ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಮಾಜಿ ರಕ್ಷಣಾ ಕಾರ್ಯದರ್ಶಿ ಗೊಟಬಯ ರಾಜಪಕ್ಸ

ರಾಜಪಕ್ಸ ವಿರುದ್ಧ ಸ್ಪರ್ಧೆ ಮಾಡಿದ್ದ ವಸತಿ ಸಚಿವ ಸಜಿತ್ ಪ್ರೇಮದಾಸ ಅವರು ಶೇ.45.3ಮತ ಗಳಿಸದ್ದಾರೆ. ನವೆಂಬರ್ 16ರಂದು ನಡೆದ ಚುನಾವಣೆಯಲ್ಲಿ 15.99 ದಶಲಕ್ಷ ಮತದಾರರ ಪೈಕಿ ಶೇ.80ರಷ್ಟು ಮತದಾರರು ಮತ ಚಲಾಯಿಸಿದ್ದರು ಎಂದು ಚುನಾವಣಾ ಆಯೋಗದ ಅಧ್ಯಕ್ಷ ಮಹೀಂದ್ರ ದೇಶಪ್ರಿಯ ಹೇಳಿದ್ದಾರೆ.

ಗೋಟಾಬಯ ರಾಜಪಕ್ಸ

ಗೋಟಾಬಯ ರಾಜಪಕ್ಸ

  • Share this:
ನವದೆಹಲಿ: ನವೆಂಬರ್ 16ರಂದು ನಡೆದಿದ್ದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಗೊಟಬಯ ರಾಜಪಕ್ಸ ಅವರು ಗೆಲುವು ಸಾಧಿಸಿದ್ದಾರೆ.

70ರ ಹರೆಯದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆಗಿರುವ ರಾಜಪಕ್ಸ ಅವರ ಎಸ್​ಎಲ್​ಪಿಪಿ ಪಕ್ಷ ಶೇ.48.2ರಷ್ಟು ಮತಗಳನ್ನು ಗಳಿಸುವ ಮೂಲಕ ಗೆಲವು ದಾಖಲಿಸಿದೆ. ಇವರ ಪ್ರತಿಸ್ಪರ್ಧಿಯಾಗಿದ್ದ ಸಜಿತ್ ಪ್ರೇಮದಾಸ್ ಅವರ ಯುಎನ್​ಪಿ ಪಕ್ಷ ಶೇ.45.3 ಮತ ಗಳಿಸಿದೆ. ಸಜಿತ್ ಪ್ರೇಮದಾಸ್ ಅವರು ಇತ್ತೀಚೆಗೆ ಹತ್ಯೆಯಾದ ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಮಗನಾಗಿದ್ದಾರೆ.

ಫಲಿತಾಂಶದ ಬಳಿಕ ಮಾತನಾಡಿದ ಗೊಟಬಯ ಅವರ ವಕ್ತಾರ ಕೆಹೆಲಿಯಾ ರಂಬುಕ್​ವೆಲ್ಲಾ ಅವರು ಪ್ರತಿಕ್ರಿಯಿಸಿದ್ದು, ಇದು ಸ್ಪಷ್ಟ ಬಹುಮತವಾಗಿದ್ದು, ಇದನ್ನು ನಾವು ಎದುರು ನೋಡುತ್ತಿದ್ದೆವು. ಗೊಟಬಯ ಅವರು ನಮ್ಮ ಮುಂದಿನ ಅಧ್ಯಕ್ಷರಾಗುತ್ತಿರುವುದು ಖುಷಿ ತಂದಿದೆ ಎಂದು ಹೇಳಿರುವುದಾಗಿ ಎಎಫ್​ಪಿ ವರದಿ ಮಾಡಿದೆ.

ರಾಜಪಕ್ಸ ವಿರುದ್ಧ ಸ್ಪರ್ಧೆ ಮಾಡಿದ್ದ ವಸತಿ ಸಚಿವ ಸಜಿತ್ ಪ್ರೇಮದಾಸ ಅವರು ಶೇ.45.3ಮತ ಗಳಿಸದ್ದಾರೆ. ನವೆಂಬರ್ 16ರಂದು ನಡೆದ ಚುನಾವಣೆಯಲ್ಲಿ 15.99 ದಶಲಕ್ಷ ಮತದಾರರ ಪೈಕಿ ಶೇ.80ರಷ್ಟು ಮತದಾರರು ಮತ ಚಲಾಯಿಸಿದ್ದರು ಎಂದು ಚುನಾವಣಾ ಆಯೋಗದ ಅಧ್ಯಕ್ಷ ಮಹೀಂದ್ರ ದೇಶಪ್ರಿಯ ಹೇಳಿದ್ದಾರೆ.ಇದನ್ನು ಓದಿ: ಶ್ರೀಲಂಕಾದಲ್ಲಿ ನಾಳೆ ಅಧ್ಯಕ್ಷೀಯ ಚುನಾವಣೆ: ಕಣದಲ್ಲಿರುವ 35 ಅಭ್ಯರ್ಥಿಗಳಲ್ಲಿ ರಾಜಪಕ್ಸ ಮತ್ತು ಸಜಿತ್ ಮಧ್ಯೆ ತೀವ್ರ ಪೈಪೋಟಿ

ಗೋಟಬಯ ರಾಜಪಕ್ಸ ಅವರು ಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರ ಕಿರಿಯ ಸಹೋದರರಾಗಿದ್ದಾರೆ. ಶ್ರೀಲಂಕಾ ಪೊದುಜನ ಪೆರಮುನ (ಎಸ್​ಎಲ್​ಪಿಪಿ) ಪಕ್ಷದ ಗೋಟಬಯ ರಾಜಪಕ್ಸ ಅವರ ಗೆಲುವಿಗೆ ಚುನಾವಣಾ ಪ್ರಚಾರದ ಅಂಶವೇ ಕಾರಣ ಎನ್ನಲಾಗುತ್ತಿದೆ. ಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿಯೂ ಆಗಿದ್ದ ಗೋಟಬಯ ರಾಜಪಕ್ಸ ಅವರು ದೇಶದ ಭದ್ರತೆ ಮತ್ತು ಐಕ್ಯತೆಯ ಹೆಸರಿನಲ್ಲಿ ಮತದಾರರ ಬೆಂಬಲ ಗಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಲಂಕಾದಲ್ಲಿ ಈಸ್ಟರ್ ಹಬ್ಬದ ದಿನದಂದು ನಡೆದಿದ್ದ ಬಾಂಬ್ ದಾಳಿ ಘಟನೆಯೇ ರಾಜಪಕ್ಸಗೆ ಪ್ರಮುಖ ಅಸ್ತ್ರವಾಯಿತು. ಯುಎನ್​ಪಿ ಪಕ್ಷದಿಂದ ದೇಶಕ್ಕೆ ಸಮರ್ಥ ಭದ್ರತಾ ವ್ಯವಸ್ಥೆ ಒದಗಿಸಲು ಸಾಧ್ಯವಿಲ್ಲ. ಉಗ್ರಗಾಮಿಗಳನ್ನು ಸದೆಬಡಿಯಲು ಯುಎನ್​ಪಿ ಅಸಮರ್ಥವಾಗಿದೆ ಎಂಬ ವಾದವನ್ನು ಅವರು ಜನರ ಮುಂದಿಟ್ಟಿದ್ದರು.

First published: