ಪಾಕಿಸ್ತಾನ ಬಿಟ್ಟು ಸೌದಿ ಆರೇಬಿಯಾಗೆ ಹೋಗ್ತಾರಂತೆ ಮಾಜಿ ಪ್ರಧಾನಿ ನವಾಜ್ ಷರೀಫ್

news18
Updated:January 10, 2018, 5:45 PM IST
ಪಾಕಿಸ್ತಾನ ಬಿಟ್ಟು ಸೌದಿ ಆರೇಬಿಯಾಗೆ ಹೋಗ್ತಾರಂತೆ ಮಾಜಿ ಪ್ರಧಾನಿ ನವಾಜ್ ಷರೀಫ್
  • Advertorial
  • Last Updated: January 10, 2018, 5:45 PM IST
  • Share this:
ನವದೆಹಲಿ (ಜ.10) : ಪಾಕಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದವರು ಆ ನಂತರ ದೇಶ ತೊರೆದು ವಿದೇಶಕ್ಕೆ ಹೋಗಿ ನೆಲೆಸ್ತಾರೆ. ಬೆನಜಿರ್ ಭುಟ್ಟೋ, ನವಾಜ್ ಷರೀಪ್, ಮುಷರಫ್ ವಿದೇಶದಲ್ಲಿ ಅಡಗಿಕೊಂಡಿದ್ದರು. ಇದಿಗ ಮತ್ತೆ ನವಾಜ್ ಷರೀಫ್ ಸರದಿ. ಪಾಕ್ ಸುಪ್ರೀಂಕೋರ್ಟ್​ನಿಂದ ಪದಚ್ಯುತಗೊಂಡಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕ್ ತೊರೆದು ಸೌದಿ ಆರೇಬಿಯಾದಲ್ಲಿ ನೆಲೆಸಲು ಮುಂದಾಗಿದ್ದಾರೆ.

ಪಾಕ್​ನಲ್ಲಿ ಸದ್ಯ ಷರೀಫ್ ಅವರ ಪಕ್ಷವೇ ಆಡಳಿತದಲ್ಲಿದೆ. ಅಲ್ಲದೇ ಷರೀಪ್ ಸಹೋದರ ಮುಂದಿನ ಪ್ರಧಾನಿಯಾಗುವ ಸಾಧ್ಯತೆಯಿದ್ದು, ಷರೀಫ್​ಗೆ ಅಧಿಕಾರದ ಚುಕ್ಕಾಣಿ ಹಿಡಯಲು ಸಾಧ್ಯವಿಲ್ಲ. ಹೀಗಾಗಿ ಮೂಲೆಗುಂಪಾಗುವ ಮೊದಲು ಸೌದಿಯಲ್ಲಿ ನೆಲೆಸಲು ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಸೌದಿಯ ರಾಜಕುಮಾರನನ್ನು ಕಳೆದ ವಾರ ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದಾರೆ.

ವಿಶೇಷ ವಿಮಾನ ಕಳಿಸಿದ್ದ ಸೌದಿ ಆರೇಬಿಯಾ ನವಾಜ್ ಷರೀಫ್ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಷರೀಫ್ ಪಕ್ಷವೇ ಮುಂದಿನ ಸಲ ಅಧಿಕಾರಕ್ಕೇರಿದ ಆರ್ಮಿ ಮೂಲಕ ಪಾಕ್​ನ್ನು ನಿಯಂತ್ರಿಸಲು ಸೌದಿ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.

 
First published:January 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ