Anti Terrorism: ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಕಂಟಕ, ಯಾವುದೇ ಕ್ಷಣದಲ್ಲೂ ಬಂಧನದ ಆತಂಕ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಆಗಸ್ಟ್ 20 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ದೇಶದ ಪರಿಸ್ಥಿತಿ ಹಾಳು ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಪಾಕಿಸ್ತಾನದ ಶಾಂತಿ ವ್ಯವಸ್ಥೆಗೆ ಭಂಗ ತರುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, ಇಸ್ಲಾಮಾಬಾದ್ ನ ಐಜಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪವೂ ಇದೆ.

ಇಮ್ರಾನ್ ಖಾನ್

ಇಮ್ರಾನ್ ಖಾನ್

  • Share this:
ಇಸ್ಲಮಾಬಾದ್(ಆ.22): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Pakistan Former PM Imran Khan) ಅವರನ್ನು ಯಾವುದೇ ಕ್ಷಣದಲ್ಲಾದರೂ ಬಂಧಿಸಬಹುದು. ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ((Anti Terror Act) ಇಮ್ರಾನ್ ಖಾನ್ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಲಾಗಿದೆ. ಆಗಸ್ಟ್ 20 ರಂದು ಇಮ್ರಾನ್ ಖಾನ್ ಐಜಿ ಮತ್ತು ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದರು, ನಂತರ ಇಮ್ರಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತಡರಾತ್ರಿ, ಇಸ್ಲಾಮಾಬಾದ್‌ನ (Islamabad) ಐಜಿ ಅವರು ಬಂಧನ ವಾರಂಟ್ ಹೊರಡಿಸುವ ಮಾಹಿತಿ ನೀಡಿದ್ದಾರೆ. ಶಹಬಾಜ್ ಗಿಲ್ ಬಂಧನದ ವಿರುದ್ಧ ಇಮ್ರಾನ್ ಖಾನ್ ಆಗಸ್ಟ್ 20 ರಂದು ಇಸ್ಲಾಮಾಬಾದ್‌ನಲ್ಲಿ ರ್‍ಯಾಲಿ ನಡೆಸಿದರು. ಈ ರ್‍ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ರ್‍ಯಾಲಿಯನ್ನು ಎಲ್ಲಾ ಟಿವಿ ನ್ಯೂಸ್ ಚಾನೆಲ್‌ಗಳು ಪ್ರಸಾರ ಮಾಡಿದ್ದವು.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಆಗಸ್ಟ್ 20 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ದೇಶದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಪಾಕಿಸ್ತಾನದ ಶಾಂತಿ ವ್ಯವಸ್ಥೆಗೆ ಭಂಗ ತರುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, ಇಸ್ಲಾಮಾಬಾದ್ ಐಜಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪವೂ ಇದೆ.

ಇದನ್ನೂ ಓದಿ:  Pakistan: ಪಾಕಿಸ್ತಾನದಲ್ಲಿ ರೇಪಿಸ್ಟ್​​ಗಳಿಗೆ ರಾಸಾಯನಿಕ ನೀಡಿ 'ಅದನ್ನೇ' ಕಿತ್ತುಕೊಳ್ತಾರೆ!

ಪಾಕಿಸ್ತಾನದ ಜಿಯೋ ನ್ಯೂಸ್ ಪ್ರಕಾರ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಯಾವಾಗ ಬೇಕಾದರೂ ಬಂಧಿಸಬಹುದು ಅಥವಾ ಅವರನ್ನು ಗೃಹಬಂಧನದಲ್ಲಿ ಇರಿಸಬಹುದು. ಶನಿವಾರ ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಭಾಷಣ ಮಾಡುವಾಗ ಪೊಲೀಸರು, ನ್ಯಾಯಾಧೀಶರು, ಪಾಕಿಸ್ತಾನದ ಚುನಾವಣಾ ಆಯೋಗ ಮತ್ತು ರಾಜಕೀಯ ಪ್ರತಿಸ್ಪರ್ಧಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

Ex Pak PM Imran Khan Probed For Alleged Sale Of Gifted Necklace For 18 Crore rupees stg dvp
ಇಮ್ರಾನ್ ಖಾನ್


ಇಮ್ರಾನ್ ಅವರ ಭಾಷಣವು ಪೊಲೀಸರು, ನ್ಯಾಯಾಧೀಶರು ಮತ್ತು ದೇಶದಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ ಎಂದು ಎಫ್‌ಐಆರ್ ಹೇಳುತ್ತದೆ. ಆದ್ದರಿಂದ ಇಸ್ಲಾಮಾಬಾದ್ ಪೊಲೀಸ್ ನ ಉನ್ನತ ಅಧಿಕಾರಿಗಳು ಮತ್ತು ನ್ಯಾಯಾಧೀಶರನ್ನು ಬೆದರಿಸಿ ದೇಶದಲ್ಲಿ ಶಾಂತಿ ಕದಡಿದ್ದಕ್ಕಾಗಿ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:  Pakistan Politics Crisis: ಪ್ರಧಾನಿ ಮೋದಿ ಪಾಕಿಸ್ತಾನ ರಾಜಕೀಯದಲ್ಲಿ ಮೂಗು ತೂರಿಸಿದ್ದಾರೆ: ಇಮ್ರಾನ್ ಖಾನ್

ಮತ್ತೊಂದೆಡೆ, ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಶಹಬಾಜ್ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದೆ. ಇಮ್ರಾನ್ ಖಾನ್ ಅವರ ಮನೆಯ ಹೊರಗೆ ಅವರ ಬೆಂಬಲಿಗರ ಸಭೆಯೂ ನಡೆಯಿತು ಮತ್ತು ಪಕ್ಷವು ಇಸ್ಲಾಮಾಬಾದ್‌ಗೆ ಮೆರವಣಿಗೆ- ಮಾಡುವ ಘೋಷಣೆಯನ್ನು ನೀಡಿದೆ. ಪಾಕಿಸ್ತಾನದ ವಿವಿಧ ಭಾಗಗಳಿಂದ ಇಮ್ರಾನ್ ಖಾನ್ ಬೆಂಬಲಿಗರು ಇಸ್ಲಾಮಾಬಾದ್‌ಗೆ ತೆರಳಿದ್ದಾರೆ. ಇಮ್ರಾನ್ ಖಾನ್ ಅವರನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಪಿಟಿಐನ ಪ್ರಮುಖ ನಾಯಕ ಪರ್ವೇಜ್ ಖಟ್ಟಕ್ ಹೇಳಿದ್ದಾರೆ. ಇದೇ ವೇಳೆ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಪಾಕ್​ನಲ್ಲಿ ಹಿಂದೂ ಹೆಣ್ಮಕ್ಕಳ ಬಲವಂತದ ಮತಾಂತರ: ಇಮ್ರಾನ್ ಖಾನ್

ಕ್ರಿಕೆಟಿಗ ಕಮ್ ರಾಜಕಾರಣಿ ಇಮ್ರಾನ್ ಖಾನ್ ಗುರುವಾರ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಸಿಂಧ್‌ನಲ್ಲಿ ಹಿಂದೂ ಹುಡುಗಿಯರ ಬಲವಂತದ ಮತಾಂತರವನ್ನು ಖಂಡಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.

ಕುರಾನ್‌ನ ವಚನವನ್ನು ನೆನಪಿಸಿದರು

ಕುರಾನ್‌ನ ಒಂದು ಶ್ಲೋಕವನ್ನು ನೆನಪಿಸಿಕೊಂಡ ಅವರು, ಇಸ್ಲಾಂನಲ್ಲಿ ಬಲವಂತವಿಲ್ಲ ಎಂದು ಪವಿತ್ರ ಕುರಾನ್‌ನಲ್ಲಿ ಶ್ಲೋಕವಿದೆ ಎಂದು ಹೇಳಿದರು. ಇದು ಅಲ್ಲಾಹುವಿನ ಆಜ್ಞೆಯಾಗಿದೆ ಮತ್ತು ಯಾರಾದರೂ ಮುಸ್ಲಿಮೇತರರನ್ನು ಬಲವಂತವಾಗಿ ಮತಾಂತರಿಸಿದರೆ ಅಲ್ಲಾಹುವಿಗೆಗೆ ಅವಿಧೇಯರಾಗುತ್ತಾರೆ ಎಂದಿದ್ದಾರೆ.
Published by:Precilla Olivia Dias
First published: