LIVE NOW

(LIVE) ಕೆಸರಲ್ಲಿನ ಕಮಲ ಪಂಚಭೂತಗಳಲ್ಲಿ ವಿಲೀನ; ಅಟಲ್​ಜೀ ಎಂದೆಂದಿಗೂ ಅಜರಾಮರ

Kannada.news18.com | August 17, 2018, 5:12 PM IST
facebook Twitter google Linkedin
Last Updated August 17, 2018
auto-refresh

Highlights

ದೇಶ ಕಂಡ ಅಪರೂಪದ ರಾಜಕಾರಣಿ ಅಟಲ್​ ಬಿಹಾರಿ ವಾಜಪೇಯಿ ಇನ್ನಿಲ್ಲ. ಕಳೆದೆರಡು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್​ ಬಿಹಾರಿ ವಾಜಪೇಯಿ ಅವರು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.

ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ 1924ರಲ್ಲಿ ಜನಿಸಿದ ಇವರು ಆರ್​ಎಸ್​ಎಸ್​ನಲ್ಲಿ ಸಕ್ರಿಯರಾಗಿದ್ದವರು. 1957ರಲ್ಲಿ ರಾಜಕೀಯ ಪ್ರವೇಶಿಸಿದ ವಾಜಪೇಯಿ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಕವಿಯೂ ಹೌದು.

ಅಟಲ್​ ನಿವಾಸದಿಂದ ಬಿಜೆಪಿ ಕಚೇರಿಯತ್ತ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗಿದೆ. ಅಂತಿಮ ಸಂಸ್ಕಾರದ ವಿಧಿವಿಧಾನಗಳು ಸ್ಮೃತಿ ಸ್ಥಳದಲ್ಲಿ ಆರಂಭವಾಗಿದೆ. ಉತ್ತರ ಭಾರತದ ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಅಜಾತಶ್ರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.  ವಾಜಪೇಯಿ ಅವರ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಅವರೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಇನ್ನುಅಟಲ್​ ಬಿಹಾರಿ ವಾಜಪೇಯಿ ನೆನಪು ಮಾತ್ರ. ದೇಶದ ಕೋಟ್ಯಂತರ ಜನರ ಮನದಲ್ಲಿ ವಾಜಪೇಯಿ ಅವರು ಅಜರಾಮರರಾಗಿದ್ದಾರೆ...
Load More