• Home
 • »
 • News
 • »
 • national-international
 • »
 • Narendra Modi-Deve Gowda: ಮೋದಿ ಭೇಟಿಯಾದ ದೇವೇಗೌಡ! ಹಾಲಿ-ಮಾಜಿ ಪ್ರಧಾನಿಗಳ ಮಾತುಕತೆ ಉದ್ದೇಶವೇನು?

Narendra Modi-Deve Gowda: ಮೋದಿ ಭೇಟಿಯಾದ ದೇವೇಗೌಡ! ಹಾಲಿ-ಮಾಜಿ ಪ್ರಧಾನಿಗಳ ಮಾತುಕತೆ ಉದ್ದೇಶವೇನು?

ಮೋದಿ-ದೇವೇಗೌಡರ ಭೇಟಿ (ಕೃಪೆ: ANI)

ಮೋದಿ-ದೇವೇಗೌಡರ ಭೇಟಿ (ಕೃಪೆ: ANI)

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಂಸತ್ ಚಳಿಗಾಲದ ಅಧಿವೇಶನದ ನಡುವೆಯೇ ಹಾಲಿ, ಮಾಜಿ ಪ್ರಧಾನಿಗಳು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

 • News18 Kannada
 • 5-MIN READ
 • Last Updated :
 • New Delhi, India
 • Share this:

ನವದೆಹಲಿ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (Former Prime Minister H.D. Deve Gowda) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನವದೆಹಲಿಯಲ್ಲಿ (New Delhi) ನಡೆಯುತ್ತಿರುವ ಸಂಸತ್ ಚಳಿಗಾಲದ ಅಧಿವೇಶನದ (winter session of Parliament) ಮಧ್ಯೆಯೇ ಹಾಲಿ, ಮಾಜಿ ಪ್ರಧಾನಿಗಳು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇನ್ನು ಮೋದಿ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ದೇವೇಗೌಡ, “ನಾನು ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದೇನೆ. ನಮ್ಮ ರಾಜ್ಯದ ನೀರಾವರಿ ವಿಚಾರವನ್ನ ಪ್ರಸ್ತಾಪ ಮಾಡಿದ್ದೇನೆ. ಮುಖ್ಯವಾಗಿ ಕಾವೇರಿ, ಕೃಷ್ಣಾ ಹಾದೂ ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದ್ದೇನೆ” ಎಂದಿದ್ದಾರೆ.


ನವದೆಹಲಿಯಲ್ಲಿ ಹಾಲಿ-ಮಾಜಿ ಪ್ರಧಾನಿ ಭೇಟಿ


ನಾನು ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದೇನೆ ಅಂತ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಭೇಟಿ ವೇಳೆ ನಮ್ಮ ರಾಜ್ಯದ ನೀರಾವರಿ ವಿಚಾರವನ್ನ ಪ್ರಸ್ತಾಪ ಮಾಡಿದ್ದೇನೆ. ಅದರಲ್ಲೂ ಮುಖ್ಯವಾಗಿ ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದ್ದೇನೆ ಎಂದಿದ್ದಾರೆ. ನೀರಾವರಿ ಯೋಜಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿರುವ ವಿಷಯವನ್ನ ವಿವರವಾಗಿ ಪ್ರಧಾನಿ ಮೋದಿಯವರಿಗೆ ವಿವರಿಸಿದ್ದೇನೆ ಎಂದು ಹೇಳಿದ್ದಾರೆ.“ಈ ಜಾಗದಲ್ಲಿ ಕುಳಿತು ತೀರ್ಮಾನಿಸೋದು ಕಷ್ಟ” ಎಂದ ಮೋದಿ


ಇನ್ನು ಈ ಜಾಗದಲ್ಲಿ ಕೂತು ತೀರ್ಮಾನ ಮಾಡೊದು ಹಿಂಸೆಯಾಗಿದೆ  ದೇವೇಗೌಡ್ರೆ ಅಂತ ಪ್ರಧಾನಿ ಹೇಳಿದ್ದಾಗಿ ದೇವೇಗೌಡರು ತಿಳಿಸಿದ್ದಾರೆ. ನದಿ ನೀರಿನ ವ್ಯಾಜ್ಯಗಳ ತೀರ್ಮಾನ ಕಷ್ಟವಾಗಿದೆ. ನಮ್ಮದೆ ಸರಕಾರ ಇದ್ರೂ ನರ್ಮದಾ ತೀರ್ಮಾನ ಕಷ್ಟವಾಗಿದೆ ಎಂದಿದ್ದಾರಂತೆ. ನಮ್ಮವರೆ ನಮಗೆ ವಿರೋಧ ಮಾಡ್ತಿದ್ದಾರೆ, ಎಲ್ಲಾ ನದಿಗಳದ್ದು ವಿವಾದಗಳಿವೆ. ಯಾವ ನಿರ್ಧಾರ ತೆಗೆದುಕೊಳ್ಳುವುದು? ಎಂದು ಪ್ರಧಾನಿ ಮೋದಿ ಅವರು ತಮ್ಮ ಅಳಲು ತೋಡಿಕೊಂಡರಂತೆ.


ಮೋದಿ-ದೇವೇಗೌಡರ ಭೇಟಿ (ಕೃಪೆ: ANI)


ಇದನ್ನೂ ಓದಿ: Arunachal Clash: ಭಾರತದ ಒಂದಿಂಚೂ ಭೂಮಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ಅಮಿತ್ ಶಾ!


ಕುಂಚಟಿಗ ಸಮುದಾಯದ ಪರ ದೇವೇಗೌಡರ ಮನವಿ


ಇನ್ನು ರಾಜ್ಯದಲ್ಲಿ ಕುಂಚಟಿಗ ಸಮುದಾಯಕ್ಕೆ ಅನ್ಯಾಯ ಆಗಿರುವ ಬಗ್ಗೆ ವಿವರವಾಗಿ ಹೇಳಿದ್ದೇನೆ. ಕುಂಚಟಿಗ ಸಮಯದಾಯ ಕರ್ನಾಟಕದಲ್ಲಿ 6ರಿಂದ 7 ತಾಲೂಕುಗಳಲ್ಲಿದೆ. ಆದರೂ ಕುಂಚಟಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಕುಂಚಟಿಗ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಕೇಂದ್ರ  ಸರ್ಕಾರವು ಈ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದೇನೆ ಅಂತ ದೇವೇಗೌಡರು ಹೇಳಿದ್ರು.


ದೇವೇಗೌಡರ ಆರೋಗ್ಯ ವಿಚಾರಿಸಿದ ಮೋದಿ (ಕೃಪೆ: ANI)


ಹಾಸನ ಏರ್‌ಪೋರ್ಟ್‌ ಬಗ್ಗೆ ಪ್ರಧಾನಿಗೆ ಮನವಿ
ಪ್ರಧಾನಿ ಜೊತೆ ಮಾತುಕತೆ ವೇಳೆ ಹಾಸನ ಏರ್ಪೋರ್ಟ್ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಇನ್ನೂ ಏರ್ ಪೋರ್ಟ್ ಕೆಲಸ ಆಗಿಲ್ಲ. ಹೀಗಾಗಿ ಈ ಬಗ್ಗೆ ನೀವೇ ತೀರ್ಮಾನ ಮಾಡಿ ಎಂದು ಮೋದಿಯವರಿಗೆ ಕೆಳಿಕೊಂಡಿದ್ದೀನಿ ಎಂದು ಪ್ರಧಾನಿ ಭೇಟಿಯ ವಿವಿರಣೆಯನ್ನು ದೇವೇಗೌಡರು ನೀಡಿದ್ದಾರೆ.


ಇದನ್ನೂ ಓದಿ: Rajya Sabha: 8 ವರ್ಷಗಳಲ್ಲಿ 3 ಸಾವಿರ ದಾಳಿ, 23 ಮಾತ್ರ ಸಕ್ಸಸ್! ಸಂಸತ್‌ನಲ್ಲಿ ಇಡಿ ವಿರುದ್ಧ ಎಎಪಿ ಕಿಡಿ


ದೇವೇಗೌಡರಿಗೆ ಸೂಕ್ತ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ


ಇನ್ನು ತಾವು ಪ್ರಸ್ತಾಪಿಸಿರುವ ಎಲ್ಲಾ ವಿಷಯಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದಾರೆ ಅಂತ ದೇವೇಗೌಡರು ಹೇಳಿದ್ದಾರೆ. ಎಲ್ಲಾ ದಾಖಲೆಗಳನ್ನು ಅವರು ಪರಿಶೀಲಿಸಿದ್ದು, ಖಂಡಿತವಾಗಿಯೂ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ದೇವೇಗೌಡರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Published by:Annappa Achari
First published: