ಫಿಲಿಫೀನ್ಸ್ ಮಾಜಿ ಸುಂದರಿಯ ಮೇಲೆ ಸಾಮೂಹಿಕ ಅತ್ಯಾಚಾರ-ಕೊಲೆ; ಹೋಟೆಲ್ ಬಾತ್​ಟಬ್​ನಲ್ಲಿ ಶವ ಪತ್ತೆ

ಮಾಧ್ಯಮ ವರದಿಗಳ ಪ್ರಕಾರ, ಮಕಾತಿ ಸಿಟಿ ಪ್ರಾಸಿಕ್ಯೂಟರ್ ಕಚೇರಿ ಇಲ್ಲಿಯವರೆಗೆ ಸಲ್ಲಿಸಿದ ಸಾಕ್ಷ್ಯಗಳ ತುಣುಕುಗಳು (Ms Dacera) ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೊಳಗಾದವು ಎಂಬ ತೀರ್ಮಾನಕ್ಕೆ ಬರಲು ಸಾಕಾಗುವುದಿಲ್ಲ ಎಂದು ಹೇಳಿದೆ.

ಫಿಲಿಫೀನ್ಸ್​ ಮಾಜಿ ಸುಂದರಿ ಕ್ರಿಸ್ಟೀನ್ ಏಂಜೆಲಿಕಾ ಡಾಸೆರಾ.

ಫಿಲಿಫೀನ್ಸ್​ ಮಾಜಿ ಸುಂದರಿ ಕ್ರಿಸ್ಟೀನ್ ಏಂಜೆಲಿಕಾ ಡಾಸೆರಾ.

 • Share this:
  ಫಿಲಿಫೀನ್ಸ್​ ದೇಶದ ಮಾಜಿ ಸುಂದರಿ ಮತ್ತು ಫ್ಲೈಟ್ ಅಟೆಂಡೆಂಟ್ ಕ್ರಿಸ್ಟೀನ್ ಏಂಜೆಲಿಕಾ ಡಾಸೆರಾ ಅವರನ್ನು ಫಿಲಿಪೈನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹೊಸ ವರ್ಷದ ದಿನದಂದು ಇಲ್ಲಿನ ಮಕತಿಯ ಗಾರ್ಡನ್ ಸಿಟಿ ಗ್ರ್ಯಾಂಡ್ ಹೋಟೆಲ್ ಕೋಣೆಯ ಸ್ನಾನದತೊಟ್ಟಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಮಕಾತಿ ವೈದ್ಯಕೀಯ ಕೇಂದ್ರ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದೆ. ಕ್ರಿಸ್ಟೀನ್​ ಏಂಜೆಲಿಕಾ 2017ರಲ್ಲಿ ಮಿಸ್​ ಸಿಲ್ವಾ ದಾವೋ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ಬಹುಮಾನಕ್ಕೆ ಪಾತ್ರರಾಗಿದ್ದರು. ಅಲ್ಲದೆ, 2019ರಲ್ಲಿ ಮುತ್ಯಾ ಎನ್​ಜಿ ದಾವೋ ಸೌಂದರ್ಯ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.

  ಈ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಆರೋಪ ಹೊರಿಸಲಾಗಿರುವ ಹನ್ನೊಂದು ಜನರನ್ನು ಆರಂಭದಲ್ಲಿ ಬಂಧಿಸಲಾಗಿದ್ದರೂ ನಂತರ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ.

  ಮಾಧ್ಯಮ ವರದಿಗಳ ಪ್ರಕಾರ, ಮಕಾತಿ ಸಿಟಿ ಪ್ರಾಸಿಕ್ಯೂಟರ್ ಕಚೇರಿ "ಇಲ್ಲಿಯವರೆಗೆ ಸಲ್ಲಿಸಿದ ಸಾಕ್ಷ್ಯಗಳ ತುಣುಕುಗಳು (Ms Dacera) ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೊಳಗಾದವು ಎಂಬ ತೀರ್ಮಾನಕ್ಕೆ ಬರಲು ಸಾಕಾಗುವುದಿಲ್ಲ" ಎಂದು ಹೇಳಿದೆ.

  ಆದರೆ, ಮೃತ ಯುವತಿಯ ಕುಟುಂಬದ ವಕೀಲರು 23 ವರ್ಷದ ಕ್ರಿಸ್ಟೀನ್​ಳಿಗೆ ಸಾಯುವ ಮುನ್ನ ಮಾದಕ ವಸ್ತುಗಳನ್ನು ನೀಡಿ ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯದಲ್ಲಿ ವಾದಿಸಲು ಮುಂದಾಗಿದ್ದಾರೆ.

  ಇದನ್ನೂ ಓದಿ: Crime News: ಮಧ್ಯಪ್ರದೇಶದಲ್ಲಿ 13 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ 8 ಜನ ಬಂಧನ

  ಮೃತ ಕ್ರಿಸ್ಟೀನ್‌ನ ತಾಯಿ ಶರೋನ್ ಡಾಸೆರಾ ಇತ್ತೀಚಿನ ಟೆಲಿವಿಷನ್ ಸಂದರ್ಶನವೊಂದರಲ್ಲಿ ತನ್ನ ಮಗಳ ಸಾವಿನಲ್ಲಿ ಅನ್ಯಾಯವಾಗಿದೆ. ಹೊಸ ವರ್ಷದ ಮುನ್ನಾ ದಿನದ ಪಾರ್ಟಿಗೆ ಆಕೆ ತನ್ನ ಗೆಳೆಯರ ಜೊತೆ ತೆರಳಿದ್ದಳು. ಈ ವೇಳೆ ಆಕೆಗೆ ಮಾದಕ ವಸ್ತುಗಳನ್ನು ನೀಡಲಾಗಿದೆ. ಇದು ಆಕೆಯ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

  ಆದರೆ, ಈವರೆಗೆ ಪ್ರಕರಣದ ತನಿಖೆ ನಡೆಯುತ್ತಿದ್ದು ಕ್ರಿಸ್ಟೀನ್​ ಏಂಜೆಲಿಕಾ ಅವರಿಗೆ ಮಾದಕ ವಸ್ತು ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲ್ಲಲಾಯಿತೇ? ಅಥವಾ ಆಕೆಯ ಸಾವು ಸ್ವಾಭಾವಿಕವೇ ಎಂದು ಈವರೆಗೆ ತಿಳಿದುಬಂದಿಲ್ಲ. ಪೊಲೀಸರು ಈ ತನಿಕೆಯನ್ನು ದಿನದಿಂದ ದಿನಕ್ಕೆ ಚುರುಕುಗೊಳಿಸುತ್ತಿದ್ದಾರೆ.
  Published by:MAshok Kumar
  First published: