ರೋಮ್(ಡಿ.31): ಮಾಜಿ ಕ್ಯಾಥೋಲಿಕ್ ಪೋಪ್ ಬೆನೆಡಿಕ್ಟ್ XVI ಶನಿವಾರ ವ್ಯಾಟಿಕನ್ ನಗರದಲ್ಲಿ ನಿಧನರಾಗಿದ್ದಾರೆ. ಅವರು ತಮ್ಮ 95 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ವ್ಯಾಟಿಕನ್ ಚರ್ಚ್ ವಕ್ತಾರರು ನೀಡಿರುವ ಹೇಳಿಕೆಯಲ್ಲಿ, ಮಾಜಿ ಪೋಪ್ ಬೆನೆಡಿಕ್ಟ್ XVI ಅವರು ವ್ಯಾಟಿಕನ್ನ ಮೇಟರ್ ಎಕ್ಲೇಸಿಯಾದಲ್ಲಿ ಬೆಳಿಗ್ಗೆ 9:34 ಕ್ಕೆ ನಿಧನರಾಗಿದ್ದು, ಬಹಳ ದುಃಖವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆನೆಡಿಕ್ಟ್ XVI ರ ಮರಣದ ನಂತರ, ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಅವರು ಆಗಾಗ್ಗೆ ಅವರನ್ನು ಭೇಟಿಯಾಗುತ್ತಿದ್ದರು ಎಂದು ಹೇಳಿದರು.
ಮಾಧ್ಯಮ ವರದಿಗಳ ಪ್ರಕಾರ, 16 ನೇ ಬೆನೆಡಿಕ್ಟ್ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೃದ್ಧಾಪ್ಯದ ಕಾರಣ ಅವರ ಆರೋಗ್ಯ ಹದಗೆಟ್ಟಿತ್ತು. ಬೆನೆಡಿಕ್ಟ್ XVI ಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಪೋಪ್ ಫ್ರಾನ್ಸಿಸ್ ಬುಧವಾರ ವ್ಯಾಟಿಕನ್ನಲ್ಲಿ ಸಾಮಾನ್ಯ ಭಕ್ತರಿಗೆ ಮನವಿ ಮಾಡಿದರು. ಭಗವಂತನ ಕೃಪೆಯನ್ನು ಚರ್ಚ್ ಮೇಲೆ ಕೊನೆಯವರೆಗೂ ಇರುವಂತೆ ಪ್ರಾರ್ಥಿಸುತ್ತೇವೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದರು.
Saddened by the passing away of Pope Emeritus Benedict XVI, who devoted his entire life to the Church and the teachings of Lord Christ. He will be remembered for his rich service to society. My thoughts are with the millions around the world who grieve his passing.
— Narendra Modi (@narendramodi) December 31, 2022
ಬೆನೆಡಿಕ್ಟ್ XVI ಜರ್ಮನಿಯಲ್ಲಿ ಜನಿಸಿದರು ಮತ್ತು ಅವರ ಬಾಲ್ಯದ ಹೆಸರು ಜೋಸೆಫ್ ರಾಟ್ಜಿಂಗರ್. ಬೆನೆಡಿಕ್ಟ್ 2005 ರಲ್ಲಿ ವ್ಯಾಟಿಕನ್ ಸಿಟಿಯ ಪೋಪ್ ಆಗಿ ಆಯ್ಕೆಯಾದರು. ಆ ಸಮಯದಲ್ಲಿ ಅವರು 78 ವರ್ಷ ವಯಸ್ಸಿನವರಾಗಿದ್ದರು ಮತ್ತು ಅತ್ಯಂತ ಹಳೆಯ ಪೋಪ್ಗಳಲ್ಲಿ ಒಬ್ಬರಾಗಿದ್ದರು. ಅವರು ಸುಮಾರು ಎಂಟು ವರ್ಷಗಳ ಕಾಲ ರೋಮನ್ ಕ್ಯಾಥೋಲಿಕ್ ಚರ್ಚ್ನ ಪೋಪ್ ಆಗಿದ್ದರು. 2013 ರಲ್ಲಿ ಪದತ್ಯಾಗ ಮಾಡಿದರು, ಅವರು 1415 ರಲ್ಲಿ ಗ್ರೆಗೊರಿ XII ನಂತರ ರಾಜೀನಾಮೆ ನೀಡಿದ ಮೊದಲ ಪೋಪ್ ಆದರು. ಅವರು ಯುರೋಪ್ನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು.
ಇದನ್ನೂ ಓದಿ: Christmas Crib: ಕ್ರಿಸ್ಮಸ್ ಸಂಭ್ರಮದಲ್ಲಿ ಕಣ್ಮನ ಸೆಳೆಯೋ ಗೋದಲಿ ಸಂಪ್ರದಾಯಕ್ಕಿದೆ 795 ವರ್ಷಗಳ ಇತಿಹಾಸ!
ಪ್ರಧಾನಿ ಮೋದಿ ಸಂತಾಪ
ಬೆನೆಡಿಕ್ಟ್ XVI ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ ಮತ್ತು ಮಾಜಿ ಕ್ಯಾಥೋಲಿಕ್ ಪೋಪ್ ಅವರು ಸಮಾಜಕ್ಕೆ ನೀಡಿದ ಅಮೂಲ್ಯವಾದ ಸೇವೆಯನ್ನು ಸ್ಮರಿಸಲಾಗುವುದು ಎಂದು ಹೇಳಿದರು. ತಮ್ಮ ಇಡೀ ಜೀವನವನ್ನು ಚರ್ಚ್ ಮತ್ತು ಯೇಸುಕ್ರಿಸ್ತನ ಬೋಧನೆಗಳಿಗಾಗಿ ಮುಡಿಪಾಗಿಟ್ಟ ಪೋಪ್ ಎಮೆರಿಟಸ್ ಬೆನೆಡಿಕ್ಟ್ XVI ರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಸಮಾಜಕ್ಕೆ ಅವರ ಅಮೂಲ್ಯ ಸೇವೆಯನ್ನು ಸ್ಮರಿಸಲಾಗುವುದು. ಅವರ ಅಗಲಿಕೆಯಿಂದ ದುಃಖಿತರಾಗಿರುವವರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ