ಇಂದು ಪಾಕಿಸ್ತಾನಕ್ಕೆ ಕಾಲಿಡುತ್ತಲೇ ನವಾಜ್​ ಷರೀಫ್​ ಮತ್ತು ಮಗಳ ಬಂಧನ!


Updated:July 13, 2018, 3:04 PM IST
ಇಂದು ಪಾಕಿಸ್ತಾನಕ್ಕೆ ಕಾಲಿಡುತ್ತಲೇ ನವಾಜ್​ ಷರೀಫ್​ ಮತ್ತು ಮಗಳ ಬಂಧನ!
  • Share this:
ನ್ಯೂಸ್​ 18 ಕನ್ನಡ

ಇಸ್ಲಮಾಬಾದ್​(ಜು.13): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ಹಾಗೂ ಅವರ ಮಗಳು ಮರಿಯಮ್​ ನವಾಜ್​ ಇಂದು ಪಾಕಿಸ್ತಾನಕ್ಕೆ ಮರಳಲಿದ್ದಾರೆ. ಲಂಡನ್​ನಲ್ಲಿ ಅಕ್ರಮವಾಗಿ ಆಸ್ತಿ ಖರೀದಿ ಪ್ರಕರಣದಲ್ಲಿ ನವಾಜ್​ ಷರೀಫ್​ಗೆ 10 ವರ್ಷ ಹಾಗೂ ಮಗಳು ಮರಿಯಮ್​ಗೆ 7 ವರ್ಷಗಳ ಶಿಕ್ಷೆ ಪ್ರಕಟವಾಗಿದೆ. ಹೀಗಿರುವಾಗ ಇಬ್ಬರೂ ಮರಳುತ್ತಿದ್ದಂತೆ, ಏರ್​ಪೋರ್ಟ್​ನಲ್ಲೇ ಅವರನ್ನು ಬಂಧಿಸಲು ತಯಾರಿ ನಡೆಸಲಾಗಿದೆ. ಇದಕ್ಕಾಗಿ ಹೆಲಿಕಾಪ್ಟರ್​ಗಳನ್ನೂ ತಯಾರಿಡಲಾಗಿದೆ. ಇಬ್ಬರನ್ನೂ ಬಂಧಿಸಿದ ಬಳಿಕ ವಾಯುಮಾರ್ಗದಲ್ಲಿ ರಾವಲ್ಪಿಂಡಿಯ ಆದಿಯಾಲಾ ಜೈಲಿಗೆ ಕರೆದೊಯ್ಯಲಾಗುತ್ತದೆ. ಇನ್ನು ಇತ್ತ ಪಾಕಿಸ್ತಾನ ಸರ್ಕಾರವು ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಗಳೆಂದು ಪರಿಗಣಿಸಿರುವ ವ್ಯಕ್ತಿಗಳ ಸಂದರ್ಶನ ಹಾಗೂ ಲೈವ್​ ಪ್ರಸಾರಕ್ಕೆ ತಡೆ ನೀಡಿದೆ.

ಈ ಮಧ್ಯೆ, ಲಂಡನ್ನಿನಿಂದ ಪಾಕಿಸ್ತಾನಕ್ಕೆ ಆಗಮಿಸುತ್ತಿರುವ ನವಶಾಜ್ ಷರೀಫ್, ಭಾವನಾತ್ಮಕ ವಿಡಿಯೋವೊಂದನ್ನ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಬರುತ್ತಿದ್ದೇನೆ ಎಮದು ಹೇಳಿಕೊಂಡಿದ್ದಾರೆ.

 

ಇಂದು ಬೆಳಗ್ಗೆ ತಂದೆ ಹಾಗೂ ಮಗಳು ಇಬ್ಬರೂ ಲಂಡನ್​ನಿಂದ ಪಾಕಿಸ್ತಾನಕ್ಕೆ ಹೊರಟಿದ್ದಾರೆ. ಪಾಕಿಸ್ತಾನದ ನ್ಯೂಸ್​ ವೆಬ್​ಸೈಟ್​ "ಡಾನ್​" ಸನ್ವಯ ನವಾಜ್​ ಹಾಘೂ ಮರಿಯಮ್​ ಲಾಹೋರ್​ನ ಅಲ್ಲಮಾ ಇಕ್ಬಾಲ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 06.15ಕ್ಕೆ ತಲುಪಲಿದ್ದಾರೆಂದು ಹೇಳಲಾಗಿದೆ.
ಇನ್ನು ಲಂಡನ್​ನಿಂದ ಹೊರಡುವುದಕ್ಕೂ ಮೊದಲು ಮರಿಯಮ್​ ತಮ್ಮ ಟ್ವಿಟರ್​ನಲ್ಲಿ ಕೆಲ ಪೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಹೀಗೆ ಶೇರ್​ ಮಾಡಿರುವ ಪೋಟೋಗಳಲ್ಲಿ ಲಂಡನ್​ನ ಆಸ್ಪತ್ರೆಯೊಂದರಲ್ಲಿ ಭರ್ತಿಯಾಗಿರುವ ಕುಲ್ಸೂಮ್​ ನವಾಜ್​​ರಿಗೆ ವಿದಾಯ ಹೇಳುತ್ತಿರುವುದು ಕಂಡು ಬಂದಿದೆ.

ನವಾಜ್​ ಷರೀಫ್​ ಮೇಲಿರುವ ಆರೋಪಗಳೇನು?

  • ನವಾಜ್​ ಷರೀಫ್​ ಹಾಗೂ ಅವರ ಕುಟುಂಬದ ವಿರುದ್ಧ ನ್ಯಾಷನಲ್​ ಅಕೌಂಟೇಬಿಲಿಟಿ ಬ್ಯೂರೋ ಭ್ರಷ್ಟಾಚಾರದ ಮೂರು ಆರೋಪಗಳನ್ನು ದಾಖಲಿಸಿದೆ. ಇದರಲ್ಲಿ ಎವೆನ್​ಫೀಲ್ಡ್​ ಪ್ರಾಪರ್ಟೀಸ್​, ಗಲ್ಫ್​ ಸ್ಟೀಲ್​ ಮಿಲ್ಸ್​ ಹಾಗೂ ಅಲ್​ ಅಜೀಜಾ ಸ್ಟೀಲ್​ ಮಿಲ್ಸ್​ ಕೇಸ್​ಗಳು ಶಾಮೀಲಾಗಿವೆ.

  • ಎವೆನ್​ಫೀಲ್ಡ್​ ಪ್ರಾಪರ್ಟೀಸ್​ ಕೇಸ್​ ಅಂದರೆ ಎವೆನ್​ಪೀಲ್ಡ್​ ಅಪಾರ್ಟ್​ಮೆಂಟ್​ನಲ್ಲಿ ನವಾಜ್​ ಷರೀಫ್​ ಹಾಗೂ ಅವರ ಕುಟುಂಬದ ಮೂವರ ಫ್ಲಾಟ್​ಗಳಿವೆ. ಇದು ಪನಾಮಾ ಪೇಪರ್ಸ್​ನಲ್ಲಿ ಬಯಲಾಯಿತು. ಅವರು 90ರ ದಶಕದಲ್ಲಿ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಈ ಫ್ಲ್ಯಾಟ್​ ಖರೀದಿಸಲಾಗಿತ್ತು. ಇನ್ನು ಈ ಎವೆನ್​ಪೀಲ್ಡ್​ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಖರೀದಿಸುವಂತೆ ಕೋರ್ಟ್​ ಆದೇಶವನ್ನೂ ನೀಡಿತ್ತು.

  • ಆರೋಪಗಳ ಬಳಿಕ ನಾವಾಜ್​ ಷರೀಫ್​ ಮಗಳು ಮಿರಿಯಮ್​ ಕೆಲ ದಾಖಲೆಗಳನ್ನು ತೋಈರಿಸಿ ತಾನೇ ಆ ಫ್ಲ್ಯಾಟ್​ನ ಟ್ರಸ್ಟಿ ಎಂದು ಬಿಂಬಿಸಲು ಯತ್ನಿಸಿದ್ದರು. ಬಳಿಕ ಬ್ರಿಟಿಷ್ ಫಾರೆನ್ಸಿಕ್​ ಎಕ್ಸ್​ಪೋರ್ಟ್ಸ್​ ಈ ದಾಖಲೆಗಳು ನಕಲಿ ಎಂದು ಸಾಬೀತು ಮಾಡಿತ್ತು. ವಾಸ್ತವವಾಗಿ ಈ ದಾಖಲೆಗಳಲ್ಲಿ ಬಳಸಲಾದ ಫಾಂಟ್​ ಸೈಜ್​ 2007ರ ಬಳಿಕ ಬಳಕೆಗೆ ಬಂದಿತ್ತು.


 
First published: July 13, 2018, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading