ಎಸ್​​ಪಿಗೆ ಆಘಾತ ಸುದ್ದಿ: ಮಾಜಿ ಪ್ರಧಾನಿ ಪುತ್ರ ನೀರಜ್​​ ಶೇಖರ್​​​ ಬಿಜೆಪಿ ಸೇರ್ಪಡೆ

ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಬಾಲಿಯಾ ಕ್ಷೇತ್ರದಿಂದ ಎಸ್​ಪಿ ಟಿಕೆಟ್ ನೀಡಲು​​​ ನಿರಾಕರಿಸಿತ್ತು. ಇದರಿಂದ ಬೇಸತ್ತ ಶೇಖರ್ ಅವರು ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

Ganesh Nachikethu
Updated:July 16, 2019, 6:12 PM IST
ಎಸ್​​ಪಿಗೆ ಆಘಾತ ಸುದ್ದಿ: ಮಾಜಿ ಪ್ರಧಾನಿ ಪುತ್ರ ನೀರಜ್​​ ಶೇಖರ್​​​ ಬಿಜೆಪಿ ಸೇರ್ಪಡೆ
ನೀರಜ್​​ ಶೇಖರ್​​
Ganesh Nachikethu
Updated: July 16, 2019, 6:12 PM IST
ನವದೆಹಲಿ(ಜುಲೈ.15): ಉತ್ತರಪ್ರದೇಶದಲ್ಲಿ ಮಾಜಿ ಸಿಎಂ ಅಖಿಲೇಶ್​​ ಯಾದವ್​​ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ಮತ್ತು ಎಸ್​​ಪಿ ಮುಖಂಡ ನೀರಜ್ ಶೇಖರ್, ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವರ, ಸಮ್ಮುಖದಲ್ಲೇ ನೀರಜ್ ಕೇಸರಿ ಪಕ್ಷಕ್ಕೆ ಸೇರಿದ್ದಾರೆ ಎಂದು ಎಎನ್​​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇತ್ತೀಚೆಗಷ್ಟೇ ನೀರಜ್ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ "ಪ್ರಧಾನಿ ನರೇಂದ್ರ ಮೋದಿಯವರ ಉತ್ತಮವಾದ ಕೆಲಸ ನೋಡಿ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಹಾಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಇದು ನನ್ನ ಸ್ವಂತ ನಿರ್ಧಾರ. ನನಗೆ ರಾಜೀನಾಮೆ ನೀಡುವಂತೆ ಯಾರೂ ಕೂಡ ಒತ್ತ ಹಾಕಿಲ್ಲ" ಎಂದಿದ್ದರು. ನಂತರ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯನಾಯ್ಡು ನೀರಜ್​​ ರಾಜೀನಾಮೆಯನ್ನು ಅಂಗೀಕರಿಸಿದ್ದರು.

ಇನ್ನು ನೀರಜ್​​ ಶೇಖರ್​​ ಎಸ್​​ಪಿ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಹಾಗಾಗಿ ನೀರಜ್ ಶೇಖರ್ ಅವರು ಭಾರತೀಯ ಜನತಾ ಪಕ್ಷ ಸೇರಿದ್ದಾರೆ ಎಂಬ ಸುದ್ದಿ ಅಖಿಲೇಶ್​ ಯಾದವ್​​ ಪಡೆಗೆ ಭಾರೀ ಆಘಾತ ತಂದಿತ್ತು.

ಇದನ್ನೂ ಓದಿ: ಮುಂಗಾರು ಚುರುಕು: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ

2008ರಲ್ಲಿ ಬಲ್ಲಿಯಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಲೋಕಸಭಾ ಸದಸ್ಯರಾದರು. ಬಳಿಕ 2014ರಲ್ಲಿ ಉತ್ತರಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿರುವ ಶೇಖರ್ ಆಯ್ಕೆಯಾಗಿದ್ದರು.

ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಬಾಲಿಯಾ ಕ್ಷೇತ್ರದಿಂದ ಎಸ್​ಪಿ ಟಿಕೆಟ್ ನೀಡಲು​​​ ನಿರಾಕರಿಸಿತ್ತು. ಇದರಿಂದ ಬೇಸತ್ತ ಶೇಖರ್ ಅವರು ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
---------------
Loading...

First published:July 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...