ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹ ಜಮ್ಮು-ಕಾಶ್ಮೀರದ ನೂತನ ಉಪರಾಜ್ಯಪಾಲ

Manoj Sinha: ದಿಢೀರ್ ಬೆಳವಣಿಗೆಯಲ್ಲಿ ಮನೋಜ್ ಸಿನ್ಹ ಅವರು ಜಮ್ಮು-ಕಾಶ್ಮೀರಕ್ಕೆ ನೂತನ ಉಪರಾಜ್ಯಪಾಲರಾಗಿ ನೇಮಕವಾಗಿದ್ಧಾರೆ. ನಿನ್ನೆ ರಾತ್ರಿಯಷ್ಟೇ ಜಿ.ಸಿ. ಮುರ್ಮು ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

news18
Updated:August 6, 2020, 9:01 AM IST
ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹ ಜಮ್ಮು-ಕಾಶ್ಮೀರದ ನೂತನ ಉಪರಾಜ್ಯಪಾಲ
ಮನೋಜ್ ಸಿನ್ಹಾ
  • News18
  • Last Updated: August 6, 2020, 9:01 AM IST
  • Share this:
ನವದೆಹಲಿ(ಆ. 06): ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಇಂದು ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರು ಕಣಿವೆ ರಾಜ್ಯದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕವಾಗಿದ್ದಾರೆ. ನಿನ್ನೆಯಷ್ಟೇ ಜಿ.ಸಿ. ಮುರ್ಮು ಅವರು  ಉಪ ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆ ಕೂಡ ಅಂಗೀಕಾರವಾಗಿದೆ.

ನೂತನ ಉಪ ರಾಜ್ಯಪಾಲರಾಗಿ ನೇಮಕಗೊಂಡ ಬಳಿಕ ನ್ಯೂಸ್18 ಜೊತೆ ಮಾತನಾಡಿದ ಮನೋಜ್ ಸಿನ್ಹಾ, ತಮಗೆ ದೊಡ್ಡ ಹೊಣೆಗಾರಿಕೆ ಹೊರಿಸಲಾಗಿದ್ದು ಇವತ್ತು ಕಾಶ್ಮೀರಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಮನೋಜ್ ಸಿನ್ಹಾ ಅವರು ಮೋದಿ ಸರ್ಕಾರದ ಹಿಂದಿನ ಅವಧಿಯಲ್ಲಿ (2014-19) ಕೇಂದ್ರ ಸಚಿವರಾಗಿ ಟೆಲಿಕಾಂ ಖಾತೆ ಮೊದಲಾದವನ್ನು ನಿಭಾಯಿಸಿದ್ದರು. ಉತ್ತರ ಪ್ರದೇಶದ ಅವರು ಎರಡು ಬಾರಿ ಸಂಸದರಾಗಿದ್ದರು. ಆದರೆ, 2019ರ ಚುನಾವಣೆಯಲ್ಲಿ ಸೋಲಪ್ಪಿದ್ದರಿಂದ ಮೋದಿ-2 ಸರ್ಕಾರದಲ್ಲಿ ಅವರಿಗೆ ಮತ್ತೆ ಮಂತ್ರಿಯಾಗುವ ಅವಕಾಶ ತಪ್ಪಿತ್ತು. ಇದೀಗ ಇಡೀ ವಿಶ್ವದ ಕಣ್ಣು ನೆಟ್ಟಿರುವ ಜಮ್ಮು-ಕಾಶ್ಮೀರಕ್ಕೆ ಉಪರಾಜ್ಯಪಾಲರಾಗುವ ಮಹತ್ತರ ಜವಾಬ್ದಾರಿ ಅವರ ಹೆಗಲೇರಿದೆ.

ಇದನ್ನೂ ಓದಿ: GC Murmu: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​​ ಗವರ್ನರ್​​ ಗಿರೀಶ್​ ಚಂದ್ರ ಮುರ್ಮು ರಾಜೀನಾಮೆ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಲಡಾಖ್ ಅನ್ನು ಪ್ರತ್ಯೇಕ ಮಾಡಿ ತೆಗೆದುಕೊಂಡ ಕ್ರಮಕ್ಕೆ ಸರಿಯಾಗಿ ಒಂದು ವರ್ಷವಾಗಿದೆ. ಈ ಒಂದು ವರ್ಷ ಕಣಿವೆ ರಾಜ್ಯದಲ್ಲಿ ಅನೇಕ ನಿರ್ಬಂಧಗಳನ್ನ ವಿಧಿಸಲಾಗಿದೆ. ಅನೇಕ ರಾಜಕೀಯ ಮುಖಂಡರನ್ನ ಗೃಹ ಬಂಧನದಲ್ಲಿಡಲಾಗಿದೆ. ಈಗ ಅಲ್ಲಿ ಸಹಜ ಸ್ಥಿತಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈ ಹೊತ್ತಿನಲ್ಲಿ ಮನೋಜ್ ಸಿನ್ಹ ಆವರನ್ನ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿರುವುದು ಇದಕ್ಕೆ ಪೂರಕವಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಮನೋಜ್ ಸಿನ್ಹಾ ನೇಮಕವನ್ನು ಅನಿರೀಕ್ಷಿತವೆಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಕಳೆದ ರಾತ್ರಿಯಷ್ಟೇ ಒಂದೆರಡು ಹೆಸರುಗಳು ಕೇಳಿಬರುತ್ತಿದ್ದವು. ಅದರಲ್ಲಿ ಮನೋಜ್ ಸಿನ್ಹ ಹೆಸರು ಇರಲಿಲ್ಲ. ಈ ಸರ್ಕಾರ ಅನಿರೀಕ್ಷಿತ ಹೆಸರನ್ನು ಘೋಷಿಸುತ್ತದೆಂದು ಸಾಬೀತು ಮಾಡಿದೆ” ಎಂದು ಅಬ್ದುಲ್ಲಾ ಹೇಳಿದರು.

ಇದನ್ನೂ ಓದಿ: Mumbai Rain: ಮಹಾ ಮಳೆಗೆ ತತ್ತರಿಸಿದ ಮುಂಬೈ: 15 ವರ್ಷಗಳ ನಂತರ ಮತ್ತೆ ಎದುರಾಯ್ತು ಪ್ರವಾಹ ಭೀತಿಮನೋಜ್ ಸಿನ್ಹಾ ಅವರಿಗೆ ರಾಜಕಾರಣ ಮತ್ತು ಆಡಳಿತ ಎರಡರ ಅನುಭವವೂ ಇದೆ. ಇದರಿಂದ ಅವರು ಸಮರ್ಥವಾಗಿ ತಮ್ಮ ಹೊಣೆಗಾರಿಕೆ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದರು.

ಇನ್ನು, ನಿನ್ನೆ ರಾಜೀನಾಮೆ ನೀಡಿರುವ ಗಿರೀಶ್ ಚಂದ್ರ ಮುರ್ಮು ಅವರು ನೂತನ ಸಿಎಜಿಯಾಗಲಿದ್ದಾರೆ. ಹಾಲಿ ಸಿಎಜಿ ರಾಜೀವ್ ಮೆಹರಿಶಿ ಮುಂದಿನ ವಾರ ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಮುರ್ಮು ತುಂಬಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
Published by: Vijayasarthy SN
First published: August 6, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading