕಂತೆ ಕಂತೆಗಳನ್ನೇ ಜನರತ್ತ ಎಸೆದಿದ್ದು, ಜನರಂತೂ ಬಿಟ್ಟಿ ಸಿಕ್ಕ ನೋಟುಗಳನ್ನೆಲ್ಲಾ ತಮ್ಮದಾಗಿಸಿಕೊಳ್ಳಲು ತಾ ಮುಂದು ನಾ ಮುಂದು ಅನ್ನೋ ಹಾಗೆ ಜಮಾಯಿಸಿದ್ದಾರೆ.

 • News18 Kannada
 • 2-MIN READ
 • Last Updated :
 • Gujarat, India
 • Share this:

ಗಾಂಧಿನಗರ: ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಾಗ ನೃತ್ಯಗಾರರಿಗೆ ದುಡ್ಡಿನ ನೋಟು ಎಸೆಯೋದು, ಸಂಗೀತ ಕಾರ್ಯಕ್ರಮಗಳಲ್ಲಿ ಗಾಯಕರಿಗೆ ಹಣ ಎಸೆಯೋದು ಹೀಗೆ ಕೆಲವೊಂದು ಸಂದರ್ಭದಲ್ಲಿ ನೋಟಿನ ಕಂತೆಗಳನ್ನು ಸುರಿಯುವುದನ್ನು (Cash Shower) ನೀವು ನೋಡಿರಬಹುದು ಅಥವಾ ಕೇಳಿರಬಹುದು. ಈಗಿನ ಕಾಲದಲ್ಲಂತೂ ಕಣ್ಣಾರೆ ನೋಡದಿದ್ದರೂ ಕೂಡ ಮೊಬೈಲ್ ಮೂಲಕ ವಿಡಿಯೋಗಳಲ್ಲಿ ಎಲ್ಲರೂ ನೋಡಿರುವ ಸಾಧ್ಯತೆ ಇದೆ. ಆದರೆ ಇಲ್ಲೊಂದು ಕಡೆ (Gujarat) ಮದುವೆ ಕಾರ್ಯಕ್ರಮದಲ್ಲಿ (Wedding Function) ದುಡ್ಡಿನ ಸುರಿಮಳೆಯನ್ನೇ ಸುರಿಸಿದ ಘಟನೆ ನಡೆದಿದೆ.


ಹೌದು.. ಈ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕೇಕ್ರಿ ತಹಸಿಲ್‌ನಲ್ಲಿರುವ ಅಗೋಲ್ ಗ್ರಾಮದಲ್ಲಿ ನಡೆದಿದ್ದು, ಸೋದರಳಿಯನ ಮದುವೆಗೆ ಆಗಮಿಸಿದ ಅತಿಥಿಗಳತ್ತ ಮಾಜಿ ಸರಪಂಚ್‌ವೊಬ್ಬರು ನೋಟಿನ ಕಂತೆ ಎಸೆದ ಘಟನೆ ನಡೆದಿದೆ. ನೋಟು ಎಸೆಯುವಾಗ ಸ್ಥಳದಲ್ಲಿ ನೆರೆದಿದ್ದ ನೂರಾರು ಜನರು ಸಿಕ್ಕಿದ್ದೇ ಸೀರುಂಡೆ ಅಂತಾ ಕೈಗೆ ಸಿಕ್ಕಿದ್ದ ನೋಟುಗಳನ್ನೆಲ್ಲಾ ಬಾಚಿಕೊಂಡು ಹೋಗಿದ್ದಾರೆ.


ಇದನ್ನೂ ಓದಿ: Bengaluru: ಮಾರ್ಕೆಟ್​ನಲ್ಲಿ ನೋಟಿನ ಸುರಿಮಳೆಗೈದ ವ್ಯಕ್ತಿ ಮೇಲೆ FIR, ಪೊಲೀಸರ ಮುಂದೆ ಕಾರಣ ಬಯಲು!


ಕಂತೆ ಕಂತೆ ನೋಟಿಗಾಗಿ ಮುಗಿಬಿದ್ದ ಜನರು


ಮೂಲಗಳ ಪ್ರಕಾರ, ಅಗೋಲ್ ಸರಪಂಚ್ ಕರೀಂ ಯಾದವ್ ಅವರ ಸೋದರಳಿಯ ರಜಾಕ್ ಅವರ ವಿವಾಹದ ಆಚರಣೆಯ ಭಾಗವಾಗಿ ಹಣದ ಕಂತೆ ಕಂತೆಗಳನ್ನೇ ಜನರತ್ತ ಎಸೆದಿದ್ದು, ಜನರಂತೂ ಬಿಟ್ಟಿ ಸಿಕ್ಕ ನೋಟುಗಳನ್ನೆಲ್ಲಾ ತಮ್ಮದಾಗಿಸಿಕೊಳ್ಳಲು ತಾ ಮುಂದು ನಾ ಮುಂದು ಅನ್ನೋ ಹಾಗೆ ಜಮಾಯಿಸಿದ್ದಾರೆ. ಮೆಹ್ಸಾನಾ ಜಿಲ್ಲೆಯ ಕೇಕ್ರಿ ತಹಸಿಲ್‌ನಲ್ಲಿರುವ ಅಗೋಲ್ ಗ್ರಾಮದಲ್ಲಿ ಮಾಜಿ ಸರಪಂಚ್ ಕರೀಂ ಯಾದವ್ ಅವರ ಸೋದರಳಿಯನ ಮದುವೆ ನಡೆದಿತ್ತು.


500ರ ನೋಟುಗಳನ್ನೇ ಎಸೆದರು!


ಮದುವೆಗೆ ಬಂದ ಅತಿಥಿಗಳಿಗೆ ಮನೆಯವರು ಹೊಟ್ಟೆ ತುಂಬ ಊಟ ಹಾಕಿದ್ದಾರೆ. ಇಷ್ಟೇ ಆಗಿದ್ದರೆ ಅತಿಥಿಗಳು ಊಟ ಮಾಡಿ ಹೊರಡುತ್ತಿದ್ದರು. ಆದರೆ ಸೋದರಳಿಯನ ಮದುವೆ ಇನ್ನಷ್ಟು ಅದ್ದೂರಿಯಾಗಿ ಜನರ ಮನಸ್ಸಿನಲ್ಲಿ ಸ್ಮರಣೀಯವಾಗಿ ಉಳಿಯಬೇಕೆಂಬ ಕಾರಣಕ್ಕೆ ಕರೀಂ ಯಾದವ್ ಅವರು ಬಂದಿದ್ದ ಅತಿಥಿಗಳ ಕಡೆಗೆ 500 ರೂ. ಮುಖಬೆಲೆಯ ನೋಟುಗಳ ಕಂತೆಗಳನ್ನೇ ಎಸೆದಿದ್ದಾರೆ. ಜನರಂತೂ ತಮ್ಮ ಅದೃಷ್ಟ ಬಾಗಿಲು ತೆರೆಯಿತು ಅನ್ನೋ ಹಾಗೆ ಅತೀ ಹೆಚ್ಚು ನೋಟುಗಳನ್ನು ತಮ್ಮದಾಗಿಸಿಕೊಳ್ಳಲು ಮುಗಿಬಿದ್ದಿದ್ದಾರೆ.


ಇದನ್ನೂ ಓದಿ: Yap Island: ಇಲ್ಲಿ ನೋಟು-ನಾಣ್ಯಗಳಿಗಿಲ್ಲ ಬೆಲೆ, ಖರೀದಿ-ಮಾರಾಟಕ್ಕೆ ಕಲ್ಲುಗಳೇ ಬೇಕು! ವಿಚಿತ್ರವಾದರೂ ಇದು ಸತ್ಯ


ವಿಡಿಯೋ ಫುಲ್ ವೈರಲ್


ಅಗೋಲ್ ಸರಪಂಚ್ ಕರೀಂ ಯಾದವ್ ಅವರು ತಮ್ಮ ಮೂರು ಅಂತಸ್ತಿನ ಕಟ್ಟಡದ ಟೆರೆಸ್ ಮೇಲೆ ಹೋಗಿ ಮನೆಗೆ ಮದುವೆಗೆ ಬಂದ ಜನರತ್ತ ಗುರಿಯಾಗಿಸಿ ರಾಶಿ ರಾಶಿ ನೋಟುಗಳನ್ನು ಎಸೆಯುವ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಸ್ಥಾನದಲ್ಲಿ ವೈರಲ್ ಆಗುತ್ತಿದೆ.


ಬೆಂಗಳೂರಿನಲ್ಲಿ ನಡೆದಿತ್ತು ಇಂತಹದೇ ಕೃತ್ಯ!


ಇತ್ತೀಚೆಗೆ ಬೆಂಗಳೂರಿನಲ್ಲಿ ಕೂಡ ಇಂತಹದ್ದೇ ಘಟನೆಯೊಂದು ಎರಡು ವಾರಗಳ ಹಿಂದೆ ನಡೆದಿತ್ತು. ಈವೆಂಟ್ ಮ್ಯಾನೆಜ್‌ಮೆಂಟ್‌ ಮಾಡುತ್ತಿದ್ದ ವ್ಯಕ್ತಿಯಾದ ಅರುಣ್ ಕುಮಾರ್ ಎಂಬಾತ ನಗರದ ಕೆಆರ್‌ ಮಾರ್ಕೆಟ್‌ ಬಳಿ ಇರುವ ಫ್ಲೈ ಓವರ್‌ ಮೇಲ್ಗಡೆಗೆ ಹೋಗಿ ರಾಶಿ ರಾಶಿ ನೋಟುಗಳನ್ನು ಎಸೆದಿದ್ದ. ಬೆಳಗ್ಗೆ 9ರ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ  ನಗರದ ಕೆಆರ್‌ ಮಾರ್ಕೆಟ್‌ಗೆ ಬಂದಿದ್ದ ಅರುಣ್ ಕುಮಾರ್ ಒಂದು ಚೀಲದಲ್ಲಿ ರಾಶಿ ರಾಶಿ ಹಣದ ನೋಟುಗಳನ್ನು ತಂದು ಜನರತ್ತ ಎಸೆದಿದ್ದ. ಇದು ಭಾರೀ ಸುದ್ದಿಯಾಗಿತ್ತು. ಆದರೆ ಆತ 10 ರೂಪಾಯಿ ಸಾವಿರಾರು ನೋಟುಗಳನ್ನು ಜನರತ್ತ ಎಸೆದಿದ್ದ. ಮೂಲಗಳ ಪ್ರಕಾರ ಆತ ಮಾಧ್ಯಮಗಳ ಗಮನ ಸೆಳೆಯಲು ಆ ರೀತಿ ಮಾಡಿದ್ದ ಎಂದು ಹೇಳಲಾಗ್ತಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು