Uddhav Thackeray: ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿಯ ಗುಲಾಮ: ಉದ್ಧವ್ ಠಾಕ್ರೆ ಆಕ್ರೋಶ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಕಳೆದ ಎರಡು ದಿನಗಳ ಹಿಂದೆ ಬಿಲ್ಲು ಮತ್ತು ಬಾಣದ ಗುರುತಿನ ಶಿವಸೇನೆ ಪಕ್ಷದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ಆ ಮೂಲಕ 1966 ರಲ್ಲಿ ಉದ್ಧವ್ ಠಾಕ್ರೆ ತಂದೆ ಬಾಳ್ ಠಾಕ್ರೆ ಅವರು ನಿರ್ಮಿಸಿದ್ದ ಪಕ್ಷದ ಗುರುತು ಸಿಎಂ ಏಕನಾಥ್‌ ಶಿಂಧೆ ಅವರ ಪಾಲಾಗಿತ್ತು.

ಮುಂದೆ ಓದಿ ...
  • Share this:

ಮುಂಬೈ: ಮಹಾರಾಷ್ಟ್ರದ (Maharashtra) ಶಿವಸೇನೆ (Shiv Sena party) ಪಕ್ಷದ ‘ಬಿಲ್ಲು-ಬಾಣ’ ಗುರುತಿನ ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗ (Election Commission) ಏಕನಾಥ್ ಶಿಂಧೆ (Eknath Shinde) ಬಣಕ್ಕೆ ನೀಡುವಂತೆ ಆದೇಶ ನೀಡಿದ ನಂತರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಚುನಾವಣಾ ಆಯೋಗದ ವಿರುದ್ಧ ವಾಕ್ಸಮರ ಆರಂಭಿಸಿದ್ದಾರೆ. ಠಾಕ್ರೆ ಕುಟುಂಬದ ‘ಮಾತೋಶ್ರೀ’ ನಿವಾಸ ಮುಂದೆ ಜಮಾಯಿಸಿದ್ದ ಅಸಂಖ್ಯಾತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ (Uddhav Thackeray) ಕೇಂದ್ರ ಸರ್ಕಾರ ಮತ್ತು ಎಲೆಕ್ಷನ್ ಕಮಿಷನ್ ವಿರುದ್ಧ ಕಿಡಿಕಾರಿದರು.


ತಮ್ಮ ಕಾರ್‌ನ ಸನ್‌ರೂಫ್‌ನಿಂದಲೇ ಹೊರಗೆ ಸೇರಿದ್ದ ಅಸಂಖ್ಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಕೇಂದ್ರ ಚುನಾವಣಾ ಆಯೋಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಗುಲಾಮತನದಲ್ಲಿದ್ದು, ಈ ಹಿಂದೆಂದೂ ನಡೆಯದ ರೀತಿಯಲ್ಲಿ ಅದು ವರ್ತಿಸುತ್ತಿದೆ. ನೀವು ತಾಳ್ಮೆ ಕೆಡದಿರಿ. ಮುಂಬರುವ ಬಿಎಂಸಿ ಚುನಾವಣೆಗೆ ಈಗಿಂದಲೇ ಸಿದ್ಧರಾಗಿ ಎಂದು ಉದ್ಧವ್ ಠಾಕ್ರೆ ಕಾರ್ಯಕರ್ತರಿಗೆ ಕರೆ ನೀಡಿದರು. ಅಲ್ಲದೇ ಅದೇ ವೇಳೆ ಕಾರ್ಯಕರ್ತರತ್ತ ಅವರ ತಂದೆ ಬಾಳ್ ಠಾಕ್ರೆ ಅವರ ಚಿತ್ರವನ್ನು ತೋರಿಸಿದರು.


ಇದನ್ನೂ ಓದಿ: Shiv Sena Symbol: ಶಿವಸೇನೆ ಚಿಹ್ನೆ ಕಳೆದುಕೊಂಡ ಉದ್ಧವ್‌ ಠಾಕ್ರೆಗೆ ಶರದ್ ಪವಾರ್ ಕೊಟ್ಟ ಸಲಹೆಯೇನು?


ಇನ್ನು ನಮ್ಮ ಶಿವಸೇನೆ ಪಕ್ಷದ ‘ಬಿಲ್ಲು-ಬಾಣ’ ಗುರುತಿನ ಚಿಹ್ನೆಯನ್ನು ಕದ್ದಿರುವ ಕಳ್ಳನಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಉದ್ಧವ್ ಠಾಕ್ರೆ, ನೀವು ಸಂಯಮದಿಂದ ವರ್ತಿಸಬೇಕು. ತಾಳ್ಮೆಯನ್ನು ಕೆಡದಿರಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.


ಕಳೆದ ಎಂಟು ತಿಂಗಳಿಂದ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮಧ್ಯೆ ಪಕ್ಷದ ಚಿಹ್ನೆಗಾಗಿ ನಡೆಯುತ್ತಿದ್ದ ಕಾದಾಟಕ್ಕೆ ಚುನಾವಣಾ ಆಯೋಗ ಬ್ರೇಕ್ ನೀಡಿತ್ತು. ಕಳೆದ ಎರಡು ದಿನಗಳ ಹಿಂದೆ ಬಿಲ್ಲು ಮತ್ತು ಬಾಣದ ಗುರುತಿನ ಶಿವಸೇನೆ ಪಕ್ಷದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ಆ ಮೂಲಕ 1966 ರಲ್ಲಿ ಉದ್ಧವ್ ಠಾಕ್ರೆ ತಂದೆ ಬಾಳ್ ಠಾಕ್ರೆ ಅವರು ನಿರ್ಮಿಸಿದ್ದ ಪಕ್ಷದ ಗುರುತು ಸಿಎಂ ಏಕನಾಥ್‌ ಶಿಂಧೆ ಅವರ ಪಾಲಾಗಿತ್ತು.


ಇದನ್ನೂ ಓದಿ: Shiv Sena Symbol Row: ಶಿಂಧೆ ಬಣದ ಪಾಲಾಯ್ತು ಶಿವಸೇನೆ ಬಿಲ್ಲು-ಬಾಣ! ಉದ್ಧವ್​ ಠಾಕ್ರೆಗೆ ಹಿನ್ನಡೆ, ಸಿಎಂ ಏಕನಾಥ್‌ಗೆ ಗೆಲುವು


ಕೇಂದ್ರ ಚುನಾವಣಾ ಆಯೋಗ ನೀಡಿರುವ ತೀರ್ಪಿನಿಂದ ಅಸಮಾಧಾನಗೊಂಡಿರುವ ಉದ್ಧವ್ ಠಾಕ್ರೆ ಬಣ, ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದು, ಹೀಗಾಗಿ ಪಕ್ಷದ ಗುರುತಿನ ಚಿಹ್ನೆಯ ವಿವಾದ ಇನ್ನೂ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್‌ ಈ ಪ್ರಕರಣದ ಬಗ್ಗೆ ಏನು ತೀರ್ಪು ನೀಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.


ಕಳೆದ ವರ್ಷ ಜೂನ್‌ ತಿಂಗಳಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆಯ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಶಿವಸೇನೆಯ ಏಕನಾಥ್ ಶಿಂಧೆ ಬಣದ 40 ಶಾಸಕರು ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಿದರು. ಆ ಮೂಲಕ ಬಿಜೆಪಿಯ ಗೇಮ್ ಪ್ಲಾನ್‌ನಂತೆ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವನ್ನು ಉರುಳಿಸುವಲ್ಲಿ ಬಂಡಾಯಗಾರರು ಯಶಸ್ವಿಯಾಗಿದ್ದರು.


ಇದನ್ನೂ ಓದಿ: Crime news: ಮುಂಬೈನಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ: ಬೀದಿಜಗಳದಿಂದ ದಂಧೆಯ ಅಸಲಿ ಕಹಾನಿ ಬಹಿರಂಗ!

Published by:Avinash K
First published: