ಪ್ರಣಬ್​ ಮುಖರ್ಜಿಗೆ ಭಾರತ ರತ್ನ ಗೌರವ; ಕಾರ್ಯಕ್ರಮಕ್ಕೆ ಬರಲೇ ಇಲ್ಲ ಗಾಂಧಿ ಕುಟುಂಬ

Bahart Ratna: ಪ್ರಣಬ್​ ಮುಖರ್ಜಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಾನಾಜಿ ದೇಶ್ಮುಖ್​ ಸಮಾಜ ಸುಧಾರಕರು. ದಶಕಗಳ ಕಾಲ ದೇಶಕ್ಕಾಗಿ ಶ್ರಮಿಸಿದ್ದವರು. ಭೂಪೇನ್ ಹಜಾರಿಕಾ ಪ್ರಸಿದ್ಧ ಗಾಯಕರಾಗಿದ್ದವರು. ಅವರ ಹಾಡುಗಳು ಇಂದಿಗೂ ಜನಜನಿತ.

Rajesh Duggumane | news18
Updated:August 9, 2019, 10:34 AM IST
ಪ್ರಣಬ್​ ಮುಖರ್ಜಿಗೆ ಭಾರತ ರತ್ನ ಗೌರವ; ಕಾರ್ಯಕ್ರಮಕ್ಕೆ ಬರಲೇ ಇಲ್ಲ ಗಾಂಧಿ ಕುಟುಂಬ
ಪ್ರಣಬ್​ ಮುಖರ್ಜಿಗೆ ರಾಮನಾಥ್​ ಕೋವಿಂದ ಅವರು ಭಾರತ ರತ್ನ ನೀಡಿದ ಕ್ಷಣ
  • News18
  • Last Updated: August 9, 2019, 10:34 AM IST
  • Share this:
ನವದೆಹಲಿ (09): ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್​​ನ ಹಿರಿಯ ನಾಯಕ ಪ್ರಣಬ್​ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮ್​ ನಾತ್​ ಕೋವಿಂದ್​ ಅವರು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ನಾನಾಜಿ ದೇಶ್ಮುಖ್ ಹಾಗೂ , ಭೂಪೇನ್ ಹಜಾರಿಕಾಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಜನವರಿ ತಿಂಗಳಲ್ಲೇ ಕೇಂದ್ರ ಸರ್ಕಾರ ಘೋಷಿಸಿತ್ತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತರತ್ನ ನೀಡಲಾಯಿತು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜನಾಥ್​ ಸಿಂಗ್​, ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಚ್ಚರಿ ಎಂದರೆ ಗಾಂಧಿ ಕುಟುಂಬದ ಯಾರೊಬ್ಬರೂಪಾಲ್ಗೊಂಡಿರಲಿಲ್ಲ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಪ್ರಣಬ್​ ಮುಖರ್ಜಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಾನಾಜಿ ದೇಶ್ಮುಖ್​ ಸಮಾಜ ಸುಧಾರಕರು. ದಶಕಗಳ ಕಾಲ ದೇಶಕ್ಕಾಗಿ ಶ್ರಮಿಸಿದ್ದವರು. ಭೂಪೇನ್ ಹಜಾರಿಕಾ ಪ್ರಸಿದ್ಧ ಗಾಯಕರಾಗಿದ್ದವರು. ಅವರ ಹಾಡುಗಳು ಇಂದಿಗೂ ಜನಜನಿತ.

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ; ಲೋಕಸಭೆಯಲ್ಲಿ ಮೊಳಗಿದ ಕೂಗು

ಸಿದ್ದಗಂಗಾ ಶ್ರೀಗಳ ಆರೋಗ್ಯ ಹದಗೆಟ್ಟ ದಿನದಿಂದಲೂ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ನ್ಯೂಸ್​ 18 ಕನ್ನಡ ಕೂಡ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೋರಿ ಕ್ಯಾಂಪೇನ್​ ಆರಂಭಿಸಿತ್ತು.

ಕ್ಯಾಂಪೇನ್​ ಬೆನ್ನಲ್ಲೇ ಕೇಂದ್ರ ಸಚಿವ ಸದಾನಂದ ಗೌಡರನ್ನು ಭೇಟಿ ಮಾಡಿ ನ್ಯೂಸ್​ 18 ತಂಡ ಮನವಿ ಪತ್ರವನ್ನು ಕೂಡ ನೀಡಿತ್ತು. ಇದು ಕೇವಲ ನ್ಯೂಸ್​ 18 ಕನ್ನಡದ ಅಭಿಯಾನ ಮಾತ್ರ ಆಗಿರಲಿಲ್ಲ. ಲಕ್ಷಾಂತರ ಭಕ್ತರ ಆಶಯವೂ ಆಗಿತ್ತು. ಜತೆಗೆ ಶ್ರೀಗಳು ದಶಕಗಳಿಂದ ಮಾಡಿಕೊಂಡು ಬಂದ ನಿಸ್ವಾರ್ಥ ಸೇವೆಗೆ ದೇಶದ ಅತ್ಯುನ್ನತ ಪ್ರಶಸ್ತಿ ಸಿಗಬೇಕು ಎಂಬ ಆಶಯ ಎಲ್ಲರದಾಗಿತ್ತು. ಆದರೆ, ಅವರಿಗೆ ಭಾರತರತ್ನ ನೀಡಿರಲಿಲ್ಲ.
First published:August 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading