ನಾನೆಂದಿಗೂ ಸಂಬಳ ಏರಿಕೆ ಕೇಳಿಲ್ಲ- ಏರಿಕೆಯನ್ನೇ ತಿರಸ್ಕರಿಸಿದ್ದೆ; ಪೆಪ್ಸಿ ಮಾಜಿ ಸಿಇಒ Indra Nooyi

ನನಗೆ ಹೆಚ್ಚು ವೇತನ ನೀಡುವಂತೆ ನನ್ನ ಮಂಡಳಿಯನ್ನು ನಾನು ಕೇಳಲಿಲ್ಲ ಎಂಬುದಾಗಿ ನೂಯಿ ನ್ಯೂಯಾರ್ಕ್ ಟೈಮ್ಸ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪೆಪ್ಸಿ ಕಂಪನಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ

ಪೆಪ್ಸಿ ಕಂಪನಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ

  • Share this:
ಅಮೆರಿಕದ ಪೆಪ್ಸಿ ಕಂಪನಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ (Former Pepsi CEO Indra Nooyi) ಯಶಸ್ವಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ತಾನು ವೇತನ ಏರಿಕೆ ಮಾಡುವಂತೆ ಕೇಳಿಲ್ಲ ಹಾಗೂ ನನಗೆ ಸಂಬಳ ಏರಿಕೆ ಬೇಡವೆಂದು ತಿರಸ್ಕರಿಸಿದ್ದೆ ಎಂದು ತಿಳಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೈನ್‌ನ ಸಂದರ್ಶನದಲ್ಲಿ ನಾನು ಎಂದಿಗೂ ಏರಿಕೆಗಾಗಿ ಕೇಳಲಿಲ್ಲ. ಈ ರೀತಿ ಕೇಳುವುದು ಮುಜುಗರವನ್ನಯ ಉಂಟು ಮಾಡುತ್ತದೆ. ಯಾರಿಗಾದರೂ ಉದ್ಯೋಗ ಮಾಡುವುದು ಹಾಗೂ ನನ್ನ ಸಂಬಳ ಸಾಕಾಗುವುದಿಲ್ಲ ಎಂದು ಹೇಳುವುದನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

S&P 500 ಕಂಪನಿಗಳ ಪೈಕಿ ಕೇವಲ 31 ಮಹಿಳೆಯರು ಕಂಪನಿಗಳನ್ನು ನಡೆಸುತ್ತಿದ್ದು 2018ರಲ್ಲಿ ಇಂದ್ರಾ ನೂಯಿ ಪದವಿಯಿಂದ ಕೆಳಗಿಳಿದಾಗ ಆ ಸಂಖ್ಯೆ ಇನ್ನೂ ಚಿಕ್ಕದಾಗಿತ್ತು. ಉದ್ಯೋಗದಲ್ಲಿ ಅವರ ಕೊನೆಯ ವರ್ಷದಲ್ಲಿ ಇಂದ್ರಾ ನೂಯಿ ಹೆಚ್ಚಿನ ಮಹಿಳೆಯರು ಮಾಡದ ಹಾಗೆಯೇ ಯುಎಸ್‌ನಲ್ಲಿರುವ ಸಾರ್ವಜನಿಕ ಕಂಪನಿಗಳಲ್ಲಿ ಕಾರ್ಯನಿರ್ವಾಹಕ ಸ್ಥಾನದ ವೇತನಕ್ಕಾಗಿ ಅಗ್ರಸ್ಥಾನಕ್ಕಾಗಿ ಹಾತೊರೆಯಲಿಲ್ಲ. ಅದೇ ವರ್ಷ ಒರಾಕಲ್ ಸಂಸ್ಥೆಯ ಸಫ್ರಾ ಕ್ಯಾಟ್ಜ್ ಬ್ಲೂಮ್‌ಬರ್ಗ್‌ನ ಕಾರ್ಯನಿರ್ವಾಹಕ ಶ್ರೇಯಾಂಕದಲ್ಲಿ 33 ನೇ ಸ್ಥಾನ ಪಡೆದುಕೊಂಡು ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಸಿಇಒ ಆಗಿದ್ದರು.

Former Pepsi CEO Indra Nooyi,  Indra Nooyi, Pepsi Co, US Company, Amazon, Sheryl Sandberg, ಇಂದ್ರಾ ನೂಯಿ, ಪೆಪ್ಸಿ ಕೊ, ಯುಎಸ್ ಕಂಪನಿ, ಅಮೆಜಾನ್, ಶೆರಿಲ್ ಸ್ಯಾಂಡ್‌ಬರ್ಗ್, Former Pepsi CEO Indra Nooyi says i never never asked for a raise
ಪೆಪ್ಸಿ ಕಂಪನಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ


ನನಗೆ ಹೆಚ್ಚು ವೇತನ ನೀಡುವಂತೆ ನನ್ನ ಮಂಡಳಿಯನ್ನು ನಾನು ಕೇಳಲಿಲ್ಲ ಎಂಬುದಾಗಿ ನೂಯಿ ನ್ಯೂಯಾರ್ಕ್ ಟೈಮ್ಸ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಒಂದು ವರ್ಷ ಮಂಡಳಿ ನನಗೆ ವೇತನದಲ್ಲಿ ಏರಿಕೆ ಮಾಡಿತು. ಆದರೆ ಅದು ನನಗೆ ಬೇಡವೆಂದು ಹೇಳಿದೆ.  ಆಗ ಸಂಸ್ಥೆ ಏಕೆ ಎಂದು ಕೇಳಿತ್ತು? ಆರ್ಥಿಕ ಬಿಕ್ಕಟ್ಟಿನ ನಂತರ ಸಂಸ್ಥೆಯು ಏರಿಕೆ ನಿರ್ಧಾರವನ್ನು ತೆಗೆದುಕೊಂಡಿತ್ತು ಹಾಗೂ ನಾನು ವೇತನದಲ್ಲಿ ಏರಿಕೆ ಬಯಸುವುದಿಲ್ಲ ಎಂದು ತಿಳಿಸಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಕೋಟಿ ಸಂಬಳದ ಪ್ರಖ್ಯಾತ ಉದ್ಯಮಿ: ಇಂದ್ರಾ ನೂಯಿ ‘ಪೆಪ್ಸಿಕೋ’ಯಿಂದ ಹೊರಕ್ಕೆ..!

ನೂಯಿ ಅವರು ಇನ್ನೂ ಪೆಪ್ಸಿ ಕಂಪನಿಯಲ್ಲಿದ್ದಾಗ ಸಂಶೋಧನಾ ಸಂಸ್ಥೆ ಸೂಚಿಸಿದ ಪ್ರಕಾರ ಲಿಂಗ ವೇತನದ ಅಂತರಕ್ಕೆ ಸಂಭಾವ್ಯ ಕೊಡುಗೆ ಎಂದೆನಿಸಿರುವ ಪುರುಷರಂತೆ, ಮಹಿಳೆಯರು ತಮ್ಮ ಸಂಬಳದ ಕುರಿತು ಆಗಾಗ್ಗೆ ಸಮಾಲೋಚನೆ ನಡೆಸುವುದಿಲ್ಲ ಎಂದು ತಿಳಿಸಿತ್ತು.

ಶೆರಿಲ್ ಸ್ಯಾಂಡ್‌ಬರ್ಗ್ ಬರೆದಿರುವ “ಲೀನ್ ಇನ್‌” ಪುಸ್ತಕದಲ್ಲಿ ಒಂದು ಪ್ರಸಿದ್ಧ ಮಾತನ್ನು ಬರೆದುಕೊಂಡಿದ್ದರು. ಅದೆಂದರೆ ಮಹಿಳೆಯರಿಗೆ ಏರಿಕೆ ಕೇಳಿ ಹಾಗೂ ಅವರು ಸ್ವೀಕರಿಸುತ್ತಾರೆ ಎಂದಿದ್ದರು. ಅಲ್ಲಿಂದ ನಂತರ ಮೆಕಿನ್ಸೆ & ಕಂ ಮತ್ತು LeanIn.org ನಡೆಸಿದ ಸಂಶೋಧನೆಯು ಪುರುಷರಂತೆಯೇ ಮಹಿಳೆಯರು ಕೂಡ ವೇತನ ಏರಿಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದನ್ನು ಕಂಡುಕೊಂಡರು. ಆದರೆ ಅಲ್ಲೊಂದು ಸಮಸ್ಯೆ ಇತ್ತು. ಆರಂಭಿಕ ಅಡೆತಡೆಯನ್ನು ವಿವರಿಸುವಂತೆ ಅವರು ಪಡೆಯುವ ಏರಿಕೆ ಕಡಿಮೆ ಇತ್ತು.

ಇದನ್ನೂ ಓದಿ: ನಾನೇನಾದರೂ ಸಂಪುಟ ಸೇರಿದರೆ 3ನೇ ಮಹಾಯುದ್ಧವೇ ಆದೀತು..! ಹಾಗೆಂದು ಹೇಳುತ್ತಾರೆ ವಿಶ್ವದ ಪ್ರಭಾವಿ ಮಹಿಳೆ

ನೂಯಿ ಪ್ರಸ್ತುತ ಅಮೆಜಾನ್.ಕಾಮ್ ಇಂಕ್‌ನ ಬೋರ್ಡ್‌ನಲ್ಲಿದ್ದಾರೆ. ಇತ್ತೀಚೆಗೆ “ಮೈ ಲೈಫ್ ಇನ್ ಫುಲ್” ಎಂಬ ಸ್ಮರಣ ಸಂಚಿಕೆ ಪ್ರಕಟಿಸಿದ್ದಾರೆ. ಪೆಪ್ಸಿ ಕಂಪನಿಯಲ್ಲಿ ಅವರ ಅಧಿಕಾರಾವಧಿಯಲ್ಲಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ಯಾಕೇಜ್‌ಗಳು ಮಾತ್ರವೇ ಏರಿಕೆಯಾಗುತ್ತಿವೆ. ಆದರೆ ಕಳೆದ ವರ್ಷ ದೇಶದ 100 ಉನ್ನತ ಪಾವತಿ ಪಡೆಯುವ ಕಾರ್ಯನಿರ್ವಾಹಕರಲ್ಲಿ ಕೇವಲ ಐದು ಜನ ಮಾತ್ರ ಮಹಿಳೆಯರಾಗಿದ್ದಾರೆ.
Published by:Anitha E
First published: