Hijab ವಿವಾದದ ಬಗ್ಗೆ ಗೊತ್ತಿದ್ದರೂ ರಾಜ್ಯ ಸರ್ಕಾರ ಸುಮ್ಮನಿತ್ತು: ಹೊಸ ಬಾಂಬ್ ಸಿಡಿಸಿದ ದೇವೇಗೌಡ್ರು!

ಹಿಜಾಬ್ ಧರಿಸುವ ಬಗೆಗಿನ ವಿವಾದ ಕರಾವಳಿಯಲ್ಲಿ ಸಣ್ಣ ಕಿಡಿಯಾಗಿ ಶುರುವಾಯಿತು. ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯಲ್ಲಿ ಎಲ್ಲಾ ಮಾಹಿತಿಗಳು ಇರುತ್ತವೆ. ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು. ಪ್ರಕರಣ ಬೆಳೆಯಲು ಬಿಡಬಾರದಿತ್ತು ಎಂದು ದೇವೇಗೌಡರು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡ

  • Share this:
ನವದೆಹಲಿ, ಮಾ. 15: ಹಿಜಾಬ್ (Hijab) ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court) ಕೋಟ್ಟ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠಎಚ್.ಡಿ. ದೇವೇಗೌಡ (Former Prime Minister And JDS Senior Leader HD Devegowda) ಅವರು ' ಹಿಜಾಬ್ ವಿಚಾರ ಬಹಳ ಸಣ್ಣದಿತ್ತು.  ಅದನ್ನು ಆರಂಭದಲ್ಲೇ ಹತ್ತಿಕ್ಕಬಹುದಿತ್ತು.‌ ಆದರೆ ಈ ವಿಷಯವನ್ನು ನಿರ್ವಹಿಸುವುದರಲ್ಲಿ ರಾಜ್ಯ ಬಿಜೆಪಿ ಸರ್ಕಾರ (State BJP Government) ವಿಫಲವಾಗಿದೆ. ರಾಜ್ಯ ಸರ್ಕಾರದ ವೈಫಲ್ಯದಿಂದ ಹಿಜಾಬ್ ವಿವಾದ ಇಷ್ಟು ದೊಡ್ಡದಾಗಿದೆ' ಎಂದು ಟೀಕಿಸಿದರು. 

ಮೊಳಕೆಯಲ್ಲೇ ಚಿವುಟಿ ಹಾಕಬಹುದಿತ್ತು
ನವದೆಹಲಿಯ ತಮ್ಮ ‌ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಡಿ. ದೇವೇಗೌಡ ಅವರು, ಹಿಜಾಬ್ ಧರಿಸುವ ಬಗೆಗಿನ ವಿವಾದ ಕರಾವಳಿಯಲ್ಲಿ ಒಂದು ಸಣ್ಣ ಕಿಡಿಯಾಗಿ ಶುರುವಾಯಿತು. ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯಲ್ಲಿ ಎಲ್ಲಾ ಮಾಹಿತಿಗಳು ಇರುತ್ತವೆ. ಮರುಗಳಿಗೆಯಲ್ಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು. ಈ ಪ್ರಕರಣವನ್ನು ಬೆಳೆಯಲು ಬಿಡಬಾರದಿತ್ತು. ಹಿಜಾಬ್ ಪ್ರಕರಣ ಸಣ್ಣದಾಗಿದ್ದಾಗಲೇ ಚಿವುಟಿಹಾಕಬಹುದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಕ್ಷಣವೇ ಎಲ್ಲಾ ಪಕ್ಷದವರ ಜೊತೆ ಚರ್ಚಿಸಿ ಹತ್ತಿಕ್ಕಬಹುದಿತ್ತು ಎಂದು ಹೇಳಿದರು.

ಇದನ್ನೂ ಓದಿ: Hijab Verdict: ‘ಹಿಜಾಬ್ ತೆಗೆದು ಕ್ಲಾಸ್ ಒಳಗೆ ಕಾಲಿಡಲ್ಲ’, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ವಿದ್ಯಾರ್ಥಿನಿಯರ ತೀರ್ಮಾನ

ಪ್ರಕರಣ ದೊಡ್ಡದಾಗಲು ರಾಜ್ಯ ಸರ್ಕಾರವೇ ಕಾರಣ
ಹಿಜಾಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣ. ರಾಜ್ಯ ಸರ್ಕಾರ ಹಿಜಾಬ್ ಪ್ರಕರಣ ನಿಭಾಯಿಸಲು ವಿಫಲವಾಯಿತು. ಈಗ ಸುಪ್ರೀಂ ಕೋರ್ಟಿಗೆ ಹೋಗುತ್ತಿರುವುದರಿಂದ ಇನ್ನೂ ಕೆಟ್ಟ ವಾತಾವರಣ ನಿರ್ಮಾಣವಾಗಲಿದೆ. ಬಿಜೆಪಿ ಹಿಂದಿನ‌ ಹಲವಾರು ಘಟನೆಗಳಿಂದಲೇ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ. ಯಾರು ಈ ಪ್ರಕರಣದ ಹಿಂದೆ ಇದ್ದಾರೆ ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ಇರುತ್ತೆ ಎಂದು ಹೇಳಿದ ದೇವೇಗೌಡರು ನಂತರ ಎಸ್ ಡಿಪಿಐ (SDPI) ಮತ್ತು ಪಿಎಫ್ ಐ  (PFI) ಎಂದು ನೇರವಾಗಿಯೇ ಆರೋಪಿಸಿದರು.

ಎಸ್ ಡಿಪಿಐ ಮತ್ತು ಪಿಎಫ್ಐ ಕೂಡ ಆರ್ ಎಸ್ಎಸ್ ನಂತೆ
ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಎಸ್ ಡಿಪಿಐ (SDPI) ಮತ್ತು ಪಿಎಫ್ಐ ಸಂಘಟನೆಗಳನ್ನು ಬ್ಯಾನ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವೇಗೌಡ ಅವರು, ಎಸ್ ಡಿಪಿಐ ಮತ್ತು ಪಿಎಫ್ಐ ಬ್ಯಾನ್ ಮಾಡುವುದು ಅಷ್ಟು ಸುಲಭ ಅಲ್ಲ. ಆರ್ ಎಸ್ ಎಸ್ (RSS) ಹೇಗೋ, ಹಾಗೆಯ ಎಸ್ ಡಿಪಿಐ (SDPI) ಮತ್ತು ಪಿಎಫ್ಐ ಕೂಡ ರಾಷ್ಟ್ರ ಮಟ್ಟದಲ್ಲಿ ಇದೆ. ಆದುದರಿಂದ ಎಸ್ ಡಿಪಿಐ (SDPI) ಮತ್ತು ಪಿಎಫ್ಐ ಬ್ಯಾನ್ ಮಾಡುವುದು ಕಷ್ಟ ಎಂಬುದು ನನ್ನ ಭಾವನೆ ಎಂದು ಹೇಳಿದರು.

ಇದನ್ನೂ ಓದಿ: Hijab Verdict: ಹೈಕೋರ್ಟ್ ತೀರ್ಪು ಗೌರವಿಸುವಂತೆ BSY ಮನವಿ, ನಮಗೆ ಕಪಾಳಮೋಕ್ಷ ಆಗಿದೆ ಎನ್ನಲಾಗಲ್ಲ ಎಂದ್ರು ಸಿದ್ದು

ರಾಜ್ಯ ಹೈಕೋರ್ಟ್ ತೀರ್ಪಿಗೆ ಬದ್ದ
ರಾಜ್ಯ ಹೈಕೋರ್ಟ್ ತೀರ್ಪಿಗೆ ಬದ್ದ. ನಮ್ಮ ಪಕ್ಷದ ನಿಲುವು ಇದೇ ಆಗಿತ್ತು. ಹೈಕೋರ್ಟ್ ತೀರ್ಪು ಏನೇ ಬಂದರು ಒಪ್ಪಬೇಕೆಂದು ನಿರ್ಧರಿಸಿದ್ದೆವು. ಈ ವಿಷಯದಲ್ಲಿ ರಾಜಕೀಯ ಲಾಭ-ನಷ್ಟದ ಬಗ್ಗೆ ಇಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡೆತಡೆ ಇರಬಾರದು. ಮೊದಲಿನಿಂದಲೂ ನನ್ನದು ಇದೇ ನಿಲುವು. ಈಗ ಇದರ ಹಿಂದೆ ಇದ್ದವರು ಸುಪ್ರೀಂ ಕೋರ್ಟಿಗೆ ಹೋಗುತ್ತೇನೆ ಎಂದಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ ಸುಪ್ರೀಂ ಕೋರ್ಟ್ ಗೆ ಹೋಗುವವರನ್ನು ಯಾರು ತಡೆಯಲು ಸಾಧ್ಯ? ಎಂದು ದೇವೇಗೌಡ ಹೇಳಿದರು.

ಶಾಂತಿಗಾಗಿ‌ ದೇವೇಗೌಡ ಮನವಿ
ಹೈಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಿ ಶಾಂತಯುತವಾಗಿರಬೇಕು.‌ ರಾಜ್ಯದಲ್ಲಿ ಶಾಂತಿ ನೆಲಸಲು ವಿದ್ಯಾರ್ಥಿಗಳು, ಪೋಷಕರಿಗೆ ಮನವಿ ಮಾಡುತ್ತೇನೆ. ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕುವವರಲ್ಲೂ ಮನವಿ ಮಾಡುತ್ತೇನೆ.‌ ಪೋಷಕರು ಹೈಕೋರ್ಟ್ ತೀರ್ಪನ್ನು ಒಪ್ಪಿಕೊಂಡು ಮುನ್ನಡೆಯುವುದು ಒಳ್ಳೆಯದು ಎಂದು ಎಚ್.ಡಿ. ದೇವೇಗೌಡ ಅವರು ಹೇಳಿದರು. ಒಂದು ಹಂತದಲ್ಲಿ 'ಎರಡೂ ರಾಜಕೀಯ ಪಕ್ಷಗಳು ಈ ಘಟನೆಯಿಂದ ಉಪಯೋಗ ಪಡೆಯಲು ಪ್ರಯತ್ನಿಸಿವೆ ಎಂದು ಆರೋಪಿಸಿದರು.
Published by:Kavya V
First published: